Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿತ್ತ ಪತ್ರಕರ್ತ ರಜತ್ ಶರ್ಮಾ

Rajat Sharma resigns as DDCA president

ನವದೆಹಲಿ, ನವೆಂಬರ್ 16: ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರು ಶನಿವಾರ (ನವೆಂಬರ್ 16) ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿತ್ತಿದ್ದಾರೆ. ವಿವಿಧ ರೀತಿಯ ಒತ್ತಡಗಳಿಂದ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಶರ್ಮಾ ತಿಳಿಸಿದ್ದಾರೆ.

ಶರ್ಮಾ ಅವರ ಸುಮಾರು 20 ತಿಂಗಳ ಅಧಿಕಾರಾವಧಿಯು ಪ್ರಧಾನ ಕಾರ್ಯದರ್ಶಿ ವಿನೋದ್ ತಿಹರಾ ಅವರೊಂದಿಗಿನ ಸಾರ್ವಜನಿಕ ಭಿನ್ನಾಭಿಪ್ರಾಯಗಳಿಂದ ಕೂಡಿತ್ತು. ತಾರಾ ಅವರು ಸಂಸ್ಥೆಯಿಂದ ಸಾಕಷ್ಟು ಬೆಂಬಲವನ್ನು ಹೊಂದಿದ್ದರು. ಹೀಗಾಗಿ ಬೇಸತ್ತ ರಜತ್ ತನ್ನ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ.

'ಇಲ್ಲಿನ ಕ್ರಿಕೆಟ್ ಆಡಳಿತವು ಸದಾ ಹಿಂದೆ ಜಗ್ಗುವಂತ ಮತ್ತು ಒತ್ತಡದಿಂದ ಕೂಡಿದ ರೀತಿಯದ್ದಾಗಿದೆ. ಇಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಯಾವಾಗಲೂ ಕ್ರಿಕೆಟ್‌ನ ಹಿತಾಸಕ್ತಿಗೆ ವಿರುದ್ಧವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಾನು ಭಾವಿಸುತ್ತೇನೆ,' ಎಂದು ಶರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಜತ್ ಶರ್ಮಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಹೊತ್ತಿನ ಬಳಿಕ ಡಿಡಿಸಿಎ ಸಿಇಒ ರವಿ ಚೋಪ್ರಾ ಕೂಡ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದ ಇನ್ನಿಬ್ಬರು ಸದಸ್ಯರಾದ ಸುನಿಲ್ ವಲ್ಸನ್ ಮತ್ತು ಯಶ್‌ಪಾಲ್ ಶರ್ಮಾ ಕೂಡ ರಾಜೀನಾಮೆ ನೀಡಿದ್ದಾರೆ.

Story first published: Saturday, November 16, 2019, 17:09 [IST]
Other articles published on Nov 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+