Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Duleep Trophy Final: ಮತ್ತೊಂದು ಟ್ರೋಫಿ ಗೆದ್ದ RCB ನಾಯಕ

18 ವರ್ಷದ ಬಳಿಕ ಆರ್‌ಸಿಬಿ ತಂಡಕ್ಕೆ ಐಪಿಎಲ್‌ ಚಾಂಪಿಯನ್‌ ಪಟ್ಟವನ್ನು ತೊಡಿಸಿದ ನಾಯಕ ರಜತ್ ಪಾಟಿದಾರ್‌, ಮತ್ತೊಂದು ಟ್ರೋಫಿ ಎತ್ತಿ ಸಂಭ್ರಮಿಸಿದ್ದಾರೆ. ಬೆಂಗಳೂರಿನ ಹೊರ ವಲಯದಲ್ಲಿ ನಡೆದ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಸೆಂಟ್ರಲ್‌ ವಲಯ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಸೆಂಟ್ರಲ್‌ ವಲಯ 6 ವಿಕೆಟ್‌ಗಳಿಂದ ದಕ್ಷಿಣ ವಲಯ ತಂಡವನ್ನು ಮಣಿಸಿ, 7 ನೇ ಬಾರಿಗೆ ದುಲೀಪ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ದುಲೀಪ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ ಮೊದಲ ಇನಿಂಗ್ಸ್‌ನಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ರಜತ್‌ ಪಾಟಿದಾರ್‌ ಹಾಗೂ ಯಶ್‌ ರಾಥೋಡ್‌ ಅವರ ಶತಕದ ನೆರವಿನಿಂದ ಕೇಂದ್ರ ವಲಯ 511 ರನ್‌ಗಳಿಂದ ಜಯ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ 426 ರನ್‌ ಸೇರಿಸಿತು. ಕರ್ನಾಟಕದ ರವಿಚಂದ್ರನ್‌ ಸ್ಮರಣ್‌ 67, ಆಂಡ್ರಿ ಸಿದ್ಧಾರ್ಥ್ ಅಜೇಯ 84, ಅಂಕಿತ್ ಶರ್ಮಾ 99 ಬಾರಿಸಿ ತಂಡಕ್ಕೆ ಆಧಾರವಾದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೇಂದ್ರ ವಲಯ 4 ವಿಕೆಟ್‌ಗೆ 66 ರನ್‌ ಸೇರಿಸಿ ಜಯ ಸಾಧಿಸಿತು.

Rajath Patidar leads Central Zone to a spectacular Duleep Trophy victory their 7th title

ನಾಲ್ಕನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ವಲಯ 426 ರನ್‌ಗಳಿಗೆ ಆಲೌಟ್ ಆಯಿತು. ಸೋಮವಾರ 65 ರನ್‌ಗಳನ್ನು ಬೆನ್ನಟ್ಟಿದ ಕೇಂದ್ರ ವಲಯದ ಆರಂಭ ಸಹ ಕಳಪೆಯಾಗಿತ್ತು. ಡ್ಯಾನಿಶ್ ಮಾಲೆವಾರ್ (5), ಶುಭಮ್ ಶರ್ಮಾ (8), ಜೈನ ಸಾರಾಂಶ (4) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ದಕ್ಷಿಣ ವಲಯ 3 ವಿಕೆಟ್‌ ನಷ್ಟಕ್ಕೆ 24 ರನ್‌ ಸೇರಿಸಿ ಸಂಕಷ್ಟದಲ್ಲಿತ್ತು. ಆಗ ನಾಯಕ ರಜತ್‌ ಪಾಟಿದಾರ್ ಹಾಗೂ ಅಕ್ಷಯ್‌ ವಾಡಕರ್‌ ಜೋಡಿ ಕೊಂಚ ತಂಡಕ್ಕೆ ಆಧಾರವಾಯಿತು. ರಜತ್‌ 2 ಬೌಂಡರಿ ನೆರವಿನಿಂದ 13 ರನ್‌ ಸಿಡಿಸಿ ಔಟ್ ಆದರು. ಕೊನೆಯಲ್ಲಿ ಅಕ್ಷಯ್‌ (ಅಜೇಯ 19) ಹಾಗೂ ಯಶ್‌ ರಾಥೋಡ್‌ (ಅಜೇಯ 13) ರನ್‌ ಕಲೆ ಹಾಕಿ ಜಯದಲ್ಲಿ ಮಿಂಚಿದರು.

ರಜತ್‌ ಹೇಳಿದ್ದೇನು?

ದುಲೀಪ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಬಳಿಕ, ನಾಯಕ ರಜತ್ ಪಟಿದಾರ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ನಾಯಕ ಪ್ರಶಸ್ತಿಯನ್ನು ಪ್ರೀತಿಸುತ್ತಾನೆ. ಫೈನಲ್‌ ಮಾತ್ರವಲ್ಲದೇ ಇಡೀ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ನಮ್ಮ ಬೌಲರ್‌ಗಳು ಸಹ ಅಮೋಘ ಪ್ರದರ್ಶನ ನೀಡಿದ್ದಾರೆ. ವಿಕೆಟ್‌ ಸ್ಪಲ್ಪ ಒಣಗಿತ್ತು, ಆದ್ದರಿಂದ ನಾವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆವು. ಮೊದಲ ಇನಿಂಗ್ಸ್‌ನಲ್ಲಿ ನಾವು ಎದುರಾಳಿ ತಂಡವನ್ನು ಬೇಗ ಕಟ್ಟಿ ಹಾಕುವುದೇ ನಮ್ಮ ಗುರಿಯಾಗಿತ್ತು. ಈ ಪಿಚ್‌ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರಿಕ್ಷೀಸಿದ್ದೆವು. ಸ್ಪಿನ್ ಬೌಲರ್‌ಗಳ ಸಹ ಈ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Story first published: Monday, September 15, 2025, 13:55 [IST]
Other articles published on Sep 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+