ಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ನಾಯಕನ ಹುಡುಕಾಟದಲ್ಲಿದೆ ಎಂದು ಹೇಳಲಾಗಿತ್ತು. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಹರಾಜಿನಲ್ಲಿ ಯಾವುದೇ ಸ್ಟಾರ್ ಪ್ಲೇಯರ್‌ಗೆ ಮಣೆ ಹಾಕಲಿಲ್ಲ. ಆ ಬಳಿಕ ಈ ಬಗ್ಗೆ ಪ್ರಶ್ನೆಗಳು ಏಳಲು ಆರಂಭಿಸಿದವು. ಐಪಿಎಲ್ 2025ರಲ್ಲಿ ಅರ್‌ಸಿಬಿ ತಂಡವನ್ನು ಮುನ್ನಡೆಸುವ ಆಟಗಾರ ಎಂಬ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಮೇಲ್ನೋಟಕ್ಕೆ ವಿರಾಟ್ ಕೊಹ್ಲಿ ಎಂಬ ಹೆಸರುಗಳು ಕೇಳಿ ಬಂದಿದ್ದವು.
ಆದರೆ ಈಗ ಬರುತ್ತಿರುವ ಸುದ್ದಿ ನಿಜಕ್ಕೂ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿರಲಿದೆ. ವಿರಾಟ್ ಈ ಬಾರಿಯ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ವಿರಾಟ್ ಕೊಹ್ಲಿಯ ಬದಲಿಗೆ ಈ ಬಾರಿ ಯುವ ಆಟಗಾರ ತಂಡವನ್ನು ಮುನ್ನಡೆಸಬಹುದು ಎಂದು ಹೇಳಲಾಗುತ್ತಿದೆ.

ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಸುಮಾರು ಹತ್ತು ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನವನ್ನು ನೀಡಿದೆ. ಇನ್ನು ಈ ವೇಳೆ ಆರ್‌ಸಿಬಿ ಒಮ್ಮೆ ಫೈನಲ್‌ಗೆ ಅರ್ಹತೆ ಪಡೆದಿತ್ತು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಈ ಬಾರಿ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿತ್ತು. ಹೀಗಾಗಿಯೇ ಆರ್‌ಸಿಬಿ ಮ್ಯಾನೇಜ್ಮೆಂಟ್‌ನಲ್ಲಿ ನಾಯಕತ್ವದ ಗುಣಗಳನ್ನು ಹೊಂದಿರುವ ಪ್ಲೇಯರ್‌ಗೆ ಹುಡಕಾಟವನ್ನೇ ಹರಾಜಿನಲ್ಲಿ ನಡೆಸಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತನ್ನ ತಂಡದ ಭರವಸೆಯ ಆಟಗಾರನಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಪ್ಲೇಯರ್ ಈಗಾಗಲೇ ದೇಶೀಯ ಟೂರ್ನಿಯಲ್ಲಿ ತನ್ನ ಅಮೋಘ ನಾಯಕತ್ವದ ಗುಣಗಳೊಂದಿಗೆ ಹಲವರ ಮನ ಗೆದ್ದಿದ್ದಾರೆ. ಇವರೇ ಆರ್‌ಸಿಬಿ ಮಧ್ಯಮ ಕ್ರಮಾಂಕದ ಆಟಗಾರ ರಜತ್ ಪಟೀದಾರ್ ಅವರಿಗೆ ಈ ಬಾರಿ ಪಟ್ಟ ಕಟ್ಟುವ ಸಾಧ್ಯತೆ ಇದೆ.

ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಜತ್ ಪಾಟಿದಾರ್ ಸ್ಥಿರ ಪ್ರದರ್ಶನ ನೀಡಿದ್ದಾರೆ. ಪಾಟಿದಾರ್ ಆಡಿದ 6 ಪಂದ್ಯಗಳಲ್ಲಿ 42.16ರ ಸರಾಸರಿಯಲ್ಲಿ 143 ರನ್ ಸಿಡಿಸಿದ್ದಾರೆ. ಈ ವೇಳೆ ಮೂರು ಅರ್ಧಶತಕಗಳು ಸೇರಿವೆ. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶದ ನಾಯಕರಾಗಿ, ಅವರು ಆರು ಪಂದ್ಯಗಳಲ್ಲಿ ಐದರಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.