For Quick Alerts
ALLOW NOTIFICATIONS  
For Daily Alerts
 

Rajat Patidar: ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾದ ರಜತ್‌ ಪಟಿದಾರ್

ರಜತ್‌ ಪಟಿದಾರ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ಅಬ್ಬರಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಜತ್‌ ತಂಡದ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಟಾಪ್‌ ಆರ್ಡರ್‌ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್‌ ಕಟ್ಟದೇ ಇದ್ದಾಗ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಜತ್‌ ಪಟಿದಾರ್ ತಮ್ಮ ಜವಾಬ್ದಾರಿಯನ್ನು ಸಮರ್ಥಿವಾಗಿ ನಿಭಾಯಿಸಿದ ರಜತ್‌ ಅಬ್ಬರಿಸಿದರು. ಪರಿಣಾಮ ಇವರ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ.

Rajat Patidar Shines as RCB s Most Valuable Player Claims Man of the Match Award

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಪರವಾಗಿ ಟಾಸ್ ಬೀಳಲಿಲ್ಲ. ಹೀಗಾಗಿ ಆರ್‍‌ಸಿಬಿ ಮೊದಲು ಬ್ಯಾಟಿಂಗ್ ಮಾಡಲು ಬರಬೇಕಾಯಿತು. ಆರ್‌ಸಿಬಿ ಪರ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಬಂದ ತಕ್ಷಣ, ಸಿಎಸ್‌ಕೆ ಬೌಲರ್‌ಗಳ ಮೇಲೆ ದಾಳಿ ಮಾಡಿದರು. ಅವರು 32 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ 31 ರನ್ ಗಳಿಸುವಲ್ಲಿ ಯಶಸ್ವಿಯಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ದೇವದತ್ ಪಡಿಕ್ಕಲ್ 14 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಅಷ್ಟೇ ಬೌಂಡರಿಗಳ ಸಹಾಯದಿಂದ 27 ರನ್ ಗಳಿಸಿ ಔಟಾದರು.

ನಾಲ್ಕನೇ ಕ್ರಮಾಂಕದಲ್ಲಿ ಬಂದ ರಜತ್ ಪಾಟಿದಾರ್ ತಂಡದ ಪರ ನಾಯಕನ ಆಟವಾಡಿದರು. ಅವರು 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 51 ರನ್ ಬಾರಿಸಿದರು. ಟಿಮ್ ಡೇವಿಡ್ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು 196 ರನ್‌ಗಳ ಗುರಿ ತಲುಪಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 ರನ್‌ ಸೇರಿಸಿ ಸೋಲು ಕಂಡಿತು.

ಆರ್‍‌ಸಿಬಿ ನೀಡಿದ 197 ರನ್‌ಗಳ ಸವಾಲಿನ ಗುರಿಯನ್ನು ಸಿಎಸ್‌ಕೆ ತಂಡವು ಆರಂಭಿಕ ಹಿನ್ನಡೆ ಅನುಭವಿಸಿತು. ಮೊದಲ ಎರಡು ಓವರ್‌ಗಳಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ರಾಹುಲ್ ತ್ರಿಪಾಠಿ ಇಬ್ಬರೂ ಔಟ್ ಆದರು. ಇದು ಆತಿಥೇಯ ಚೆನ್ನೈ ತಂಡದ ಹಿನ್ನಡೆಎ ಕಾರಣವಾಯಿತು. ರಚಿನ್ ರವೀಂದ್ರ 31 ಎಸೆತಗಳಲ್ಲಿ 41 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರಯ. ಆದರೆ, ಮತ್ತೊಂದು ತುದಿಯಿಂದ ರಚಿನ್ ಅವರಿಗೆ ಸಾಥ್ ಸಿಗಲಿಲ್ಲ. ಇದಕ್ಕೆ ಆರ್‍‌ಸಿಬಿ ಬೌಲರ್ಸ್ ಅವಕಾಶ ಮಾಡಿಕೊಡಲಿಲ್ಲ.

Story first published: Friday, March 28, 2025, 23:46 [IST]
Other articles published on Mar 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+