Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ರಾಜಸ್ಥಾನ ರಾಯಲ್ಸ್ ತಂಡ ಸೇರಿದ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನಗಳು ಹೊರ ಬೀಳಲಿವೆ. ಇದಕ್ಕೂ ಮುನ್ನ ತಂಡಗಳ ಕೋಚಿಂಗ್ ಸ್ಟಾಫ್‌ನಲ್ಲಿ ಬದಲಾವಣೆ ಕಾಣುತ್ತಿದೆ. ಇತ್ತೀಚಿಗೆ ರಾಜಸ್ಥಾನ ರಾಯಲ್ಸ್ ತಂಡದ ಕೋಚಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡ ರಾಹುಲ್‌ ದ್ರಾವಿಡ್‌, ತಮ್ಮ ಕ್ಯಾಂಪ್‌ಗೆ ನೂತನ ಸದಸ್ಯರನ್ನು ಬರ ಮಾಡಿಕೊಂಡಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತಂಡದ ಬ್ಯಾಟಿಂಗ್ ಕೋಚ್‌ ಆಗಿ ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸೇರಿಕೊಂಡಿದ್ದಾರೆ. ಟಿ20 ವಿಶ್ವಕಪ್‌ ವಿಜೇತ ತಂಡದ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿರುವ ರಾಥೋರ್‌, ಈಗ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ. ಟಿ20 ವಿಶ್ವಕಪ್‌ ಮುಗಿದ ಬಳಿಕ ಕೋಚಿಂಗ್‌ ಸಿಬ್ಬಂದಿಗಳ ಒಪ್ಪಂದವು ಕೊನೆಗೊಂಡಿತ್ತು.

Rajasthan Royals Hire Former India Coach Before IPL 2025 Auction Following Rahul Dravid s Lead

ವಿಕ್ರಮ್‌ ಹೇಳಿದ್ದೇನು?

ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್‌ ಆಗಿ ನೇಮಕಗೊಳ್ಳುತ್ತಿದ್ದಂತೆ ರಾಥೋರ್ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ರಾಯಲ್ಸ್‌ ಕುಟುಂಬ ಸೇರಿದ್ದು ಖುಷಿಯ ವಿಚಾರ. ರಾಹುಲ್ ದ್ರಾವಿಡ್ ಅವರ ಜೊತೆ ಕೆಲಸ ಮಾಡುವ ಅವಕಾಶ ಮತ್ತೆ ಸಿಕ್ಕಿದೆ. ಯುವ ಆಟಗಾರರೊಂದಿಗೆ ಸಮಯ ಕಳೆಯಲು ಖುಷಿ ಆಗುತ್ತದೆ. ತಂಡ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ತಿಳಿಸಿದ್ದಾರೆ.

ವಿಕ್ರಮ್ ರಾಥೋರ್‌ ಅವರು ಭಾರತದ ಪರ ಆರು ಟೆಸ್ಟ್‌, ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಬಳಿಕ ವಿಕ್ರಮ್ ರಾಥೋರ್ ಅವರು ಬ್ಯಾಟಿಂಗ್ ಕೋಚ್‌ ಕಡೆಗೆ ಮುಖ ಮಾಡಿದರು. ಇವರ ಉಪಯುಕ್ತ ಸಲಹೆಗಳನ್ನು ಪಡೆದು ಟೀಮ್ ಇಂಡಿಯಾದ ಯುವ ಬ್ಯಾಟರ್‌ಗಳ ತಮ್ಮ ಬ್ಯಾಟಿಂಗ್‌ ತಂತ್ರ ಸುಧಾರಿಸಿಕೊಳ್ಳಲು ಇವರು ಸಹಾಯ ಮಾಡಿದ್ದಾರೆ.

ವಿಕ್ರಮ್‌ ಜೊತೆಗೆ ಕೆಲಸ ಮಾಡುವುದು ಖುಷಿಯ ವಿಚಾರ. ಭಾರತ ತಂಡ ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಇವರ ಶ್ರಮಿಸಿದ್ದಾರೆ. ಇವರು ಯುವ ಬ್ಯಾಟರ್‌ಗಳಿಗೆ ಮನದಟ್ಟು ಆಗುವ ಹಾಗೆ ತಿಳಿಸುತ್ತಾರೆ. ಇವರ ಅನುಭವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಹಾಯಕವಾಗುತ್ತದೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

Rajasthan Royals Hire Former India Coach Before IPL 2025 Auction Following Rahul Dravid s Lead

ವಿಕ್ರಮ್‌ ಸಾಧನೆ

ಟೀಮ್ ಇಂಡಿಯಾ ಪರ ರಾಹುಲ್‌ ದ್ರಾವಿಡ್, ವಿಕ್ರಮ್‌ ರಾಥೋರ್‌ ಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ವಿಕ್ರಮ್ ರಾಥೋರ್ ಅವರು ಪಂಜಾಬ್, ಹಿಮಾಚಲ್ ಪ್ರದೇಶ ತಂಡಕ್ಕೂ ಕೋಚ್ ಮಾಡಿರುವ ಅನುಭವ ಹೊಂದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಪರ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ನ್ಯೂಜಿಲೆಂಡ್ ತಂಡದ ಕ್ಯಾಂಪ್‌ನ್ನು ಕೆಲವು ದಿನ ಸೇರಿದ್ದರು.

Story first published: Friday, September 20, 2024, 14:37 [IST]
Other articles published on Sep 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+