For Quick Alerts
ALLOW NOTIFICATIONS  
For Daily Alerts
 

IPL 2025 Rajasthan Royals: ಸ್ಟಾರ್ ಆಟಗಾರರನ್ನು ಬಿಟ್ಟು ಕೈ ಕೈ ಹಿಸುಕಿಕೊಳ್ಳುತ್ತಿರುವ ರಾಯಲ್ಸ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನ ಕುತೂಹಲ ಎಲ್ಲಡೆ ಮನೆ ಮಾಡಿದೆ. ಈ ಬಾರಿ ಮೆಗಾ ಹರಾಜು ನಡೆಯಲಿದ್ದು ಎಲ್ಲರ ಚಿತ್ತ ಕದ್ದಿದೆ. ಈ ಹರಾಜಿಗೂ ಮುನ್ನ ಐಪಿಎಲ್‌ ಎಲ್ಲ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಆಟಗಾರರನ್ನು ಹಾಗೂ ಕೈ ಬಿಟ್ಟ ಆಟಗಾರರನ್ನು ಬಿಸಿಸಿಐಗೆ ನೀಡಿದೆ. ಇದೇ ವೇಳೆ ರಾಜಸ್ಥಾನ ರಾಯಲ್ಸ್‌ ತಂಡ ಸಹ ತನ್ನ ಪಟ್ಟಿಯನ್ನು ನೀಡಿತ್ತು. ಈಗ ರಾಜಸ್ಥಾನ ಆ ಸ್ಟಾರ್ ಪ್ಲೇಯರ್‌ನ ಭರ್ಜರಿ ಆಟವನ್ನು ಕಂಡು ಕೈ ಕೈ ಹಿಸುಕಿಕೊಳ್ಳುವಂತೆ ಆಗಿದೆ.

ರಾಜಸ್ಥಾನ ರಾಯಲ್ಸ್‌ ಪರ ರಾಜನಂತೆ ಮೆರೆದ ಆಟಗಾರ ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌. ಇವರು ಐಪಿಎಲ್ ನಲ್ಲಿ ತಮ್ಮದೇ ಬ್ಯಾಟಿಂಗ್ ಛಾಪು ಮೂಡಿಸಿದ ಆಟಗಾರ. ಆರಂಭಿಕನಾಗಿ ತಾವು ಪ್ರತಿನಿಧಿಸಿದ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್‌. ಈ ಪ್ಲೇಯರ್‌ನನ್ನು ರಾಜಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ರಾಯಲ್ಸ್‌ ತಂಡ ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌, ರಿಯಾನ್ ಪರಾಗ್‌, ಸಂದೀಪ್‌ ಶರ್ಮಾ, ಶಿಮ್ರಾನ್ ಹೆಟ್ಮಯೆರ್‌, ಧೃವ್ ಜುರೇಲ್ ಅವರನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಆದರೆ ಬಟ್ಲರ್‌ ಅವರಿಗೆ ಗೇಟ್ ಪಾಸ್ ನೀಡಿದೆ. ಆದರೆ ವೆಸ್ಟ್‌ ಇಂಡೀಸ್‌ ವಿರುದ್ಧ ನೀಡಿರುವ ಪ್ರದರ್ಶನ ನೋಡಿದ ಮೇಲೆ ರಾಜಸ್ಥಾನಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ.

Rajasthan Royals May Regret Releasing Jos Buttler Ahead of IPL 2025 as He Makes a Stunning Comeback

ಐಪಿಎಲ್‌ನಲ್ಲಿ ಸಾಧನೆ

ಜೋಸ್‌ ಬಟ್ಲರ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದ ಪ್ಲೇಯರ್. ಇವರು ಕಳೆದ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 359 ರನ್‌ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಸೇರಿವೆ. ಒಟ್ಟಾರೆ ಐಪಿಎಲ್‌ನಲ್ಲಿ ಬಟ್ಲರ್‌ ಆಡಿದ 107 ಪಂದ್ಯಗಳಲ್ಲಿ 38.11ರ ಸರಾಸರಿಯಲ್ಲಿ 3582 ರನ್‌ ಸಿಡಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 19 ಅರ್ಧಶತಕ ಸೇರಿವೆ. ಈ ಧಮಾಕೆದಾರ್‌ ಬ್ಯಾಟರ್‌ನನ್ನು ರಾಜಸ್ಥಾನ ಕೈ ಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಅಭಿಮಾಣಿಗಳಲ್ಲಿ ಮೂಡಿದೆ.

ಇಂಗ್ಲೆಂಡ್‌ಗೆ ಜಯ

ಸದ್ಯ ಇಂಗ್ಲೆಂಡ್ ತಂಡ ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿದೆ. ಈ ವೇಳೆ ಭಾನುವಾರ ಎರಡನೇ ಟಿ20 ಪಂದ್ಯವನ್ನು ಆಡಲಾಯಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 158 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್‌ 14.5 ಓವರ್‌ಗಳಲ್ಲಿ 3 ವಿಕೆಟ್‌ಗೆ 161 ರನ್‌ ಕಲೆ ಹಾಕಿ ಗೆಲುವು ದಾಖಲಿಸಿತು.

Rajasthan Royals May Regret Releasing Jos Buttler Ahead of IPL 2025 as He Makes a Stunning Comeback

ಬಟ್ಲರ್‌ ಬಿರುಸಿನ ಬ್ಯಾಟಿಂಗ್

ವಿಂಡೀಸ್‌ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭ ಕಳಪೆ ಆಗಿತ್ತು. ಫಿಲ್ ಸಾಲ್ಟ್‌ ಸೊನ್ನೆ ಸುತ್ತಿದರು. ಎರಡನೇ ವಿಕೆಟ್‌ಗೆ ವಿಲ್ ಜಾಕ್ಸ್‌ ಹಾಗೂ ಜೋಸ್ ಬಟ್ಲರ್ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧರವಾದರು. ವಿಲ್‌ ಜಾಕ್ಸ್‌ 38 ರನ್‌ಗಳಿಗೆ ಆಟ ಮುಗಿಸಿದರು. ಜೋಸ್ ಬಟ್ಲರ್‌ ಈ ಪಂದ್ಯದಲ್ಲಿ ತಮ್ಮ ಅಬ್ಬರದ ಆಟವನ್ನು ಪ್ರದರ್ಶಿಸಿದರು. ಇವರು 45 ಎಸೆತಗಳಲ್ಲಿ 8 ಬೌಂಡರಿ, 6 ಮುಗಿಲೆತ್ತರದ ಸಿಕ್ಸರ್ ಸಹಾಯದಿಂದ 83 ರನ್‌ ಸಿಡಿಸಿ ಔಟ್ ಆದರು.

ಜೋಸ್‌ ಬಟ್ಲರ್ ಇವರ ಈ ಇನಿಂಗ್ಸ್‌ ಐಪಿಎಲ್ ಮಾಲೀಕರ ಚಿತ್ತ ಕದ್ದಿದೆ. ಇವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸಬಲ್ಲರು. ಇವರಿಗೂ ಈ ಬಾರಿಯ ಹರಾಜಿನಲ್ಲಿ ಜಾಕ್‌ಪಾಟ್ ಹೊಡೆಯುವ ಸಾಧ್ಯತೆ ಇದೆ.

Story first published: Monday, November 11, 2024, 13:49 [IST]
Other articles published on Nov 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+