ತಮ್ಮನ್ನು RCB ತಂಡದಲ್ಲಿ ಉಳಿಸಿಕೊಳ್ಳುವಂತೆ ರಣಜಿ ಟ್ರೋಫಿಯಲ್ಲಿ ಅಬ್ಬರಿಸಿದ ಸ್ಟಾರ್ ಪ್ಲೇಯರ್: ಫ್ಯಾನ್ಸ್ ಫುಲ್ ಖುಷ್
ಇಂಡಿಯನ್ ಪ್ರೀಮಿಯರ್ ಲೀಗ್‌ನ ರಿಟೆನ್ಷನ್‌ಗೆ ಲೀಸ್ಟ್ ಸಲ್ಲಿಸಲು ದಿನಗಣನೆ ಆರಂಭವಾಗಿದೆ. ಗುರುವಾರ ಐಪಿಎಲ್ ಮಾಲೀಕರು ತಾವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಿದೆ. ಈ ಬೆನ್ನಲ್ಲೆ ಎಲ್ಲ ತಂಡಗಳು ತಮ್ಮ ತಮ್ಮ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಈ ಮಧ್ಯೆ ಇಂದೋರ್‌ನಿಂದ ಒಂದು ಸುದ್ದಿ ಬಂದಿದ್ದು, ಆರ್‌ಸಿಬಿ ಚಿತ್ತ ಆ ಪ್ಲೇಯರ್‌ನತ್ತ ನೆಟ್ಟಿದೆ.
ಆರ್‌ಸಿಬಿಯ ಸ್ಟಾರ್ ಪ್ಲೇಯರ್ ಒಬ್ಬರು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಮಧ್ಯ ಪ್ರದೇಶದ ಪರ ಬ್ಯಾಟ್ ಮಾಡಿದ ಅಬ್ಬರದ ಶಶತಕ ಸಿಡಿಸಿದ್ದಾರೆ. ಇವರ ಬ್ಯಾಟಿಂಗ್ ವೈಭವ ಕಂಡು ಅಭಿಮಾನಿಗಳು ಸ್ಟನ್ ಆಗಿದ್ದಾರೆ. ಇವರು ತಮ್ಮ ಅಮೋಘ ಬ್ಯಾಟಿಂಗ್‌ನಿಂದ ಐಪಿಎಲ್ ಮಾಲೀಕರಿಗೆ ತಮ್ಮನ್ನು ತಂಡದಲ್ಲಿ ಉಳಿಸಿಕೊಳ್ಳುವಂತೆ ಪ್ರದರ್ಶನ ನೀಡಿದ್ದಾರೆ.

ವೇಗದ ಶತಕ ಸಿಡಿಸಿದ ಬ್ಯಾಟರ್ ಯಾರು?
ಇಂದೋರ್ ನಡೆದ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ ಮಧ್ಯ ಪ್ರದೇಶ ಬ್ಯಾಟರ್ ರಜತ್ ಪಟೀದಾರ್ ಆರ್ಭಟಿಸಿದ್ದಾರೆ. ತಮ್ಮ ಧಾಮಕೆದಾರ್ ಬ್ಯಾಟಿಂಗ್ ಪ್ರದರ್ಶನದಿಂದ ಇವರು ಎದುರಾಳಿ ಬೌಲರ್‌ಗಳನ್ನು ಕಾಡಿದ್ದಾರೆ. ಮಂಗಳವಾರ ರಜತ್ ಜಸ್ಟ್ 102 ಎಸೆತಗಳಲ್ಲಿ 13 ಬೌಂಡರಿ, 7 ಸಿಕ್ಸರ್ ಸಹಾಯದಿಂದ 159 ರನ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ರಜತ್ ಸೊಬಗಿನ ಬ್ಯಾಟಿಂಗ್ ಫಲವಾಗಿ ಮಧ್ಯ ಪ್ರದೇಶ 4 ವಿಕೆಟ್ ನಷ್ಟಕ್ಕೆ 308 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಹರಿಯಾಣ 3 ವಿಕೆಟ್ ನಷ್ಟಕ್ಕೆ 115 ರನ್ ಸಿಡಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ರಜತ್ ಐಪಿಎಲ್ ಸಾಧನೆ
ಐಪಿಎಲ್‌ನಲ್ಲಿ ಇವರು 27 ಪಂದ್ಯಗಳ 24 ಇನಿಂಗ್ಸ್‌ನಲ್ಲಿ 34.73ರ ಸರಾಸರಿಯಲ್ಲಿ 799 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 7 ಅರ್ಧಶತಕ ಸೇರಿವೆ. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 64 ಪಂದ್ಯಗಳ 110 ಇನಿಂಗ್ಸ್‌ಗಳಲ್ಲಿ 4518 ರನ್ ಸಿಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಶತಕ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. IPL 2024 ರಲ್ಲಿ, ರಜತ್ ಪಟಿದಾರ RCB ಪರ ಮೂರನೇ ಗರಿಷ್ಠ ರನ್ ಗಳಿಸಿದ ಆಟಗಾರ. ಇವರು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ವೇಗವಾಗಿ ಶತಕ ಬಾರಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ರಣಜಿಯಲ್ಲಿ ವೇಗದ ಶತಕ ಬಾರಿಸಿದ ಬ್ಯಾಟರ್ಸ್
- 48 ಎಸೆತಗಳು - ರಿಷಭ್ ಪಂತ್ ವಿರುದ್ಧ ಜಾರ್ಖಂಡ್, 2016/17
- 56 ಎಸೆತಗಳು - ರಾಜೇಶ್ ಬೋರಾ ವಿರುದ್ಧ ತ್ರಿಪುರ, 1987/88
- 56 ಎಸೆತಗಳು - ರಿಯಾನ್ ಪರಾಗ್ ವಿರುದ್ಧ ಛತ್ತೀಸ್‌ಗಢ, 2023/24
- 60 ಎಸೆತಗಳು - ರೂಬೆನ್ ಪಾಲ್ ವಿರುದ್ಧ ಗೋವಾ, 1995/96
- 68 ಎಸೆತಗಳು - ರಜತ್ ಪಾಟಿದಾರ್ ವಿರುದ್ಧ ಹರಿಯಾಣ, 2023/24
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications