For Quick Alerts
ALLOW NOTIFICATIONS  
For Daily Alerts
 

Rajasthan Royals ತಂಡದ ಚಿಂತೆ ಹೆಚ್ಚಿಸಿದ ಸ್ಟಾರ್ ಆಲ್‌ರೌಂಡರ್‌ ಗಾಯ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಲೀಗ್‌ನಲ್ಲಿ 10 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ತಯಾರಿ ನಡೆಸಿವೆ. ಈ ಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸಹ ಸೇರಿದೆ. ಆದರೆ ಐಪಿಎಲ್‌ ಆರಂಭಕ್ಕೂ ಮುನ್ನವೇ ರಾಯಲ್ಸ್ ತಂಡಕ್ಕೆ ಕೆಟ್ಟ ಸುದ್ದಿಯೊಂದು ಬಂದಿದೆ. ರಾಜಸ್ಥಾನ ರಾಯಲ್ಸ್ ತಂಡದ ಭರವಸೆಯ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಇಡೀ ಲೀಗ್‌ ಆಡುವುದು ಅನುಮಾನವಾಗಿದೆ.

ಇದೇ ಐಪಿಎಲ್ ಆವೃತ್ತಿಗಾಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿದ್ದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್‌ ಅವರು ಗಾಯದ ಕಾರಣದಿಂದಾಗಿ ಇಡೀ ಋತುವಿನಿಂದಲೇ ಹೊರಗುಳಿಯುವ ಸಾಧ್ಯತೆಗಳು ಇವೆ ಎಂದು ವರದಿಗಳು ಬರುತ್ತಿವೆ. ಹೀಗಾಗಿ ಇವರು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

Rajasthan Royals

27 ವರ್ಷದ ಆಟಗಾರ ಸ್ಯಾಮ್ ಕರನ್‌ ಅವರು ಮಾರ್ಚ್ 5 ರಂದು ಐಸಿಸಿ ಟಿ 20 ವಿಶ್ವಕಪ್ 2026 ರಲ್ಲಿ ಇಂಗ್ಲೆಂಡ್ ಪರ ಕಣಕ್ಕೆ ಇಳಿದಿದ್ದರು. ಇವರು ಇಂಗ್ಲೆಂಡ್ ತಂಡದ ಪರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಕಣಕ್ಕೆ ಇಳಿದಿದ್ದರು. ಅಂದಿನಿಂದ ಇವರ ಫಿಟ್ನೆಸ್‌ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇವರು ಗಾಯಕ್ಕೆ ತುತ್ತಾಗಿದ್ದು, ರಾಜಸ್ಥಾನ ರಾಯಲ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ರಾಜಸ್ಥಾನ ರಾಯಲ್ಸ್ ಕರ್ರನ್ ಅವರನ್ನು ಖರೀದಿಸಿತು. ಈ ಟ್ರೇಡ್ ಮೂಲಕ ರಾಜಸ್ಥಾನ ತಂಡ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ವಿನಿಮಯ ಮಾಡಿಕೊಂಡಿತ್ತು. ಅಲ್ಲದೆ, ಸಂಜು ಸ್ಯಾಮ್ಸನ್ ಚೆನ್ನೈಗೆ ಬಿಟ್ಟುಕೊಟ್ಟಿತ್ತು.

Rajasthan Royals

ರಾಜಸ್ಥಾನ ರಾಯಲ್ಸ್‌ ಇನ್ನು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಲ್ಲದೆ ಇವರ ಬದಲಿಗೆ ಆಟಗಾರರನ್ನು ಹುಡುಕುವುದು ರಾಜಸ್ಥಾನ ತಂಡಕ್ಕೆ ತಲೆ ನೋವಾಗಿದೆ. ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಈಗಾಗಲೇ ಕ್ಯಾಂಪ್‌ ಸೇರಿದ್ದು ಬಲ ತುಂಬಿದೆ. ತಂಡದ ಪರ ಡೊನೊವನ್ ಫೆರೇರಾ ಆಲ್‌ರೌಂಡರ್‌ ರೂಪದಲ್ಲಿ ಕಾಣಿಸಿಕೊಳ್ಳಬಹುದು.

ಸ್ಯಾಮ್‌ ಕರನ್‌ ಸಾಧನೆ

ಸ್ಟಾರ್ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಪಂಜಾಬ್‌ ಕಿಂಗ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಸ್ಯಾಮ್‌ 2019ರಲ್ಲಿ ಪಂಜಾಬ್‌ ತಂಡದ ಪರ ಚೊಚ್ಚಲ ಬಾರಿಗೆ ಐಪಿಎಲ್ ಆಡಿದರು. ನಂತರ ಅವರು 2020 ರಿಂದ 2021 ರವರೆಗೆ ಚೆನ್ನೈ ಸೇರಿದರು. ಇವರಲ್ಲಿನ ಕ್ಷಮತೆಯನ್ನು ಗುರುತಿಸಿದ ಪಂಜಾಬ್‌ ₹18.5 ಕೋಟಿ ನೀಡಿ ಖರೀದಿಸಿತ್ತು. 2025ರಲ್ಲಿ ಮತ್ತೆ ಸಿಎಸ್‌ಕೆ ತಂಡ ಸೇರಿದ್ದರು. ಇವರು ಐಪಿಎಲ್‌ನಲ್ಲಿ ಆಡಿದ 64 ಪಂದ್ಯಗಳಲ್ಲಿ 997 ರನ್‌ ಸಿಡಿಸಿದ್ದಾರೆ. ಅಲ್ಲದೆ 59 ವಿಕೆಟ್‌ ಪಡೆದಿದ್ದಾರೆ. ಇವರ ಅನುಭವನ್ನು ನೋಡಿ ರಾಜಸ್ಥಾನ ತಂಡ ಇವರಿಗೆ ಮಣೆ ಹಾಕಿತ್ತು.

Story first published: Thursday, March 19, 2026, 21:55 [IST]
Other articles published on Mar 19, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+