Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಇದು ರೀಲ್ ಅಲ್ಲ, ರಿಯಲ್ ಸ್ಪೋಟಕ ಇನ್ನಿಂಗ್ಸ್; ರಿಯಾನ್ ಆರ್ಭಟಕ್ಕೆ 'ರಾಜ' ಫುಲ್ ಖುಷ್!

ಸಂಜು ಸ್ಯಾಮ್ಸನ್ ಕೇರಳ ಪರ 2024ರ ರಣಜಿ ಟೂರ್ನಿಯ ಪಂದ್ಯವನ್ನು ಆಲಪ್ಪುಳದಲ್ಲಿ ಆಡುತ್ತಿದ್ದರು. ಆದರೆ ಅವರ ಚಿತ್ತ ಎಲ್ಲವೂ ರಾಯ್‌ಪುರ್‌ನತ್ತ ಕೇಂದ್ರಿಕೃತವಾಗಿತ್ತು.

ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲಿರುವ ಸ್ಟಾರ್ ಆಟಗಾರ ಒಬ್ಬ, ದೇಶೀಯ ಟೂರ್ನಿಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಒಂದು ಕಡೆ ಸಂಜು ಸ್ಯಾಮ್ಸನ್ ಉತ್ತರಪ್ರದೇಶ ತಂಡ ವಿರುದ್ಧ ಜಯ ಸಾಧಿಸದ ನಿರಾಸೆಯ ನಡುವೆಯೂ, ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದೇ ಆ ಯಂಗ್ ಪ್ಲೇಯರ್‌..

Rajasthan Royals Star Riyan Parag Hits 2nd Fastest Century In The Ranji Trophy History

ಸದ್ಯ ನಡೆಯುತ್ತಿರುವ 2024ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರತಿದಿನ ಹೊಸ ಹೊಸ ದಾಖಲೆಗಳು ಸದ್ದು ಮಾಡುತ್ತಿವೆ. ಭಾರತೀಯ ದೇಶೀಯ ಕ್ರಿಕೆಟ್ ಪಂದ್ಯಾವಳಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಇದೀಗ ಸೋಮವಾರ, ಜನವರಿ 8ರಂದು ಅಸ್ಸಾಂ ತಂಡದ ನಾಯಕ ಕೂಡ ಆಗಿರುವ ರಿಯಾನ್ ಪರಾಗ್ 12 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ರಣಜಿ ಟ್ರೋಫಿ ಪಂದ್ಯಾವಳಿಯ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ ಸ್ಟಾರ್ ರಿಯಾನ್ ಪರಾಗ್ ರಣಜಿ ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕವನ್ನು ಗಳಿಸಿದರು. ಅಸ್ಸಾಂ ಮತ್ತು ಛತ್ತೀಸ್‌ಗಢ ನಡುವಿನ ಪಂದ್ಯದ ವೇಳೆ 22 ವರ್ಷದ ಆಲ್‌ರೌಂಡರ್ ರಿಯಾನ್ ಪರಾಗ್ ಈ ಸಾಧನೆ ಮಾಡಿದರು.

ರಿಯಾನ್ ಪರಾಗ್ ಕೇವಲ 56 ಎಸೆತಗಳಲ್ಲಿ ತಮ್ಮ ರಣಜಿ ಶತಕವನ್ನು ಬಾರಿಸಿದು ಮತ್ತು ನಂತರ ಕೇವಲ 87 ಎಸೆತಗಳಲ್ಲಿ 155 ರನ್‌ಗಳಿಗೆ ತಮ್ಮ ಸ್ಫೋಟಕ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.

ಪ್ರಸ್ತುತ ರಣಜಿ ಟ್ರೋಫಿಯಲ್ಲಿ ವೇಗದ ಶತಕ ಬಾರಿಸಿದ ದಾಖಲೆಯು ಭಾರತೀಯ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರ ಹೆಸರಿನಲ್ಲಿದೆ. ಅವರು 2016ರಲ್ಲಿ ಜಾರ್ಖಂಡ್ ವಿರುದ್ಧ ಕೇವಲ 48 ಎಸೆತಗಳಲ್ಲಿ ಹೆಗ್ಗುರುತನ್ನು ತಲುಪಿದ್ದರು.

ಅಸ್ಸಾಂ ಮತ್ತು ಛತ್ತೀಸ್‌ಗಢ ನಡುವಿನ ಪಂದ್ಯದ ಕುರಿತು ಮಾತನಾಡುವುದಾದರೆ, ರಿಯಾನ್ ಪರಾಗ್ ಅವರ ಅದ್ಭುತ ಶತಕದ ಹೊರತಾಗಿಯೂ, ಛತ್ತೀಸ್‌ಗಢ ತಂಡವು ಅಸ್ಸಾಂ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು.

ವಶುದೇವ್ ಬರೆತ್ ಮತ್ತು ಜೀವೇಶ್ ಬುಟ್ಟೆ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ 86 ರನ್‌ಗಳ ಮುನ್ನಡೆ ಪಡೆದ ನಂತರ, ಛತ್ತೀಸ್‌ಗಢ ತಂಡವು ಅಸ್ಸಾಂ ತಂಡವನ್ನು 254 ರನ್‌ಗಳಿಗೆ ಆಲೌಟ್ ಮಾಡಿತು.

Story first published: Monday, January 8, 2024, 19:25 [IST]
Other articles published on Jan 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+