ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಆರ್‌ಸಿಬಿ ತಂಡದ ಹ್ಯಾಟ್ರಿಕ್ ಗೆಲುವಿನ ಕನಸಿಗೆ ಬ್ರೇಕ್ ಬಿದ್ದಿದೆ. ಸತತ 2 ಪಂದ್ಯಗಳನ್ನು ಗೆದ್ದು ಹುಮ್ಮಸ್ಸಿನಲ್ಲದ್ದ ಬೆಂಗಳೂರು ತಂಡಕ್ಕೆ ಬ್ರೇಕ್ ಬಿದ್ದಿದೆ. ಕೆಕೆಆರ್ ಹಾಗೂ ಸಿಎಸ್‌ಕೆ ತಂಡವನ್ನು ಅವರದ್ದೇ ತವರಿನಲ್ಲಿ ಮಣಿಸಿದ್ದ ಬೆಂಗಳೂರು, ತನ್ನ ತವರಿನಲ್ಲಿ ಸೋಲು ಕಂಡಿದೆ.
ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 169 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ 17.5 ಓವರ್‌ಗಳಲ್ಲಿ 170 ರನ್ ಗಳಿಸಲು 2 ವಿಕೆಟ್ ಕಳೆದುಕೊಂಡಿತು. ಈ ಸೋಲು ಬೆಂಗಳೂರು ತಂಡದ ಜೋಶ್‌ಗೆ ಬ್ರೇಕ್ ಹಾಕಿದೆ.

ಬೆಂಗಳೂರು ತಂಡದ ಪರ ಬುಧವಾರದ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟೀಮ್ ಡೇವಿಡ್ ಅವರು ಸ್ಥಿರ ಪ್ರದರ್ಶನ ನೀಡಿದ್ದರಿಂದಲೇ ಆರ್‌ಸಿಬಿ ಸ್ಪರ್ಧಾತ್ಮ ಮೊತ್ತವನ್ನು ಕಲೆ ಹಾಕಿತು, ಈ ಕುರಿತು ಪಂದ್ಯದ ಬಳಿಕ ಮಾತನಾಡಿರುವ ರಜತ್ ಪಟಿದಾರ್, ನಾವು ಇನ್ನು 25ಕ್ಕೂ ಹೆಚ್ಚ ರನ್ ಬಾರಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಈ ಕಾರಣಕ್ಕೆ ಪಂದ್ಯದಲ್ಲಿ ಸೋಲುವಂತಾಯಿತು ಎಂದು ತಿಸಿದ್ದಾರೆ.
ಅಲ್ಲದೆ ಪಂದ್ಯದ ಬಗ್ಗೆ ಮಾತನಾಡಿರು ನಾಯಕ, ನಮ್ಮ ತಂಡ ಸೋಲು ಕಂಡಿರಬಹುದು ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲವಾಗಿದೆ. ತಂಡದ ಮಧ್ಯಮ ಕ್ರಮಾಂಕದ ಆಟಗಾರರಾದ ಜಿತೇಶ್ ಶರ್ಮಾ, ಲಿವಿಂಗ್‌ಸ್ಟೋನ್, ಟೀಮ್ ಡೇವಿಡ್ ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. ಮೂರು ವಿಕೆಟ್‌ಗಳು ಪತನದ ನಂತರ ಜಿತೇಶ್, ಲಿಯಾಮ್ ಮತ್ತು ಟಿಮ್ ಬ್ಯಾಟಿಂಗ್ ಮಾಡಿದ ರೀತಿ. ಅದು ನೋಡಲು ತುಂಬಾ ಚೆನ್ನಾಗಿತ್ತು. ನಮ್ಮ ಬ್ಯಾಟಿಂಗ್ ಘಟಕ ಮತ್ತು ಅವರು ಗುರಿ ತೋರಿಸುತ್ತಿರುವ ರೀತಿ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ನಮ್ಮ ತಂಡ 200 ರನ್‌ಗಳ ಮೇಲೆ ಕಣ್ಣಿಟ್ಟಿರಲಿಲ್ಲ. ಆದರೆ ನಾವು 190 ರನ್‌ಗಳ ಆಸುಪಾಸಿನ ಕನಸು ಕಾಣುತ್ತಿದ್ದೇವು. ಈ ಪಂದ್ಯದಲ್ಲಿ ಆರಂಭಿಕ ವಿಕೆಟ್ ಬಿದ್ದಿದ್ದು ನಮಗೆ ನೋವು ಉಂಟು ಮಾಡಿದೆ. ನಮ್ಮ ಉದ್ದೇಶ ಒಳ್ಳೆಯದಾಗಿತ್ತು ಆದರೆ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳು ಕಳೆದುಹೋದದ್ದು ವ್ಯತ್ಯಾಸವನ್ನುಂಟು ಮಾಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ (ಬ್ಯಾಟಿಂಗ್‌ಗಾಗಿ) ಸ್ವಲ್ಪ ಉತ್ತಮವಾಯಿತು, ಆದರೆ ನಮ್ಮ ಬೌಲರ್‌ಗಳು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು ಎಂದು ರಜತ್ ಶ್ಲಾಘಿಸಿದ್ದಾರೆ.
ಆರ್‌ಸಿಬಿ ನೀಡಿದ್ದ 170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡ 17.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಸೇರಿಸಿತು. ಈ ವೇಳೆ ಜೋಸ್ ಬಟ್ಲರ್ 39 ಎಸೆತಗಳಲ್ಲಿ 73 ರನ್ ಸಿಡಿಸಿದರು. ಇನ್ನು ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅಮೋಘ ಬ್ಯಾಟಿಂಗ್ ನಡೆಸಿ 49 ರನ್ ಕಲೆ ಹಾಕಿದರು.