Ram Mandir Inauguration: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ ಐತಿಹಾಸಿಕ ಕಾರ್ಯಕ್ರಮದಲ್ಲಿ ಏಕೆ ಭಾಗಿಯಾಗಿಲ್ಲ?
ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದೇ ದೇಶ ವಾಸಿಗಳ ಕನಸು. ಆದರೆ ಕಾರ್ಯಕ್ರಮಕ್ಕೆ ಯಾರು ಬಾರದಂತೆ ಈಗಾಗಲೇ ಕಟ್ಟಪಟ್ಟಣೆ ಹೊರಡಿಸಲಾಗಿತ್ತು. ಅಲ್ಲದೆ ಹಲವು ಕ್ಷೇತ್ರದ ಗಣ್ಯರಿಗೆ ರಾಮ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿತ್ತು.
ಆಹ್ವಾನ ನೀಡಲಾಗಿದ್ದ ಗಣ್ಯರು ಅಯೋಧ್ಯೆಯಲ್ಲಿ ಕಾಣಿಸಿಕೊಂಡರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಲೇಡಿ ತೆಂಡೂಲ್ಕರ್ ಖ್ಯಾತಿಯ ಮಿಥಾಲಿ ರಾಜ್, ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಟೀಮ್ ಇಂಡಿಯಾದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಹಾಗೂ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆದರೆ, ಈ ಕಾರ್ಯಕ್ರಮದ ಆಹ್ವಾವನ್ನು ಪಡೆದ ಇನ್ನು ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಇದರಲ್ಲಿ ಎದ್ದು ಕಾಣುವ ಹೆಸರುಗಳು ಅಂದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಈ ಆಟಗಾರರು ಏಕೆ ಹೋಗಿಲ್ಲ ಎಂಬ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಯೋಧ್ಯೆಯಲ್ಲಿ ರಾಮಲಾಲಾನನ್ನು ಪ್ರತಿಷ್ಠಾಪಿಸಬೇಕು ಎಂಬ ದಶಕಗಳ ಕನಸು ನನಸಾಗಿದೆ.
ವಿರಾಟ್ ಕೊಹ್ಲಿ, ಧೋನಿ ಏಕೆ ಭಾಗವಿಸಿಲ್ಲ ಎಂಬ ಬಗ್ಗೆ ಇನ್ನು ಅಧಿಕೃತ ಹೇಳಿಕೆಗಳು ಬಂದಿಲ್ಲ. ರೋಹಿತ್ ಶರ್ಮಾ ಭಾಗವಹಿಸಿದಿರುವ ಬಗ್ಗೆ ಮಾಹಿತಿಯೊಂದು ಸಿಕ್ಕಿದೆ. ಕ್ರಿಕ್‌ಬಜ್ ವರದಿಯಂತೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ರೋಹಿತ್ ಶರ್ಮಾ ಮುಂಬೈದಲ್ಲಿ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ ತಂಡ ಈಗಾಗಲೇ ಹೈದರಾಬಾದ್ ತಲುಪಿದ್ದು, ಅಭ್ಯಾಸವನ್ನು ಆರಂಭಿಸಿದೆ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ರಾಮ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಬಿಸಿಸಿಐ ಬಳಿ ಒಂದು ದಿನದ ರಜೆಯನ್ನು ಸಹ ಪಡೆದಿದ್ದರು. ಆದರೆ ವಿರಾಟ್ ಕೊಹ್ಲಿ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ಜನವರಿ 25ರಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್ ಫೆಬ್ರವರಿ 2ರಿಂದ ವಿಶಾಖಪಟ್ಟಣಂನಲ್ಲಿ, ಮೂರನೇ ಟೆಸ್ಟ್ ಫೆಬ್ರವರಿ 15ರಿಂದ ರಾಜಕೋಟ್‌ನಲ್ಲಿ, ನಾಲ್ಕನೇ ಟೆಸ್ಟ್ ಫೆಬ್ರವರಿ 23 ರಿಂದ ರಾಂಚಿಯಲ್ಲಿ, ಐದನೇ ಟೆಸ್ಟ್ ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಈಗಾಗಲೇ ಭಾರತಕ್ಕೆ ಇಂಗ್ಲೆಂಡ್ ತಂಡ ಬಂದಿದೆ. ಇನ್ನು ಈ ಟೆಸ್ಟ್ ಸರಣಿಯ ಎರಡು ಟೆಸ್ಟ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications