IPL 2025: ರಾಜಸ್ಥಾನ vs ಗುಜರಾತ್ ನಡುವೆ ಮಹಾ ಕಾಳಗ; ಜೋಸ್ ಬಟ್ಲರ್ ಆಟದ ಮೇಲೆ ಕಣ್ಣು
ಐಪಿಎಲ್ 2025 ರಲ್ಲಿ ಇಂದು ಬುಧವಾರ ರೋಚಕ ಪಂದ್ಯ ನಡೆಯಲಿದೆ. ರಾಜಸ್ಥಾನ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಅವರ ತವರು ಮೈದಾನದಲ್ಲಿಏ ಎದುರಿಸಲಿದೆ. ಉಭಯ ತಂಡಗಳು ಉತ್ತಮ ಫಾರ್ಮ್‌ನಲ್ಲಿದ್ದು, ಸತತವಾಗಿ ಗೆಲುವು ಸಾಧಿಸುತ್ತಿವೆ. ಇಂತಹ ಸಂದದರ್ಭದಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ರಾತ್ರಿ 7.30 ಗಂಟೆಗ ನಡೆಯಲಿರುವ ಪಂದ್ಯ ಭಾರಿ ಕುತೂಹಲ ಮೂಡಿಸಿದೆ.
ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಸ್ಪೋಟಕ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅವರು ತಮ್ಮ ಮಾಜಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ ಉತ್ಸಾಹದಲ್ಲಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡ ಇದುವರೆಗೆ 4 ಪಂದ್ಯಗಳನ್ನು ಅಡಿದ್ದು, ಇದರಲ್ಲಿ ಮೂರು ಪಂದ್ಯಗಳನ್ನು ಗೆದ್ದು, ಒಂದರಲ್ಲಿ ಮಾತ್ರ ಸೋತಿದೆ. ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ನಾಯಕ ಶುಭಮನ್ ಗಿಲ್, ಜೋಸ್ ಬಟ್ಲರ್ ಮತ್ತು ಸಾಯಿ ಸುದರ್ಶನ್ ಬಲ ತುಂಬಿದ್ದಾರೆ. ಈ ಮೂವರು ಬ್ಯಾಟರ್ಸ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆರ್ ಸಾಯಿ ಕಿಶೋರ್ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಜಿಟಿ ಟಾಪ್ ರನ್ ಗೆಟರ್ಸ್
ಸಾಯಿ ಸುದರ್ಶನ್- 4 ಪಂದ್ಯ, 191 ರನ್
ಜೋಸ್ ಬಟ್ಲರ್- 4 ಪಂದ್ಯ, 166 ರನ್
ಶುಭಮನ್ ಗಿಲ್- 4 ಪಂದ್ಯ, 146 ರನ್
ಟಾಪ್ ವಿಕೆಟ್ ಟೇಕರ್ಸ್
ಮೊಹಮ್ಮದ್ ಸಿರಾಜ್- 4 ಪಂದ್ಯ, 9 ವಿಕೆಟ್
ಆರ್ ಸಾಯಿ ಕಿಶೋರ್- 4 ಪಂದ್ಯ, 8 ವಿಕೆಟ್
ಪ್ರಸಿದ್ಧ್ ಕೃಷ್ಣ- 4 ಪಂದ್ಯ, 5 ವಿಕೆಟ್
ಜಿಟಿ ಸಂಭಾವ್ಯ ಪ್ಲೇಯಿಂಗ್-11: ಜೋಸ್ ಬಟ್ಲರ್ (ವಿಕೆಟ್), ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಶೆರ್ಫೇನ್ ರುದರ್ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಆರ್ ಸಾಯಿ ಕಿಶೋರ್, ವಾಷಿಂಗ್ಟನ್ ಸುಂದರ್, ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ರಾಜಸ್ಥಾನ ರಾಯಲ್ಸ್ ತಂಡವು ಇಲ್ಲಿವರೆಗೆ 4 ಪಂದ್ಯಗಳನ್ನು ಆಡಿದ್ದು, ತಲಾ 2 ರಲ್ಲಿ ಗೆದ್ದು, ಸೋತಿದೆ. ಕಳೆದ ಕೆಲವು ಪಂದ್ಯಗಳಿಂದ ರಾಜಸ್ಥಾನ ರಾಯಲ್ಸ್ ತಂಡವು ಸ್ಥಿರ ಪ್ರದರ್ಶನ ನೀಡುತ್ತಿದ್ದು, ಫಾರ್ಮ್‌ಗೆ ಮರಳಿದೆ. ರಿಯಾನ್ ಪರಾಗ್, ಯಶಸ್ವ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಎಲ್ಲಾ ಬ್ಯಾಟರ್ಸ್ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿಯೂ ವನಿಂದು ಹಸರಂಗ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಆರ್‌ಆರ್ ಟಾಪ್ ರನ್ ಗೆಟರ್ಸ್
ಸಂಜು ಸ್ಯಾಮ್ಸನ್- 4 ಪಂದ್ಯ, 137 ರನ್
ಧ್ರುವ್ ಜುರೆಲ್- 4 ಪಂದ್ಯ, 119 ರನ್
ನಿತೀಶ್ ರಾಣಾ- 4 ಪಂದ್ಯ, 112 ರನ್
ಟಾಪ್ ವಿಕೆಟ್ ಟೇಕರ್ಸ್
ವನಿಂದು ಹಸರಂಗ- 3 ಪಂದ್ಯ, 6 ವಿಕೆಟ್
ಮಹೇಶ್ ತೀಕ್ಷಣ- 4 ಪಂದ್ಯ, 4 ವಿಕೆಟ್
ಸಂದೀಪ್ ಶರ್ಮಾ- 4 ಪಂದ್ಯ, 4 ವಿಕೆಟ್
ಆರ್‌ಆರ್ ಸಂಭಾವ್ಯ ಪ್ಲೇಯಿಂಗ್-11: ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಕುಮಾರ್ ಕಾರ್ತಿಕೇಯ, ತುಷಾರ್ ದೇಶಪಾಂಡೆ.
ಹೆಡ್ ಟು ಹೆಡ್
ಐಪಿಎಲ್‌ನಲ್ಲಿ ಇಲ್ಲಿವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಇಲ್ಲಿವರೆಗೆ ಒಟ್ಟು 6 ಪಂದ್ಯಗಳು ನಡೆದಿವೆ. ಇದರಲ್ಲಿ ಗುಜರಾತ್ ಟೈಟಾನ್ಸ್ 5 ಪಂದ್ಯಗಳನ್ನು ಗೆದ್ದಿದೆ. ರಾಜಸ್ಥಾನ ರಾಯಲ್ಸ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications