For Quick Alerts
ALLOW NOTIFICATIONS  
For Daily Alerts
 

ಸಂಕಷ್ಟದ ಸಮಯವನ್ನು ರಾಜೇಶ್ವರಿ ಮೆಟ್ಟಿನಿಂತಿದ್ದು ಹೇಗೆ? ಇಲ್ಲಿದೆ ಕನ್ನಡತಿ ಸ್ಪೂರ್ತಿದಾಯಕ ಕಥೆ

ಗುಜರಾತ್ ಜೈಂಟ್ಸ್ ಇತಿಹಾಸ ಸೃಷ್ಟಿಸುವ ಕನಸು ಹೊಂದಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಗುಜರಾತ್ ಪ್ಲೇ ಆಫ್ ಪ್ರವೇಶಿಸುವ ಕನಸಿನಲ್ಲಿದೆ. ಚೊಚ್ಚಲ ಬಾರಿಗೆ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯಲು ಜೈಂಟ್ಸ್‌ಗೆ ಉತ್ತಮ ಅವಕಾಶವಾಗಿದೆ.

ಗುಜರಾತ್‌ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಹಲುವ ಆಟಗಾರ್ತಿಯರು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಇದರಲ್ಲಿ ಎದ್ದು ಕಾಣುವ ಹೆಸರು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್. ಇವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ.

Rajeshwari Gayakwad

34 ವರ್ಷದ ರಾಜೇಶ್ವರಿ ಗಾಯಕ್ವಾಡ್‌ ಡಬ್ಲ್ಯೂಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ್ತಿ. ಇವರು ಆಡಿದ 7 ಪಂದ್ಯಗಳಲ್ಲಿ 10 ವಿಕೆಟ್‌ ಪಡೆದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ವೇಳೆ ಇವರ ಎಕಾನಮಿ 7.63 ಆಗಿದೆ. ಗುಜರಾತ್ ಜೈಂಟ್ಸ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆಯಲು ಮಹತ್ವದ ಪಾತ್ರವಹಿಸಿದ್ದಾರೆ. ಇವರು ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ 4ನೇ ಭಾರತೀಯ ಬೌಲರ್‌ ಆಗಿದ್ದಾರೆ. ಕಳೆದ ಮೂರು ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದ ರಾಜೇಶ್ವರಿ ಗಾಯಕ್ವಾಡ್‌ ಈ ಬಾರಿ ಅಬ್ಬರದ ಪ್ರದರ್ಶನ ನೀಡಿದ್ದಾರೆ.

ಸವಾಲನ್ನು ಮೆಟ್ಟನಿಂತಿದ್ದು ಹೇಗೆ?

ರಾಜೇಶ್ವರಿ ಗಾಯಕ್ವಾಡ್‌ ಮೈಖೇಲ್‌ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ವೈಯಕ್ತಿಕ ಸಾಧನೆಗಿಂತಲೂ ತಂಡದ ಯಶಸ್ಸನ್ನು ಕೇಂದ್ರಿ ಕರಿಸಿದರು. ನಾನು ಪಂದ್ಯ ಆಡಲು ಮೈದಾನಕ್ಕೆ ಇಳಿದಾಗ, ನಾನು ವಿಕೆಟ್‌ ಪಡೆಯುವ ಬಗ್ಗೆ ಯೋಚಿಸುತ್ತಿರಲಿಲ್ಲ. ಬದಲಿಗೆ ನಾನು ತಂಡಕ್ಕೆ ಬೆಸ್ಟ್‌ ನೀಡುವ ಯೋಜನೆ ಹೊಂದಿದ್ದೆ. ಇದು ನಿಜಕ್ಕೂ ನನಗೆ ಖುಷಿ ನೀಡಿದೆ. ನನ್ನ ಪ್ರದರ್ಶನ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ತೃಪ್ತಿ ತಂದಿದೆ. ಡೆಲ್ಲಿ ವಿರುದ್ಧ ಆತ್ಮವಿಶ್ವಾಸದಿಂದಲೇ ಕಣಕ್ಕೆ ಇಳಿಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ತಂತ್ರಜ್ಞಾನ ಇಂದಿನ ಜಗತ್ತಿನಲ್ಲಿ ದೊಡ್ಡ ರೋಲ್ ಪ್ಲೇ ಮಾಡುತ್ತದೆ. ನಾನು ತಿಳಿದ ಹಾಗೆ ಎಲ್ಲವೂ ಇದರ ಮೇಲೆ ಅವಲಂಬಿತವಾಗಿದೆ. ನಿದ್ದೆ ಸಹ ನಮಗೆ ಬಹು ಮುಖ್ಯ. ಈ ಬಗ್ಗೆ ನಾನು ಗಮನ ಹರಿಸುತ್ತೇನೆ. ನಮಗೆ ಬೇಕಾದಷ್ಟು ಹೊತ್ತು ನಿದ್ದೇ ಮಾಡಿದ್ರೆ, ಮುಂದಿನ ದಿನ ಲವಲವಿಕೆಯಿಂದ ಇರುತ್ತೇನೆ ಎಂದು ರಾಜೇಶ್ವರಿ ವಿವರಿಸಿದ್ದಾರೆ.

ಗುಜರಾತ್ ಜೈಂಟ್ಸ್ ತಂಡದ ನಾಯಕಿ ಶ್ಲೆ ಗಾರ್ಡ್ನರ್‌ ಅವರನ್ನು ರಾಜೇಶ್ವರಿ ಕೊಂಡಾಡಿದ್ದಾರೆ. ಬರೀ ಆಶ್ಲೆ ಅಷ್ಟೇ ಅಲ್ಲ ವಿದೇಶಿ ಆಟಗಾರರು ಉತ್ತಮ ಸಹಕಾರ ನೀಡಿದ್ದಾರೆ. ಎಲ್ಲರೊಂದಿಗೆಯೂ ಒಳ್ಳೆಯ ಸಂವಹನ, ಕುಟುಂಬದಂತೆ ಮಾಡಿದೆ ಎಂದು ರಾಜೇಶ್ವರಿ ತಿಳಿಸಿದ್ದಾರೆ.

ರಾಜೇಶ್ವರಿ ಸಾಧನೆ

ಭಾರತದ ಪರವೂ ರಾಜೇಶ್ವರಿ ಗಾಯಕ್ವಾಡ್‌ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಭಾರತದ ಪರ ಆಡಿದ 127 ಪಂದ್ಯಗಳಲ್ಲಿ 171 ವಿಕೆಟ್‌ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಭಾರತ ತಂಡ ಸೇರಲು ರಾಜೇಶ್ವರಿ ಹರಸಾಹಸ ಪಡುತ್ತಿದ್ದಾರೆ.

Story first published: Tuesday, February 3, 2026, 17:10 [IST]
Other articles published on Feb 3, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+