ರಾಜಸ್ಥಾನ ರಾಯಲ್ಸ್ ಎರಡು ಗೆಲ್ಲಬಹುದಾದ ಪಂದ್ಯಗಳನ್ನು ಸೋತು ಸಂಕಷ್ಟದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಾನಾಗಿಯೇ ಪಂದ್ಯವನ್ನು ಕೈ ಚೆಲ್ಲಿದ್ದ ರಾಜಸ್ಥಾನ ರಾಯಲ್ಸ್, ಎಲ್‌ಎಸ್‌ಜಿ ವಿರುದ್ಧ ಅದೇ ತಪ್ಪನ್ನು ಮಾಡಿದೆ. ಈಗ ಪುಟಿದೇಳುವ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದೆ. ಅಸಲಿಗೆ ರಾಜಸ್ಥಾನ ರಾಯಲ್ಸ್‌ಗೆ ಪ್ಲೇ ಆಫ್ ಹಾದಿ ಅಷ್ಟು ಸುಲಭವಲ್ಲ. ಆದರೆ ತನ್ನ ಘನತೆಗೆ ತಕ್ಕ ಆಟವನ್ನು ಆಡಿದರೆ ನಿಶ್ಚಿತವಾಗಿಯೂ ಪ್ಲೇ ಆಫ್ ಪ್ರವೇಶಿಸಬಹುದು.
ರಾಜಸ್ಥಾನ ಆಡಿದ 8 ಪಂದ್ಯಗಳಲ್ಲಿ 2 ಗೆಲುವು 6 ಸೋಲು ಕಂಡಿದ್ದು 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನು ರಾಯಲ್ಸ್ ಈ ಆವೃತ್ತಿಯಲ್ಲಿ 6 ಪಂದ್ಯಗಳನ್ನು ಆಡಬೇಕಿದೆ. ಈ ವೇಳೆ ರಾಯಲ್ಸ್ ಶಿಸ್ತು ಬದ್ಧ ಪ್ರದರ್ಶನವನ್ನು ನೀಡಿ 6ರಲ್ಲಿ ಆರೂ ಪಂದ್ಯವನ್ನು ಗೆದ್ದಾಗ ಮಾತ್ರ ಪ್ಲೇ ಆಫ್ ಆಸೆ ಚಿಗುರುತ್ತದೆ. ರಾಜಸ್ಥಾನ ತಂಡ ಸಂಘಟಿತವಾಗಿಯೇ ಇದೆ. ಆದರೆ ಕೊನೆಯ ಕ್ಷಣದಲ್ಲಿ ತಾನು ಮಾಡಿದ ತಪ್ಪಿನಿಂದ ಗೆಲ್ಲಬಹುದಾದ ಪಂದ್ಯಗಳನ್ನು ಸೋಲುತ್ತಿದೆ.

ಮೊದಲ ಐಪಿಎಲ್ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ರಾಜಸ್ಥಾನ ಎರಡನೇ ಬಾರಿಗೆ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಈ ವೇಳೆ ತಂಡದಿಂದ ಸಂಘಟಿತ ಆಟದ ಪ್ರದರ್ಶನ ಬರುವ ಅನಿವಾರ್ಯತೆ ಇದೆ. ಇನ್ನು ರಾಜಸ್ಥಾನ ಪ್ರಸಕ್ತ ಆವೃತ್ತಿಯಲ್ಲಿ 6 ಪಂದ್ಯಗಳನ್ನು ಸೋತ ಮೊದಲ ತಂಡವಾಗಿದೆ. ಹೀಗಿದ್ದರೂ ರಾಯಲ್ಸ್ ಪ್ಲೇ ಆಫ್ ಗೆ ಪ್ರವೇಶಿಸು ಅವಕಾಶಗಳು ಇವೆ.
ರಾಜಸ್ಥಾನ ರಾಯಲ್ಸ್ ಉಳಿದ 6 ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ ರನ್ ರೇಟ್ ಉತ್ತಮವಾಗಿ ಮಾಡಿಕೊಂಡು ಗೆಲುವು ದಾಖಲಿಸಬೇಕಿದೆ. ಅಲ್ಲದೇ ಆರೂ ಪಂದ್ಯಗಳಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ 18 ಅಂಕಗಳು ಆಗುತ್ತವೇ ಅಲ್ಲದೆ ಪ್ಲೇ ಆಫ್ ಕನಸು ಕಾಣಬಹುದು.
ಶನಿವಾರದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯವನ್ನು ಗೆದ್ದಿತು, ಎಂದು ಹೇಳುವುದಕ್ಕಿಂತ ರಾಜಸ್ಥಾನ ರಾಯಲ್ಸ್ ಎಲ್‌ಎಸ್‌ಜಿಯನ್ನು ಗೆಲ್ಲಿಸಿತು ಎಂದು ಹೇಳುವುದು ಸೂಕ್ತ. ಕೊನೆಯ ಓವರ್‌ನಲ್ಲಿ 9 ರನ್ ಅವಶ್ಯಕತೆ ಇದ್ದಾಗ ಆವೀಶ್ ಖಾನ್ ಮಾಡಿದ ಮ್ಯಾಜಿಕ್, ಲಕ್ನೋ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಅಲ್ಲದೆ ಈ ಪಂದ್ಯವನ್ನು 2 ರನ್‌ಗಳಿಂದ ಗೆಲ್ಲುವಂತೆ ಮಾಡಿತು. ಇನ್ನು ರಾಜಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಇಂತಹದ್ದೇ ತಪ್ಪನ್ನು ಮಾಡಿ ಕೈ ಸುಟ್ಟುಕೊಂಡಿತ್ತು. ಈ ಎಲ್ಲ ತಪ್ಪುಗಳನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದಾಗ ಗೆಲುವು ಸಾಧಿಸಬಹುದು.

ಏ.24, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರು
ಏ.28, ಗುಜರಾತ್ ಟೈಟಾನ್ಸ್, ಜೈಪುರ್
ಮೇ 1, ಮುಂಬೈಇಂಡಿಯನ್ಸ್, ಜೈಪುರ್
ಮೇ 4, ಕೋಲ್ಕತ್ತಾ ನೈಟ್ ರೈಡರ್ಸ್, ಕೋಲ್ಕತ್ತಾ
ಮೇ 12, ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈ
ಮೇ 16, ಪಂಜಾಬ್ ಕಿಂಗ್ಸ್, ಜೈಪುರ್