ಐಪಿಎಲ್ 2025 ರ 36ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರದರ್ಶನ ಇಲ್ಲಿಯವರೆಗೆ ವಿಶೇಷವಾಗಿಲ್ಲ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ರಾಜಸ್ತಾನ ರಾಯಲ್ಸ್ ಸಂಪೂರ್ಣವಾಗಿ ವಿಫಲವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 18ನೇ ಸೀಸನ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ.
ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ರಾಜಸ್ಥಾನ ರಾಯಲ್ಸ್ ಮಣಿಸುವ ನಿರೀಕ್ಷೆಯಲ್ಲಿದೆ. ರಾಜಸ್ಥಾನ ರಾಯಲ್ಸ್ ತಂಡವು ಸತತ ಮೂರು ಸೋಲುಗಳನ್ನು ಕಂಡಿದ್ದು, ಗೆಲುವಿನ ಲಯಕ್ಕೆ ಮರಳಲು ತಯಾರಾಗಿದೆ. ಇತ್ತ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮತ್ತೊಂದು ಜಯವನ್ನು ದಾಖಲಿಸಲು ತಂತ್ರ ರೂಪಿಸಿದೆ.

ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸ್ಟೇಡಿಯಂನಲ್ಲಿ ಇದುವರೆಗೆ ನಡೆದ 58 ಐಪಿಎಲ್ ಪಂದ್ಯಗಳಲ್ಲಿ 20 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿದ್ದರೆ, 37 ಪಂದ್ಯಗಳನ್ನು ಚೇಸಿಂಗ್ ಮಾಡಿದ ತಂಡಗಳು ಗೆದ್ದಿವೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಆಯ್ಕೆಯಾಗಿದೆ.
ಐಪಿಎಲ್ನಲ್ಲಿ ಇಲ್ಲಿವರೆಗೆ ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ 5 ರೋಚಕ ಪಂದ್ಯಗಳು ನಡೆದಿವೆ. ರಾಜಸ್ಥಾನ 4 ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದರೆ, ಲಕ್ನೋ ತಂಡ 1 ರಲ್ಲಿ ಮಾತ್ರ ಜಯ ಕಂಡಿದೆ.
ತವರಿನಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ಉತ್ಸಾಹದಲ್ಲಿದೆ. ಆಟಗಾರರಿಂದ ಸಂಘಟಿತ ಪ್ರದರ್ಶನ ಕಂಡು ಬರುತ್ತಿಲ್ಲ. ಐಪಿಎಲ್ 2025 ರಲ್ಲಿ ಸಿಎಸ್ಕೆ ವಿರುದ್ಧ ವನಿಂದು ಹಸರಂಗ 35 ರನ್ಗಳಿಗೆ 4 ವಿಕೆಟ್ ಪಡೆದಿರುವುದನ್ನು ಹೊರತುಪಡಿಸಿ, ಅವರು ಉತ್ತಮ ಫಾರ್ಮ್ನಲ್ಲಿಲ್ಲ. ಆದಾಗ್ಯೂ, ಮುಂಬರುವ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಯಶಸ್ವಿ ಜೈಸ್ವಾಲ್- 7 ಪಂದ್ಯ, 233 ರನ್
ಸಂಜು ಸ್ಯಾಮ್ಸನ್- 7 ಪಂದ್ಯ, 224 ರನ್
ಧ್ರುವ್ ಜುರೆಲ್- 7 ಪಂದ್ಯ, 185 ರನ್
ಜೋಫ್ರಾ ಆರ್ಚರ್-7 ಪಂದ್ಯ, 7 ವಿಕೆಟ್
ವನಿಂದು ಹಸರಂಗ- 5 ಪಂದ್ಯ, 7 ವಿಕೆಟ್
ಮಹೇಶ್ ತೀಕ್ಷಣ- 7 ಪಂದ್ಯ, 7 ವಿಕೆಟ್
ಆರ್ಆರ್ ಸಂಭಾವ್ಯ ಪ್ಲೇಯಿಂಗ್-11: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ಕೀಪರ್), ರಿಯಾನ್ ಪರಾಗ್, ನಿತೀಶ್ ರಾಣಾ, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಕುಮಾರ್ ಕಾರ್ತಿಕೇಯ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ
ಲಕ್ನೋ ಪರ ಕಳೆದ ಪಂದ್ಯದಲ್ಲಿ ನಿಕೋಲಸ್ ಪೂರನ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಆದರೆ, ಐಪಿಎಲ್ 2025 ರಲ್ಲಿ ಪೂರನ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಅವರು ನಾಲ್ಕು ಮಿಂಚಿನ ಅರ್ಧಶತಕಗಳನ್ನು ಗಳಿಸಿದ್ದು, ಆರೆಂಜ್ ಕ್ಯಾಪ್ ಅನ್ನು ಗೆದ್ದಿದ್ದಾರೆ. ಇದಲ್ಲದೆ, ಮಿಚೆಲ್ ಮಾರ್ಷ್ ಕೂಡ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ.
ನಿಕೋಲಸ್ ಪೂರನ್- 7 ಪಂದ್ಯ, 357 ರನ್
ಮಿಚೆಲ್ ಮಾರ್ಷ್- 7 ಪಂದ್ಯ, 294 ರನ್
ಐಡೆನ್ ಮಾರ್ಕ್ರಾಮ್- 7 ಪಂದ್ಯ, 208 ರನ್
ಶಾರ್ದೂಲ್ ಠಾಕೂರ್- 7 ಪಂದ್ಯ, 11 ವಿಕೆಟ್
ದಿಗ್ವೇಶ್ ರಾಠಿ- 7 ಪಂದ್ಯ, 9 ವಿಕೆಟ್
ರವಿ ಬಿಷ್ಣೋಯಿ- 7 ಪಂದ್ಯ, 8 ವಿಕೆಟ್
ಎಲ್ಎಸ್ಜಿ ಸಂಭಾವ್ಯ ಪ್ಲೇಯಿಂಗ್-11: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ರಾಠಿ.