Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಜಸ್‌ಪ್ರೀತ್‌ ಬೂಮ್ರಾ ವಿಶ್ವಶ್ರೇಷ್ಠ' ಎಂದ ಆರ್‌ಆರ್‌ ಯುವ ಬ್ಯಾಟ್ಸ್‌ಮನ್‌

Rajasthan Royals Riyan Parag youngster calls Jasprit Bumrah ‘the world’s best

ನವದೆಹಲಿ: ರಾಜಸ್ಥಾನ್ ರಾಯಲ್ಸ್‌ನ ಯುವ ಆಲ್ ರೌಂಡರ್ ರಿಯಾನ್ ಪರಾಗ್ ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ಸಜ್ಜಾಗುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನಲ್ಲಿ ಪರಾಗ್‌ಗೆ ಇದು ಮೂರನೇ ಸೀಸನ್ ಅನ್ನಿಸಲಿದೆ. 2019ರಿಂದ ಆರ್‌ಆರ್‌ನಲ್ಲಿರುವ ಪರಾಗ್ ತಂಡಕ್ಕೆ ಬೆಂಬಲಿಸುತ್ತಿದ್ದಾರೆ.

ಕಳೆದ ವರ್ಷ ರಿಯಾನ್ ಪರಾಗ್‌ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. 12 ಇನ್ನಿಂಗ್ಸ್‌ ಆಡಿದ್ದ ಪರಾಗ್ 86 ರನ್ ಕೊಡುಗೆ ನೀಡಿದ್ದರು. ಸದ್ಯ ಕಡ್ಡಾಯ ಕ್ವಾರಂಟೈನ್‌ನಲ್ಲಿರುವ ಪರಾಗ್‌ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಪರಾಗ್, ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರನ್ನು ವಿಶ್ವಶ್ರೇಷ್ಠ ವೇಗಿ ಎಂದು ಕರೆದಿದ್ದಾರೆ.

ವಿಶ್ವದಲ್ಲಿ ಅತೀ ಸವಾಲಿನ ಬೌಲರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಪರಾಗ್, 'ಅದು ತುಂಬಾ ಸುಲಭದ ಉತ್ತರ. ಅದು ಬಹುಶಃ ಜಸ್‌ಪ್ರೀತ್‌ ಬೂಮ್ರಾ. ನನಗನ್ನಿಸುತ್ತದೆ ಆತ ವಿಶ್ವಶ್ರೇಷ್ಠ ಬೌಲರ್. ಆತನನ್ನು ಎದುರಿಸೋದು ಮತ್ತು ಆತನ ವಿರುದ್ಧ ರನ್ ಗಳಿಸೋದು ಒಂದು ಭಯಾನಕ ಕನಸಿನಂತೆ,' ಎಂದಿದ್ದಾರೆ.

'ಐಪಿಎಲ್ ತಂಡಗಳಲ್ಲಿ ನಾನು ವಿರುದ್ಧ ಆಡಬಯಸುವ ತಂಡವೆಂದರೆ ಕೋಲ್ಕತ್ತಾ ನೈಟ್ ರೈಡರ್ಸ್. ಯಾಕೆಂದರೆ ನನಗೆ ಈಡನ್ ಗಾರ್ಡನ್‌ನಲ್ಲಿ ಆಡೋದು ಇಷ್ಟ,' ಎಂದಿದ್ದಾರೆ. ಏಪ್ರಿಲ್ 9ರಿಂದ ಐಪಿಎಲ್ ಆರಂಭಗೊಳ್ಳಲಿದೆ. ಮೇ 30ರಂದು ಫೈನಲ್‌ನೊಂದಿಗೆ ಐಪಿಎಲ್ ಕೊನೆಗೊಳ್ಳಲಿದೆ.

Story first published: Thursday, March 25, 2021, 17:32 [IST]
Other articles published on Mar 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+