ಯುವರಾಜ್ ಸಿಂಗ್ ಆಡಿದ್ದ ಮೈದಾನ ತಾತ್ಕಾಲಿಕ ಜೈಲಾಗುತ್ತಿದೆ
ಪಂಚಕುಲ, ಆಗಸ್ಟ್ 23: ಕ್ರಿಕೆಟ್ ತಾರೆಗಳಾದ ಕಪಿಲ್ ದೇವ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರು ಅಭ್ಯಾಸ ನಡೆಸಿದ ಕ್ರಿಕೆಟ್ ಮೈದಾನ ಆಗಸ್ಟ್ 25ರಂದು ತಾತ್ಕಾಲಿಕವಾಗಿ ಜೈಲಾಗಿ ಪರಿವರ್ತನೆಯಾಗುತ್ತಿದೆ.
ಆದರೆ, ಇದು ಯಾವುದೇ ಸಿನಿಮಾ ಶೂಟಿಂಗ್ ಗಾಗಿ ಅಲ್ಲ, ಬದಲಿಗೆ ಅತ್ಯಾಚಾರದ ಆರೋಪಿಯ ವಿಚಾರಣೆ, ತೀರ್ಪು ಆಲಿಸಲು ಸೇರುವ ಲಕ್ಷಾಂತರ ಮಂದಿಯನ್ನು ಒಂದೆಡೆ ಸೇರಿಸಲು ಮಾಡಿರುವ ಪ್ಲ್ಯಾನ್.

ದೇರಾ ಸಾಚಾ ಸೌಧ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನ್ಯಾಯಾಲಯ ಆಗಸ್ಟ್ 25 ರಂದು ಅಂತಿಮ ತೀರ್ಪು ಪ್ರಕಟಿಸುತ್ತಿದೆ. ಈ ಸಂದರ್ಭದಲ್ಲಿ ರಾಮ್ ರಹೀಮ್ ಸಿಂಗ್ ಅವರು ಖುದ್ದು ಹಾಜರಿರಬೇಕಾಗುತ್ತದೆ. ಲಕ್ಷಾಂತರ ಮಂದಿ ರಾಮ್ ರಹೀಮ್ ಅವರು ಅನುಯಾಯಿಗಳು ಪಂಚಕುಲಕ್ಕೆ ಧಾವಿಸಿ ಬರುತ್ತಿದ್ದಾರೆ.
ರಾಮ್ ರಹೀಮ್ ರ ಅನುಯಾಯಿಯಗಳನ್ನು ಆಗಸ್ಟ್ 25 ರಂದು ಕೂಡಿ ಹಾಕಲು ಸ್ಟೇಡಿಯಂನ್ನು ಜೈಲಾಗಿ ಪರಿವರ್ತಿಸುವಂತೆ ಗೃಹಕಾರ್ಯದರ್ಶಿ ಅನುರಾಗ್ ಅಗರ್ ವಾಲ್ ಆದೇಶ ಹೊರಡಿಸಿದ್ದಾರೆ ಎಂದು 'ಟ್ರಿಬ್ಯೂನ್' ವರದಿ ಮಾಡಿದೆ.
ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಹರ್ಯಾಣ ಪೊಲೀಸರು ಹಾಗೂ ಅರೆ ಸೇನಾ ಪಡೆ ಸಹಿತ 2000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪಂಚಕುಲದ ಸೆಕ್ಟರ್ 23ರ ನಾಮ್ ಚರ್ಚಾಘರ್‌ನಲ್ಲಿ 20,000ಕ್ಕೂ ಅನುಯಾಯಿಗಳು ಈಗಾಗಲೇ ಆಗಮಿಸಿದ್ದಾರೆ. ಪಂಚಕುಲದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರಕಾರ 35 ಅರೆಸೇನಾ ಪಡೆಗಳನ್ನು ಕಳಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications