Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೋಲ್ಡರ್‌ ಕ್ಯಾಚ್‌ಗೆ ರಜತ್‌ ಪಾಟಿದಾರ್ ಬಲಿ: ವಿವಾದ ಹುಟ್ಟಿಸಿದ ಕ್ಯಾಚ್

19ನೇ ಆವೃತ್ತಿ ಐಪಿಎಲ್‌ನ 42ನೇ ಪಂದ್ಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ವಿರಾಟ್‌ ಕೊಹ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವ ಸೂಚನೆ ನೀಡಿದರೂ, ಸಹ ಇವರ ಆಟಕ್ಕೆ ರಬಾಡ ಬ್ರೇಕ್ ಹಾಕಿದರು. ವಿರಾಟ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ರಜತ್ ಪಾಟಿದಾರ್ ಭರವಸೆ ಮೂಡಿಸಿದ್ದರು.

ರಜತ್ ಪಾಟಿದಾರ್ ಸಹ ಮೈದಾನಕ್ಕೆ ಇಳಿಯುತ್ತಿದ್ದಂತೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಸೂಚನೆಯನ್ನೇ ನೀಡಿದರು. ಅಲ್ಲದೆ 15 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 19 ರನ್‌ ಬಾರಿಸಿ ಔಟ್ ಆದರು. ಆದರೆ ಜೇಸನ್‌ ಹೋಲ್ಡರ್‌ ಹಿಡಿದ ಕ್ಯಾಚ್‌ ವಿವಾದ ಹುಟ್ಟಿಸಿದೆ.

Rajat Patidar s

ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರಿಗೆ ಅರ್ಷದ್ ಖಾನ್‌ ಅವರು ಶಾರ್ಟ್ ಲೆಂತ್ ಎಸೆತವನ್ನು ಹಾಕಿದರು. ಈ ಎಸೆತ ನಿಧಾನವಾಗಿ ಬ್ಯಾಟ್‌ಗೆ ಬಂದಿತು. ಈ ಚೆಂಡನ್ನು ರಜತ್ ಪಾಟಿದಾರ್ ಪುಲ್ ಮಾಡಲು ಹೋದರು. ಚೆಂಡು ಬ್ಯಾಟನ್‌ ಮೇಲ್ಭಾಗದ ಅಂಚಿಗೆ ತಾಗಿ, ಗಾಳಿಯಲ್ಲಿ ಚಿಮ್ಮಿತು.

ವಿವಾದದ ಕ್ಯಾಚ್

ಈ ಕ್ಯಾಚ್‌ನ್ನು ಪಡೆಯಲು ಜೇಸನ್‌ ಹೋಲ್ಡರ್‌ ಹಿಡಿಯಲು ಡೀಪ್ ಸ್ಕ್ವೇರ್ ಲೆಗ್‌ನಿಂದ ಓಡಿ ಬಂದರು. ಶಾರ್ಟ್ ಫೈನ್ ಲೆಗ್‌ನಿಂದ ಓಡಿ ಬರುತ್ತಿರುವ ರಬಾಡ ಹೋಲ್ಡರ್‌ ಕ್ಯಾಚ್ ಪಡೆಯುವುದನ್ನು ನೋಡಿ ಹಿಂದೆ ಸರಿದರು. ಹೋಲ್ಡರ್‌ ಬಲಕ್ಕೆ ಡೈವ್ ಮಾಡಿ ಕ್ಯಾಚ್ ಪಡೆದರು.

ಜೇಸನ್‌ ಹೋಲ್ಡರ್‌ ಕ್ಯಾಚ್ ಪಡೆದ ಬಳಿಕ ಬಿದ್ದಾಗ ಅವರು ಚೆಂಡು ಹಿಡಿದಿದ್ದ ಎಡಗೈ ಮೈದಾನಕ್ಕೆ ತಾಗಿತು. ಅಲ್ಲದೆ ಇವರು ಗ್ರೌಂಡ್‌ನಿಂದ ಮೇಲೇಳುವಾಗಲೂ ಚೆಂಡನ್ನು ನೆಲಕ್ಕೆ ಮುಟ್ಟಿಸಿ ಏಳುತ್ತಾರೆ. ನಿಜಕ್ಕೂ ಈ ಕ್ಯಾಚ್ ವಿವಾದಕ್ಕೆ ಕಾರಣವಾಗಿದೆ. ಇದನ್ನು ನೋಡಿ ವಿರಾಟ್ ಕೊಹ್ಲಿ ಬೌಂಡರಿ ಗೆರೆಯ ಆಚೆಗಿದ್ದ ನಾಲ್ಕನೇ ಅಂಪೈರ್ ಜೊತೆ ಚರ್ಚಿಸಿದರು. ಅಂಪೈರ್‌ ಮುಂದೆ, ಕೊಹ್ಲಿ ಸತತವಾಗಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಇದ್ದರು.

Story first published: Thursday, April 30, 2026, 20:37 [IST]
Other articles published on Apr 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+