ನವೆಂಬರ್ 24 ಹಾಗೂ 25 ರಂದು ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರ ಹೆಸರುಗಳು ಕೇಳಿ ಬರಲಿವೆ. ಐಪಿಎಲ್ ಟೂರ್ನಿಯಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿರುವ ಸ್ಟಾರ್ ಆಟಗಾರರನ್ನು ಆಯಾ ಮಾಲೀಕರು ರಿಲೀಸ್ ಮಾಡಿದ್ದಾರೆ. ರಿಟೇನ್ಷನ್ ಲೀಸ್ಟ್ ಎಲ್ಲ ತಂಡಗಳು ಬಿಸಿಸಿಐಗೆ ನೀಡಿದಾಗ ರಾಜಸ್ಥಾನ ರಾಯಲ್ಸ್ ಸಹ ನೀಡಿತು. ಆಗ ಎಲ್ಲರೂ ಕುತೂಹಲದಿಂದ ಈ ಪಟ್ಟಿಯನ್ನು ನೋಡಿದರು. ಏಕೆಂದರೆ ಕೈ ಬಿಟ್ಟ ಆಟಗಾರರನ್ನು ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದರು.
ರಾಜಸ್ಥಾನ ತಂಡ ರಿಲೀಸ್ ಮಾಡಿದ ಆಟಗಾರರ ಪಟ್ಟಿಯಲ್ಲಿ ಮೂವರು ಸ್ಟಾರ್ ಆಟಗಾರರಿಗೆ ಸ್ಥಾನ ನೀಡಿರಲಿಲ್ಲ. ಹೀಗಾಗಿ ಎಲ್ಲರೂ ಅಚ್ಚರಿ ಮೂಡಿಸಿದ್ದರು. ರಾಜಸ್ಥಾನ ರಾಯಲ್ಸ್ ಆರು ಆಟಗಾರರಿಗೆ 75 ಕೋಟಿ ನೀಡಿದೆ. ಉಳಿದ ಹಣದಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಅನಿವಾರ್ಯತೆ ರಾಜಸ್ಥಾನ ಮುಂದಿದೆ. ರಾಜಸ್ಥಾನ ಕೈ ಬಿಟ್ಟ ಮೂವರು ಆಟಗಾರರಿಗೆ ಈ ಬಾರಿ ಹರಾಜಿನಲ್ಲಿ ಭಾರೀ ಬೇಡಿಕೆ ಇದೆ. ಆ ಆಟಗಾರರ ವಿವರ ಇಲ್ಲಿದೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಬೇಡಿಕೆ ಇರಲಿದೆ. ಈ ವೇಳೆ ರಾಜಸ್ಥಾನ ರಾಯಲ್ಸ್ ಇಬ್ಬರು ಸ್ಪಿನ್ ಬೌಲರ್‌ಗಳನ್ನು ರಿಲೀಸ್ ಮಾಡಿದೆ. ಹೀಗಾಗಿ ಐಪಿಎಲ್‌ನ ಉಳಿದ ಫ್ರಾಂಚೈಸಿಗಳು ಇವರನ್ನು ಕೊಳ್ಳಲು ಹಣವನ್ನು ಹೂಡಬಹುದು. ಈ ಪಟ್ಟಿಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುವವರು ಲೆಗ್ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್. ಇವರು ಐಪಿಎಲ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ಇವರ ಬುಟ್ಟಿಯಲ್ಲಿ 200ಕ್ಕೂ ಹೆಚ್ಚು ವಿಕೆಟ್‌ಗಳಿವೆ.
ಚಹಾಲ್ 2022 ರಿಂದ 2024 ರವರೆಗೆ ರಾಜಸ್ಥಾನ್ ರಾಯಲ್ಸ್ ಪರ 46 ಐಪಿಎಲ್ ಪಂದ್ಯಗಳನ್ನು ಆಡಿದ್ದು 66 ವಿಕೆಟ್‌ಗಳನ್ನು ಪಡೆದಿದ್ದಾರೆ. ಯುಜುವೇಂದ್ರ ಚಹಾಲ್ ಐಪಿಎಲ್ ಮೆಗಾ ಹರಾಜು 2025 ಕ್ಕೆ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಹೊಂದಿದ್ದಾರೆ. ಈಗ ಎಲ್ಲರ ಲೆಕ್ಕಾಚಾರ ಇವರು ತಮ್ಮ ಮೂಲ ಬೆಲೆಗಿಂತ ಎಷ್ಟು ಪಟ್ಟು ಹೆಚ್ಚು ಪಡೆಯುತ್ತಾರೆ ಎಂಬ ಪ್ರಶ್ನೆಗಳು ಎದ್ದಿವೆ. ಇವರಿಗೆ ಆರ್‌ಸಿಬಿ ಹಣವನ್ನು ಹೂಡಬಹುದು.

ಇದೇ ತಂಡ ಕೈ ಬಿಟ್ಟಿರುವ ರವಿಚಂದ್ರನ್ ಅಶ್ವಿನ್ ಅವರಿಗೂ ಭಾರೀ ಬೇಡಿಕೆ. ಇವರು ಐಪಿಎಲ್‌ನಲ್ಲಿ 212 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ರಾಯಲ್ಸ್ ಪರ ಇವರು 45 ಪಂದ್ಯಗಳಲ್ಲಿ 35 ವಿಕೆಟ್ ಪಡೆದಿದ್ದಾರೆ. ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಸಹ ಮಾಡಬಲ್ಲ ಪ್ಲೇಯರ್. ಇವರ ಮೂಲ ಬೆಲೆ ಸಹ 2 ಕೋಟಿ ಆಗಿದ್ದು, ಎಲ್ಲ ತಂಡಗಳ ಚಿತ್ತ ಕದ್ದಿದೆ.

ಇಂಗ್ಲೆಂಡ್ ತಂಡದ ಸೀಮಿತ ಓವರ್‌ಗಳ ನಾಯಕ ಜೋಸ್ ಬಟ್ಲರ್ ಅವರನ್ನು ಸಹ ರಾಯಲ್ಸ್ ರಿಲೀಸ್ ಮಾಡಿದೆ. ಇವರು ತಮ್ಮ ಆಕ್ರಮಣಕಾರಿ ಆಟದಿಂದಲೇ ಹೆಸರುವಾಸಿ. ಬಟ್ಲರ್ ಐಪಿಎಲ್ 2022 ರಲ್ಲಿ 863 ರನ್ ಗಳಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಪ್ಲೇಯರ್. ಅವರು 2008 ರಿಂದ 2024 ರವರೆಗೆ ರಾಜಸ್ಥಾನ್ ರಾಯಲ್ಸ್ ಪರ 83 ಪಂದ್ಯಗಳಲ್ಲಿ 3055 ರನ್ ಗಳಿಸಿದ್ದಾರೆ. ಇವರಿಗೂ ತಂಡಗಳು ಬಾಜಿ ಕಟ್ಟುವ ಸಾಧ್ಯತೆ ಇದೆ.