
ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯಲಿದೆ. ಹೀಗಾಗಿ ಇಂದಿನಿಂದ ಐಪಿಎಲ್ ತಂಡಗಳು ಯುಎಇಯತ್ತ ಒಂದೊಂದಾಗಿ ಪ್ರಯಾಣವನ್ನು ನಡೆಸಲಿದೆ. ಇಂದು ಒಂದೇ ದಿನ ಮೂರು ತಂಡಗಳು ದುಬೈಗೆ ಪ್ರಯಾಣವನ್ನು ಬೆಳೆಸುತ್ತಿದೆ.
ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಈಗಾಲೇ ದೆಹಲಿಯಿಂದ ಪ್ರಯಾಣವನ್ನು ಬೆಳೆಸಿದೆ. ಮೂಲಗಳ ಪ್ರಕಾರ ಡೆಲ್ಲಿ ತಂಡ ಬೆಂಗಳೂರಿಗೆ ಮೊದಲು ಆಗಮಿಸಿ ಬೆಂಗಳೂರಿನಿಂದ ಯುಎಇಗೆ ಪ್ರಯಾಣವನ್ನು ಬೆಳಸಲಿದೆ. ದೆಹಲಿಯಿಂದ ಈಗಾಗಲೇ ಪ್ರಯಾಣವನ್ನು ಕೈಗೊಂಡಿರುವ ಬಗ್ಗೆ ಮೊಹಮದ್ ಶಮಿ ಪ್ರಯಾಣದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಯುಎಇಗೆ ಇಂದು ಪ್ರಯಾಣವನ್ನು ಬೆಲೆಸುತ್ತಿರುವ ತಂಡಗಳೆಂದರೆ ರಾಜಸ್ಥಾನ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್. ತಂಡದಲ್ಲಿರುವ ಭಾರತದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳು ಇಂದು ಪ್ರಯಾಣವನ್ನು ಬೆಳೆಸುತ್ತಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ರತ್ಯೇಕ ಚಾರ್ಟೆಡ್ ವಿಮಾನಗಳ ಮೂಲಕ ಇಂದು ದುಬೈಗೆ ಪ್ರಯಾಣಿಸುತ್ತಿದೆ. ಎರಡು ತಂಡಗಳು ಕೂಡ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಯುಎಇಗೆ ಹಾರಾಟವನ್ನು ನಡೆಸಲಿದೆ ಎಂದು ಮಾಹಿತಿ ದೊರಕಿದೆ. ಆದರೆ ತಂಡಗಳ ಹೊರಡು ಸಮಯಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮುಂದಿನ ಎರಡು ದಿನಗಳ ಅಂತರದಲ್ಲಿ ಎಲ್ಲಾ ತಂಡಗಳು ಕೂಡ ಯುಎಇಯನ್ನು ತಲುಪಲಿದೆ. ಮುಂಬೈ ಇಂಡಿಯನ್ಸ್ ಮುಂಬೈ ವಿಮಾನ ನಿಲ್ದಾಣದಿಂದ ಹಾಗೂ ಆರ್‌ಸಿಬಿ ತಂಡ ಬೆಂಗಳೂರಿನಿಂದ ಪ್ರಯಾಣವನ್ನು ನಡೆಸಲಿದೆ. ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡ ಯುಎಇಗೆ ಪ್ರಯಾಣವನ್ನು 21 ಹಾಗೂ 22ರಂದು ನಡೆಸಲಿದೆ.