ಐಪಿಎಲ್ 2021ರ 3ನೇ ಶತಕ ಚಚ್ಚಿದ ರಾಜಸ್ಥಾನ್‌ನ ಜೋಸ್ ಬಟ್ಲರ್

ನವದೆಹಲಿ: ರಾಜಸ್ಥಾನ್ ರಾಯಲ್ಸ್‌ನ ಅನುಭವಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಲ್ಲಿ 3ನೇ ಶತಕ ದಾಖಲಿಸಿದ್ದಾರೆ. ಭಾನುವಾರ (ಮೇ 2) ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬಟ್ಲರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 28ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನಿಂದ ಆರಂಭಿಕರಾಗಿ ಬಂದಿದ್ದ ಜೋಸ್ ಬಟ್ಲರ್ 64 ಎಸೆತಗಳಲ್ಲಿ 124 ರನ್ ಗಳಿಸಿದರು. ಇದರಲ್ಲಿ 11 ಫೋರ್ಸ್, 8 ಸಿಕ್ಸರ್ ಸೇರಿತ್ತು. ಇದು ಐಪಿಎಲ್‌ನಲ್ಲಿ ಬಟ್ಲರ್ ಬಾರಿಸಿದ ಮೊದಲ ಶತಕ.
65ನೇ ಐಪಿಎಲ್ ಪಂದ್ಯ ಆಡಿದ ಬಟ್ಲರ್ 1968 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕ, 1 ಶತಕದ ದಾಖಲೆ ಸೇರಿದೆ. ಐಪಿಎಲ್ 2021ರ ಸೀಸನ್‌ನಲ್ಲಿ ಈವರೆಗೆ ರಾಜಸ್ಥಾನ್‌ನ ಸಂಜು ಸ್ಯಾಮ್ಸನ್, ಬಟ್ಲರ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದೇವದತ್ ಪಡಿಕ್ಕಲ್ ಶತಕ ಬಾರಿಸಿದಂತಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್, ಬಟ್ಲರ್ 124, ಯಶಸ್ವಿ ಜೈಸ್ವಾಲ್ 12, ಸಂಜು ಸ್ಯಾಮ್ಸನ್ 48, ರಿಯಾನ್ ಪರಾಗ್ 15, ಡೇವಿಡ್ ಮಿಲ್ಲರ್ 7 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 220 ರನ್ ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications