IPL 2025 RCB: ರಜತ್ ಪಾಟಿದಾರ್‌ಗೆ ಪಟ್ಟ ಕಟ್ಟಿದ ಬಗ್ಗೆ ವಿರಾಟ್ ಹೇಳಿದ್ದೇನು?
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಎಲ್ಲ ತಂಡಗಳು ಭರದ ತಯಾರಿ ನಡೆಸಿವೆ. ಅಲ್ಲದೆ ಹಲವು ತಂಡಗಳು ತಮ್ಮ ತಮ್ಮ ನಾಯಕರನ್ನು ಘೋಷಣೆ ಮಾಡಿವೆ. ಇದೇ ವೇಳೆ ಆರ್‌ಸಿಬಿ ನಾಯಕ ಯಾರು ಎಂಬ ಪ್ರಶ್ನೆ ಬಹುವಾಗಿ ಅಭಿಮಾನಿಗಳಲ್ಲಿ ಕಾಡ್ತಾ ಇತ್ತು. ಈ ನಿಟ್ಟಿನಲ್ಲಿ ಗುರುವಾರ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಹತ್ವದ ಸಭೆ ನಡೆಸಿತು. ಇದೇ ವೇಳೆ ತಮ್ಮ ಮುಂದಿನ ಆವೃತ್ತಿಗೆ ನಾಯಕನನ್ನು ಘೋಷಣೆ ಮಾಡಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ರಜತ್ ಪಾಟಿದಾರ್ ಅವವು ಮುನ್ನಡೆಸಲಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ನಾಯಕತ್ವದ ಗುಣಗಳನ್ನು ಹೊಂದಿದ ಆಟಗಾರರಿಗೆ ಮಣೆ ಹಾಕಲಿಲ್ಲ. ಪರಿಣಾಮ ಆರ್‌ಸಿಬಿ ತಂಡದ ನಾಯಕ ಯಾರು ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ಇದೇ ವೇಳೆ ಆರ್‌ಸಿಬಿ ಇದ್ದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರೇ ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾತುಗಳ ಸಹ ಕೇಳಿ ಬಂದಿದ್ದವು. ಆದರೆ ಈಗ ಈ ಎಲ್ಲ ಊಹಾ ಪೋಹಗಳಿಗೆ ಉತ್ತರ ಸಿಕ್ಕಿದೆ. 2025ರಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮಧ್ಯ ಪ್ರದೇಶ ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ.

ರಜತ್ ಬಗ್ಗೆ ವಿರಾಟ್ ಹೇಳಿದ್ದೇನು?
ರಜತ್ ಪಾಟಿದಾರ್‌ಗೆ ನಾಯಕತ್ವ ನೀಡಿದಕ್ಕೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ನಾಯಕತ್ವವವನ್ನು ವಹಿಸಿಕೊಂಡಿರುವ ತಮಗೆ ತುಂಬು ಹೃದಯದ ಧನ್ಯವಾದಗಳು. ಈ ಫ್ರಾಂಚೈಸಿಯೊಂದಿಗೆ ನೀವು ಬೆಳದ ರೀತಿ ನಿಜಕ್ಕೂ ಶ್ಲಾಘನೆಗೆ ಅರ್ಹ. ನಿಮ್ಮ ಮುಂದಾಳತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿದೆ. ಅಭಿಮಾನಿಗಳು ಸಹ ನಿಜಕ್ಕೂ ಸಹ ತಮ್ಮ ನಾಯಕತ್ವದ ಗುಣಗಳನ್ನು ಎದುರು ನೋಡ್ತಾ ಇದ್ದಾರೆ. ನಾನು ಹಾಗೂ ನಮ್ಮ ತಂಡದ ಪ್ರತಿಯೊಬ್ಬ ಆಟಗಾರ ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ ಎಂದು ವಿರಾಟ್ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು 2016 ರಿಂದ 2022ರ ವರೆಗೆ ಮುನ್ನಡೆಸಿದ್ದಾರೆ.
ರಜತ್ ಅರ್ಹ ವ್ಯಕ್ತಿ
ನಾಯಕತ್ವವನ್ನು ಪಡೆಯಲು ರಜತ್ ಅರ್ಹ ಆಟಗಾರ. ನಿಜಕ್ಕೂ ಇದು ದೊಡ್ಡ ಜವಾಬ್ದಾರಿ. ನಾನು ಸಹ ಈ ಜವಾಬ್ದಾರಿಯನ್ನು ಬಹು ವರ್ಷಗಳ ಕಾಲ ಅನುಭವಿಸಿರುವೆ. ಈ ತಂಡದ ನಾಯಕತ್ವ ಸಿಕ್ಕಿರುವುದು ನಿಜಕ್ಕೂ ರಜತ್‌ಗೆ ಸಿಕ್ಕ ಗೌರವ. ಸರಿಯಾದ ಸಮಯದಲ್ಲಿ ನಿನಗೆ ಈ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ. ನಿಮ್ಮ ಕ್ಷಮತೆ ಮೇಲೆ ನನಗೆ ನಂಬಿಕೆ ಇದೆ ಎಂದು ಕೊಹ್ಲಿ ಹೇಳಿದ್ದಾರೆ.

ದೇಶೀಯ ಟೂರ್ನಿಗಳಲ್ಲಿ ಮಿಂಚು
ಕಳೆದ ಕೆಲವು ವರ್ಷಗಳಲ್ಲಿ ರಜತ್ ಪಾಟಿದಾರ್ ಅವರ ಆಟ ಸುಧಾರಿಸಿದೆ. ಅವರು ತಮ್ಮ ರಾಜ್ಯವನ್ನು ಮುನ್ನಡೆಸಿದ್ದನ್ನು ನೋಡಿದ್ದೇವೆ. ದೊಡ್ಡ ಪಂದ್ಯಗಳನ್ನು ಹೇಗೆ ಒತ್ತಡವನ್ನು ನಿಭಾಯಿಸಬೇಕು ಎಂಬುದನ್ನು ರಜತ್ ತಿಳಿಸಿದ್ದಾರೆ. ಅವರ ಹೊಸ ಜವಾಬ್ದಾರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications