Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs MI IPL 2025: ಇಂದು ಮುಂಬೈ, ರಾಜಸ್ಥಾನ ನಡುವೆ ಪ್ಲೇ ಆಫ್‌ ಫೈಟ್‌

ಇಂಡಿಯನ್ ಪ್ರೀಮಿಯರ್‌ ಲೀಗ್‌ ದಿನ ಕಳೆದಂತೆ ರೋಚಕತೆ ಹೆಚ್ಚುತ್ತಿದೆ. ಈಗ ತಂಡಗಳು ಪ್ಲೇ ಆಫ್‌ ಮೇಲೆ ಚಿತ್ತವನ್ನು ನೆಟ್ಟಿವೆ. ಗುರುವಾರ ಪ್ರಸಕ್ತ ಐಪಿಎಲ್‌ನ ಹೈವೋಲ್ಟೇಜ್‌ ಪಂದ್ಯವನ್ನು ನೋಡಬಹುದಾಗಿದೆ. ಗುರುವಾರ ಮಾಜಿ ಚಾಂಪಿಯನ್ಸ್‌ ರಾಜಸ್ಥಾನ ರಾಯಲ್ಸ್‌ ಹಾಗೂ ದಾಖಲೆಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡಗಳು ಅಂಗಳ ಪ್ರವೇಶಿಸಲಿವೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದ್ದು ಗೆಲುವಿನ ಕನಸು ಕಾಣುತ್ತಿವೆ.

ಎರಡೂ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಈ ಪಂದ್ಯದಲ್ಲಿ ಯಾವ ತಂಡ 2 ಅಂಕ ಗಳಿಸುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಲೀಗ್‌ ಹಂತದ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಈಗ ಸ್ಥಿರ ಪ್ರದರ್ಶನ ನೀಡುತ್ತಾ ಗೆಲುವನ್ನು ದಾಖಲಿಸುತ್ತಿದೆ. ಇನ್ನು ಗುಜರಾತ್‌ ಟೈಟನ್ಸ್‌ ವಿರುದ್ಧ ಸವಾಲಿನ ಗುರಿಯನ್ನು ಸುಲಭವಾಗಿ ಚೇಸ್‌ ಮಾಡಿರುವ ರಾಜಸ್ಥಾನ ರಾಯಲ್ಸ್‌ ಆತ್ಮ ವಿಶ್ವಾಸದಿಂದ ಅಂಗಳಕ್ಕೆ ಇಳಿಯಲಿದೆ. ರಾಜಸ್ಥಾನ ತಂಡಕ್ಕೆ ಇನ್ನು ಮುಂದಿನ ಎಲ್ಲ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯಗಳಾಗಿರಲಿವೆ.

Rajasthan Royals vs Mumbai Indians A High-Voltage IPL 2025 Clash Set for Thursday

ವೈಭವ್ ಆರ್ಕಷಣೆ

ರಾಜಸ್ಥಾನ ರಾಯಲ್ಸ್ ತಂಡದಲ್ಲಿರುವ ಯುವ ಬ್ಯಾಟರ್‌ ವೈಭವ್ ಸೂರ್ಯವಂಶಿ ಪ್ರಮುಖ ಆಕರ್ಷಣೆ. 14 ವರ್ಷ ಯುವ ಬ್ಯಾಟರ್‌ ಗುಜರಾರ್‌ ಟೈಟಾನ್ಸ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಇವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇನ್ನು ಯಶಸ್ವಿ ಜೈಸ್ವಾಲ್‌ ಅವರ ಮೇಲೂ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಮಧ್ಯಮ ಕ್ರಮಾಂಕದ ನಿತೀಶ್ ರಾಣಾ, ರಿಯಾನ್‌ ಪರಾಗ್ ತಮ್ಮ ಶಿಸ್ತು ಬದ್ಧ ಆಟವನ್ನು ಆಡಬೇಕಿದೆ. ಶಿಮ್ರೋನ್‌ ಹೆಟ್ಮೆಯರ್‌ ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ.

ರಾಜಸ್ಥಾನ ತಂಡದ ಬೌಲಿಂಗ್ ವಿಭಾಗ ಬಲಾಢ್ಯವಾಗಿದೆ. ವೇಗದ ಬೌಲಿಂಗ್ ವಿಭಾಗವನ್ನು ಜೋಫ್ರಾ ಆರ್ಚರ್‌, ಮಹೀಶ್‌ ತೀಕ್ಷಣಾ, ಯಧುವಿರ್‌ ಸಿಂಗ್‌ ತಮ್ಮ ಲಯ ಬದ್ಧ ದಾಳಿಯನ್ನು ನಡೆಸಬೇಕಿದೆ. ಡೆತ್‌ ಓವರ್‌ಗಳಲ್ಲಿ ಬ್ಯಾಟರ್‌ಗಳಿಗೆ ಕಾಟ ನೀಡಲು ಸಂದೀಪ್‌ ಶರ್ಮಾ ಸಿದ್ಧರಾಗಿದ್ದಾರೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ವನಿಂದು ಹಸರಂಗಾ ತಮ್ಮ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ.

Rajasthan Royals vs Mumbai Indians A High-Voltage IPL 2025 Clash Set for Thursday

ಸಂಘಟಿತ ಆಟವೇ ಬಲ

ಮುಂಬೈ ತಂಡದ ಬೌಲಿಂಗ್‌ ವಿಭಾಗ ಬಲಾಢ್ಯವಾಗಿದೆ. ಹೊಸ ಚೆಂಡಿನ ಮೂಲಕ ದೀಪಕ್‌ ಚಹಾರ್‌, ಟ್ರೆಂಟ್‌ ಬೌಲ್ಟ್‌ ಎದುರಾಳಿಗಳನ್ನು ಕಾಡಬಲ್ಲರು. ಇವರಿಬ್ಬರೂ ಪವರ್ ಪ್ಲೇನಲ್ಲಿ ಪವರ್ ಫುಲ್‌ ಬೌಲಿಂಗ್ ನಡೆಸಬಲ್ಲರು. ಮಿಡ್ಲ್ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ, ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ವಿಲ್ ಜಾಕ್ಸ್, ಕರಣ್‌ ಶರ್ಮಾ ಬಿಗುವಿನ ದಾಳಿ ನಡೆಸಬೇಕೆದಿ. ಇನ್ನು ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ತಮ್ಮ ದಾಳಿಯಿಂದ ಎದುರಾಳಿಂದ ಕಾಡಬಲ್ಲರು. ಇನ್ನು ಮುಂಬೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ರಯಾನ್‌ ರಿಕಲ್ಟನ್‌, ರೋಹಿತ್ ಶರ್ಮಾ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ವಿಲ್ ಜಾಕ್ಸ್‌, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅವರ ಮೇಲೆ ಭರವಸೆ ಹೆಚ್ಚಿದೆ. ಮುಂಬೈ ಸಂಘಟಿತ ಆಟದ ಮೇಲೆ ವಿಶ್ವಾಸವನ್ನು ಇಟ್ಟುಕೊಂಡಿದೆ.

Story first published: Thursday, May 1, 2025, 7:33 [IST]
Other articles published on May 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+