Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾಕ್ಕೆ 'ಲವ್ಲಿ ಡಿನ್ನರ್' ಬಡಿಸಿದ ಪೂಜಾರಾ

ರಾಜ್ ಕೋಟ್, ಅ.16: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದೋರ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಂಎಸ್ ಧೋನಿ ಪಡೆಗೆ ರಾಜ್ ಕೋಟ್ ನಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ. ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರಾ ಅವರು ಟೀಂ ಇಂಡಿಯಾ ಸದಸ್ಯರಿಗೆ 'ಪ್ರೀತಿಯ ಭೋಜನ' ಬಡಿಸಿದ್ದಾರೆ.

ರಾಜ್ ಕೋಟ್ ಗೆ ಬಂದಿಳಿದಿರುವ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ, ಭಾನುವಾರ (ಅಕ್ಟೋಬರ್ 18) ಮೂರನೇ ಏಕದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯ 1-1 ರ ಸಮಬಲ ಕಂಡಿರುವುದರಿಂದ ಮೂರನೇ ಏಕದಿನ ಪಂದ್ಯ ಕುತೂಹಲ ಕೆರಳಿಸಿದೆ. [ಗಾಂಧಿ-ಮಂಡೇಲಾ ಕ್ರಿಕೆಟ್ ಸರಣಿ ಫುಲ್ ಗೈಡ್]

Cheteshwar Pujara hosts 'lovely dinner' for MS Dhoni-led Indian team in Rajkot

ಕಾನ್ಪುರದಲ್ಲಿ ದಕ್ಷಿಣ ಆಫ್ರಿಕಾ ತಂಡ 5 ರನ್ ಗಳ ರೋಚಕ ಜಯ ದಾಖಲಿಸಿದರೆ, ಇಂದೋರ್ ನಲ್ಲಿ ಧೋನಿ ಆಟದ ಮೂಲಕ ಟೀಂ ಇಂಡಿಯಾ 22 ರನ್ ಗಳ ಗೆಲುವು ಸಾಧಿಸಿತು.

ಟೀಂ ಇಂಡಿಯಾಗೆ ಚೇತೇಶ್ವರ್ ಪೂಜಾರಾ ಹಾಗೂ ಅವರ ತಂದೆ ಅರವಿಂದ್ ಪೂಜಾರಾರಿಂದ ಪ್ರೀತಿಯ ಡಿನ್ನರ್ ಸಿಕ್ಕಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿದೆ. [ಧೋನಿಗೆ ಬಹುಪರಾಕ್ ಎಂದ ಅಭಿಮಾನಿಗಳು]

ಚಿತ್ರದಲ್ಲಿ ಪೂಜಾರಾ ಜೊತೆಗೆ ವಿರಾಟ್ ಕೊಹ್ಲಿ, ಧೋನಿ, ಶಿಖರ್ ಧವನ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಆರ್ ಅಶ್ವಿನ್ ಹಾಗೂ ಪೂಜಾರಾ ಕುಟುಂಬದ ಸದಸ್ಯರನ್ನು ಕಾಣಬಹುದು.

ಮುಂದಿನ ತಿಂಗಳು ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ್ ಪೂಜಾರಾ ಕೂಡಾ ಆಡಲಿದ್ದಾರೆ. ಪ್ರೀತಿಯ ಡಿನ್ನರ್ ನೀಡಿದ ಪೂಜಾರಾ ಹಾಗೂ ಅವರ ಕುಟುಂಬಕ್ಕೆ ಬಿಸಿಸಿಐ ಹಾಗೂ ಎಂಎಸ್ ಧೋನಿ ಅಂಡ್ ಟೀಂ ಥ್ಯಾಂಕ್ಸ್ ಹೇಳಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+