For Quick Alerts
ALLOW NOTIFICATIONS  
For Daily Alerts
 

Rajat Patidar: ಕೆಎಲ್‌ ರಾಹುಲ್‌ ಎಂಟ್ರಿ ನೀಡಿದರೆ ರಜತ್‌ ಪಟಿದಾರ್‌ ಸ್ಥಾನಕ್ಕೆ ಕುತ್ತು

ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶವನ್ನು ಅಬ್ಬರಿಸಲು ಅದೆಷ್ಟೋ ಯುವ ಆಟಗಾರರು ಕಾಯುತ್ತಲೇ ಇರುತ್ತಾರೆ. ಆದರೆ ಸಿಕ್ಕ ಅವಾಕಶದಲ್ಲಿ ಬ್ಯಾಟ್ ಮೌನಕ್ಕೆ ಶರಣಾದರೆ ಆಗುವ ನಿರಾಸೆ ಅಷ್ಟಿಷ್ಟಲ್ಲ. ಟೀಮ್ ಇಂಡಿಯಾದ ಸ್ಥಾನ ಪಡೆಯುವ ಕನಸಿನಿಂದ ದೇಶೀಯ ಟೂರ್ನಿಗಳಲ್ಲಿ ಅಬ್ಬರಿಸಿ ಟೆಸ್ಟ್‌ ಕ್ಯಾಪ್‌ ಪಡೆದ ಪ್ಲೇಯರ್‌ ರಜತ್‌ ಪಟಿದಾರ್.

ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಫಲವಾಗಿ ರಜತ್ ಪಟಿದಾರ್‌ಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿತು. ಇವರು ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಸೊಗಸಾದ ಪ್ರದರ್ಶನ ನೀಡಿದರು. ಅಲ್ಲದೆ ತಂಡದ ಜಯದಲ್ಲಿ ಮಿಂಚುವಂತೆ ಆಟವಾಡಿದರು.

Rajat Patidar: If Kl Rahul In: Rajat Patidar Out From Squad

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್‌ ವಿರಾಟ್‌ ಕೊಹ್ಲಿ ಕೌಟುಂಬಿಕ ಕಾರಣಗಳಿಂದ ತಂಡದಿಂದ ಹೊರನಡೆದರು. ಇವರ ಸ್ಥಾನಕ್ಕೆ ಕೊನೆಯ ಕ್ಷಣದಲ್ಲಿ ಆಯ್ಕೆದಾರರು ರಜತ್ ಪಟಿದಾರ್‌ ಅವರಿಗೆ ಮಣೆ ಹಾಕಿದರು. ಆದರೆ ಮೊದಲ ಟೆಸ್ಟ್‌ನಲ್ಲಿ ಇವರಿಗೆ ಆಡುವ ಅವಕಾಶ ಲಭಿಸಲಿಲ್ಲ. ಆದರೆ ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದರು.

ವಿಶಾಖಪಟ್ಟಣದಲ್ಲಿ ಆಡಿದ ಮೊದಲ ಇನ್ನಿಂಗ್ಸ್‌ನಲ್ಲಿ ಸೊಗಸಾದ ಆಟವನ್ನು ಆಡಿದರು. ಈ ಪಂದ್ಯದಲ್ಲಿ ರಜತ್‌ 32 ರನ್ ಬಾರಿಸಿ ಇಲ್ಲದ ಇಂಗ್ಲೆಂಡ್‌ನ ಸ್ಪಿನ್‌ ಬೌಲರ್‌ಗೆ ಬಲಿಯಾದರು. ಎರಡನೇ ಇನಿಂಗ್ಸ್‌ನಲ್ಲಿ 9 ರನ್‌ ಪಡೆಯಲಷ್ಟೇ ರಜತ್‌ ಶಕ್ತರಾದರು. ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರನ್‌ ಬರವನ್ನು ಅನುಭಿಸಿದರು. ಬ್ಯಾಟಿಂಗ್ ಫ್ರೆಂಡ್ಲಿ ಪಿಚ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಎಡವಿದ ರಜತ್‌ ತಮ್ಮ ಕಾಲುಗಳ ಮೇಲೆ ಕಲ್ಲು ಹಾಕಿಕೊಂಡರು.

Rajat Patidar: If Kl Rahul In: Rajat Patidar Out From Squad

ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಒತ್ತಡ ವಿಲ್ಲದೆ ಬ್ಯಾಟ್ ಮಾಡುವ ಅವಕಾಶ ವಿತ್ತು. ಆದರೆ ಈ ಅವಕಾಶದಲ್ಲಿ ರಜತ್‌ ಫೇಲ್‌ ಆದರು. 10 ಎಸೆತಗಳನ್ನು ಎದುರಿಸಿದ ರಜತ್‌ ಖಾತೆ ತೆರೆಯುವ ಮುನ್ನವೇ ಹಾರ್ಟ್ಲಿಗೆ ವಿಕೆಟ್‌ ಒಪ್ಪಿಸಿದರು.

ರಜತ್‌ ಪಟಿದಾರ ಅವರ ಈ ಫಾರ್ಮ್‌ನ್ನು ನೋಡಿದರೆ ಇನ್ನು ಅವರಿಗೆ ಅವಕಾಶಗಳು ಸಿಗುವುದು ಕೊಂಚ ಕಷ್ಟ.. ಆದರೆ ಒಂದು ವೇಳೆ ಅವಕಾಶ ಸಿಕ್ಕಲ್ಲಿ ಭರ್ಜರಿ ಪರ್ಫಾಮೆನ್ಸ್‌ ನೀಡುವ ಅವಶ್ಯಕತೆ ಇದೆ. ಇಲ್ಲದೆ ಇದ್ದರೆ ರಾಷ್ಟ್ರೀಯ ತಂಡದಲ್ಲಿ ಆಡುವುದು ಕಷ್ಟ.

ಸರ್ಫರಾಜ್‌ ಅಬ್ಬರ

ಮೂರನೇ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದ ಮುಂಬೈ ಬ್ಯಾಟರ್‌ ಸರ್ಫರಾಜ್‌ ಖಾನ್‌ ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದರು. ಸತತ ಅವಕಾಶಗಳಿಗಾಗಿ ಕಾಯುತ್ತಿದ್ದ ಸರ್ಫರಾಜ್‌ ಸಿಕ್ಕ ಚಾನ್ಸ್‌ ಮಿಸ್‌ ಮಾಡಿಕೊಳ್ಳಲೇ ಇಲ್ಲ. ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ ಸರ್ಫರಾಜ್‌ ಅಬ್ಬರಿಸಿದರು. ಅಲ್ಲದೆ ಅರ್ಧಶತಕ ಬಾರಿಸಿ ಭರವಸೆಯನ್ನು ಮೂಡಿಸಿದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲೂ ಅದೇ ಫಾರ್ಮ್‌ ಕಂಟಿನ್ಯೂ ಮಾಡಿದ ಸರ್ಫರಾಜ್‌ ಅಬ್ಬರಿಸಿದರು. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಿ20 ಮಾದರಿಯಲ್ಲಿ ಬ್ಯಾಟ್ ಮಾಡಿ ಗಮನ ಸೆಳೆದರು.

Story first published: Monday, February 19, 2024, 8:00 [IST]
Other articles published on Feb 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+