Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rajasthan Royals ಮಾಲೀಕತ್ವಕ್ಕೆ ಬಿಗ್ ಟ್ವಿಸ್ಟ್: ಕಾನೂನು ಸಮರಕ್ಕೆ ಮುಂದಾದ ಸೋಮಾನಿ

ರಾಜಸ್ಥಾನ್ ರಾಯಲ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಚಾಂಪಿಯನ್ ಪಟ್ಟದ ಆಸೆಯನ್ನು ಚಿಗುರಿಸಿದೆ. ಆದರೆ ಈಗ ಫ್ರಾಂಚೈಸಿಯ ಮಾಲೀಕತ್ವದ ಬಗ್ಗೆ ಜಗಳ ನಡೆಯುತ್ತಿದೆ. ಲಕ್ಷ್ಮಿ ಎನ್. ಮಿತ್ತಲ್ ಮತ್ತು ಆದಿತ್ಯ ಮಿತ್ತಲ್, ಅದರ್ ಪೂನವಲ್ಲಾ ಅವರೊಂದಿಗೆ ಆರ್‌ಆರ್‌ ತಂಡವನ್ನು ಖರೀದಿಸಿದ್ದರು. ಮೂಲಗಳ ಪ್ರಕಾರ ಇವರು 1.65 ಬಿಲಿಯನ್ ಡಾಲರ್‌ಗೆ ತಂಡವನ್ನು ಖರೀದಿಸಿದ್ದರು. ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 15,660 ಕೋಟಿ ರೂ. ಸಮನಾಗಿದೆ. ಇನ್ನು ಆರ್‌ಆರ್‌ ತಂಡದ ಶೇಕಡಾ 75 ಪ್ರತಿಶತ ಶೇರುಗಳನ್ನು ಮಿತ್ತಲ್‌ ಕುಟುಂಬವೇ ಉಳಿಸಿಕೊಂಡಿದೆ.

ಆರ್‌ಆರ್‌ ಫ್ರಾಂಚೈಸಿಯ 18 ಪ್ರತಿಶತ ಶೇರುಗಳನ್ನು ಅದರ್ ಪೂನವಲ್ಲಾ ಹೊಂದಿದ್ದರು. ಉಳಿದ 7 ಪ್ರತಿಶತವು ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಉಳಿಯುತ್ತದೆ ಎಂದು ವರದಿಯಾಗಿದೆ. ಕಲ್ ​​ಸೋಮಾನಿ ನೇತೃತ್ವದ ಒಕ್ಕೂಟವು ಸಂಪೂರ್ಣ ಒಪ್ಪಂದದ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದೆ.

Rajasthan Royals

ಸೋಮಾನಿ ಗ್ರೂಪ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಾರಾಟ ಮಾಡಿದ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಶ್ನಿಸಿದೆ. ಆರ್‌ಆರ್‌ ತಂಡವನ್ನು ಸ್ವಾಧೀನಪಡಿಸಿಕೊಳ್ಳಲು ಸೋಮಾನಿ ಗ್ರೂಪ್‌ ಕಳೆದ 10 ದಿನಗಳಿಂದ ಆರ್‌ಆರ್‌ ತಂಡದ ಒಪ್ಪಂದವನ್ನು ಅಂತಿಮಗೊಳಿಸಲು ಕಾಯುತ್ತಿದ್ದೆವು. ಆದರೆ ನಮಗೆ ಮೋಸ ಆಗಿದೆ. ಮಿತ್ತಲ್ ಕುಟುಂಬದವರು ಹಿಂಬಾಗಿಲಿನಿಂದ ಹೋಗಿ ರಾಯಲ್ಸ್‌ ತಂಡವನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಸಂಸ್ಥೆ ಆರೋಪಿಸಿದೆ. ಸೋಮಾನಿ ಗ್ರೂಪ್‌ ಈ ಬಗ್ಗೆ ಫ್ರಾಂಚೈಸಿಗೆ ನೋಟಿಸ್‌ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಬಗ್ಗೆ ಬಿಸಿಸಿಐಗೂ ಮಾಹಿತಿ ನೀಡಲಾಗಿದೆ ಎಂದು ಸೋಮಾನಿ ಗ್ರೂಪ್‌ ತಿಳಿಸಿದೆ.

ಸೋಮಾನಿ ಮಾಡುತ್ತಿರುವ ಆರೋಪ ಏನು?

ಕಲ್ ಸೋಮಾನಿ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಉದ್ಯಮಿ ರಾಬ್ ವಾಲ್ಟನ್ ಮತ್ತು ಹ್ಯಾಂಪ್ ಕುಟುಂಬದೊಂದಿಗೆ ಸೇರಿಕೊಂಡು ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ್ ತಂಡದ ಖರೀದಿಗೆ ಮುಂದಾಗಿದ್ದರು. ಈ ಬಗ್ಗೆ ಮಾತುಕತೆ ನಡೆಯುತ್ತಿರುವಾಗಲೇ ಉದ್ದೇಶ ಪೂರಕವಾಗಿ ಒಪ್ಪಂದವನ್ನು ವಿಳಂಬ ಮಾಡಲಾಗಿದೆ ಎಂದು ಸೋಮಾನಿ ಗ್ರೂಪ್‌ ಹೇಳಿದೆ. ಆದರೆ ಮೂಲಗಳ ಪ್ರಕಾರ ಕಲ್‌ ಸೋಮಾನಿ ಒಕ್ಕೂಟ ನಿಗದಿತ ಸಮಯದಲ್ಲಿ ಹಣ ಪಾವತಿಸುವಲ್ಲಿ ವಿಫಲವಾಗಿತ್ತು ಎಂದು ವರದಿಗಳು ಬಂದಿವೆ. ಆದರೆ ಈ ವರದಿಗಳ ವಿರುದ್ಧ ಸೋಮಾನಿ ಗ್ರೂಪ್‌ ಹರಿಹಾಯ್ದಿದೆ. ಆರ್‌ಆರ್‌ ಜೊತೆಗಿನ ಒಪ್ಪಂದವನ್ನು ಅಂತಿಮಗೊಳಿಸಲು ಎಲ್ಲ ಸಿದ್ಧತೆಗಳು ನಡೆದಿದ್ದವು ಎಂದು ತಿಳಿಸಿದೆ.

ಯಾರು ಈ ಕಲ್‌ ಸೋಮಾನಿ?

ಕಲ್ ಸೋಮಾನಿ ಯುಎಸ್ ಮೂಲದ ಉದ್ಯಮಿಯಾಗಿದ್ದು, ಕೃತಕ ಬುದ್ಧಿಮತ್ತೆ, ಜಾಹೀರಾತು-ತಂತ್ರಜ್ಞಾನ ಮತ್ತು ಡೇಟಾ ಗೌಪ್ಯತೆಯಲ್ಲಿ 15 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಅವರು ಇಂಟ್ರಾಎಡ್ಜ್ ಮತ್ತು ಟ್ರುಯೊದ ಸ್ಥಾಪಕರಾಗಿದ್ದಾರೆ. ಅವರು ಕ್ರೀಡಾ ಉದ್ಯಮದಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯವು $110 ಬಿಲಿಯನ್‌ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ.

Story first published: Tuesday, May 5, 2026, 15:18 [IST]
Other articles published on May 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+