ಧೋನಿ ಗವಾಸ್ಕರ್ ಜನ್ಮ ಜಾಲಾಡಿದ ರಾಮಚಂದ್ರ ಗುಹಾ
ಬೆಂಗಳೂರು, ಜೂನ್ 02 : ವೈಯಕ್ತಿಕ ಕಾರಣಕ್ಕಾಗಿ ಬಿಸಿಸಿಐ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾಗಿ ಹೇಳಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಅವರು, ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಗಾರರ ಸಮಿತಿಯ ಚೇರ್ಮನ್ ವಿನೋದ್ ರೈ ಅವರಿಗೆ ಪತ್ರ ಬರೆದಿದ್ದು, ಧೋನಿ ಸೇರಿದಂತೆ ಹಲವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿನೋದ್ ರೈ ಅವರಿಗೆ ಬರೆದಿರುವ ಈ ಪತ್ರ ಕ್ರಿಕೆಟ್ ನೆಕ್ಸ್ಟ್ ಗೆ ಲಭ್ಯವಾಗಿದ್ದು, ಅದರಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಅವರನ್ನು ಭಾರತೀಯ ಕ್ರಿಕೆಟ್ ಮಂಡಳಿ ಅತ್ಯಂತ ಕೀಳಾಗಿ ನಡೆಸಿಕೊಂಡಿದ್ದರ ಬಗ್ಗೆಯೂ ರಾಮಚಂದ್ರ ಗುಹಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.[ಬಿಸಿಸಿಐ ಆಡಳಿತ ಸಮಿತಿಗೆ ರಾಮಚಂದ್ರ ಗುಹಾ ರಾಜೀನಾಮೆ!]
ರಾಮಚಂದ್ರ ಗುಹಾ ಅವರು ಮಹೇಂದ್ರ ಸಿಂಗ್ ಧೋನಿ, ಸುನೀಲ್ ಗವಾಸ್ಕರ್ ಅವರ ಜನ್ಮವನ್ನು ಜಾಲಾಡಿದ್ದಾರೆ. ಕರ್ನಾಟಕದವರೇ ಆದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನೂ ಗುಹಾ ಬಿಟ್ಟಿಲ್ಲ. ಕ್ರಿಕೆಟ್ ತಂಡ ಹೆಡ್ ಕೋಚ್ ಅನಿಲ್ ಕುಂಬ್ಳೆ ಪರವಾಗಿ ಬ್ಯಾಟಿಂಗ್ ಮಾಡಿರುವ ಗುಹಾ ಅವರು ವಿನೋದ್ ರೈ ಅವರಿಗೆ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ.

ಧೋನಿಗೆ ಎ ಗ್ರೇಡ್ ನೀಡಿದ್ದು ಸರಿಯಲ್ಲ
ಭಾರತೀಯ ಕ್ರಿಕೆಟ್ ಆಟಗಾರರಿಗೆ ಕಾಂಟ್ರಾಕ್ಟ್ ನೀಡುವ ವ್ಯವಸ್ಥೆಯಲ್ಲಿ ಇರುವ ಸೂಪರ್ ಸ್ಟಾರ್ ಸಂಸ್ಕೃತಿ ಕ್ರಿಕೆಟನ್ನು ಕಲುಷಿತಗೊಳಿಸಿದೆ. ಮಹೇಂದ್ರ ಸಿಂಗ್ ಧೋನಿ ಅವರು ಟೆಸ್ಟ್ ಕ್ರಿಕೆಟ್ ನಿಂದ ಹಿಂದೆ ಸರಿದಾಗ ಅವರಿಗೆ 'ಎ' ಗ್ರೇಡ್ ನೀಡಿದ್ದು ಸರಿಯಲ್ಲ, ಅದು ತಪ್ಪು ಸಂದೇಶ ರವಾನಿಸುತ್ತದೆ ನಾನು ವಾದಿಸಿದ್ದೆ.

ಅನಿಲ್ ಕುಂಬ್ಳೆ ಅವಧಿ ಹೆಚ್ಚಿಸಬೇಕಿತ್ತು
ಭಾರತ ಕಳೆದ ಸೀಸನ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದೆ. ಇದರ ಶ್ರೇಯಸ್ಸನ್ನೆಲ್ಲ ಕ್ರಿಕೆಟ್ ಆಟಗಾರರಿಗೆ ನೀಡಲಾಗುತ್ತದೆ. ಹಳೆಯ ದಾಖಲೆಗಳನ್ನು ನೋಡಿದರೆ ಶ್ರೇಯಸ್ಸಿನ ಸ್ವಲ್ಪ ಪಾಲನ್ನು ಪ್ರಮುಖ ಕೋಚ್ ಮತ್ತು ಇತರ ಸಿಬ್ಬಂದಿಗೂ ನೀಡಲಾಗಿದೆ. ಆದರೆ, ಕುಂಬ್ಳೆ ಅವರನ್ನು ನಡೆಸಿಕೊಂಡಿರುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ತಂಡದ ಸಾಧನೆಯನ್ನು ನೋಡಿದರೆ ಅವರ ಅವಧಿಯನ್ನು ಹೆಚ್ಚಿಸಬೇಕಾಗಿತ್ತು. ಆದರೆ, ಅವರನ್ನು ಅವಮಾನಕರವಾಗಿ ಕೈಬಿಡಲಾಗಿದ್ದು, ಹೊಸದಾಗಿ ಕೋಚ್ ನೇಮಕ ಮಾಡಲಾಗುತ್ತಿದೆ.[ಕುಂಬ್ಳೆ ಆಯ್ಕೆ ಬಗ್ಗೆ ಕೊಹ್ಲಿಗೆ ಅಸಮಾಧಾನವಿತ್ತು: ಅಜಯ್ ಶಿರ್ಕೆ]

ಗವಾಸ್ಕರ್ ಕಾಮೆಂಟರಿ ಮಾಡುವಂತಿಲ್ಲ
ಸುನೀಲ್ ಗವಾಸ್ಕರ್ ಅವರು ಭಾರತ ಕ್ರಿಕೆಟ್ ಆಟಗಾರರನ್ನು ಪ್ರತಿನಿಧಿಸುವ ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಗ್ರೂಪ್ ನ ಮುಖ್ಯಸ್ಥರಾಗಿದ್ದರೂ, ಬಿಸಿಸಿಐನ ಕಾಮೆಂಟರಿ ತಂಡದಲ್ಲಿರುವುದು ಹಿತಾಸಕ್ತಿಗೆ ವಿರುದ್ಧವಾದದ್ದು. ಅವರು ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಗ್ರೂಪ್ ಗೆ ರಾಜೀನಾಮೆ ನೀಡಬೇಕು ಅಥವಾ ಬಿಸಿಸಿಐ ಪರವಾಗಿ ಕಾಮೆಂಟಿರಿ ನೀಡಬಾರದು.[ಅನಿಲ್ ಕುಂಬ್ಳೆ ವಿರುದ್ಧ ಟೀಂ ಇಂಡಿಯಾ ಆಟಗಾರರ ದೂರು]

ರಾಹುಲ್ ಐಪಿಎಲ್ ಕೋಚ್ ಆಗಿದ್ದು ಹೇಗೆ?
ಭಾರತ 'ಎ' ತಂಡದ ಕೋಚ್ ಮತ್ತು ದೆಹಲಿ ಡೇರ್ ಡೆವಿಲ್ಸ್ ಮೆಂಟರ್ ಆಗಿರುವ ರಾಹುಲ್ ದ್ರಾವಿಡ್ ಅವರು ಬಿಸಿಸಿಐ ಅಥವಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಒಪ್ಪಂದದ ಅಧೀನದಲ್ಲಿದ್ದರೂ ಐಪಿಎಲ್ ತಂಡದ ಕೋಚ್ ಆಗಿದ್ದು ಹೇಗೆ?[ಕುಂಬ್ಳೆಯಿಂದ ಕೊಹ್ಲಿ ಜತೆಗಿನ ಖಾಸಗಿ ಚಾಟ್ ಬಹಿರಂಗ?]

ಸ್ಥಳೀಯ ಆಟಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ
ಆಡಳಿತಗಾರರ ಸಮಿತಿ ಸ್ಥಳೀಯ ಆಟಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪ್ರತಿಭಾವಂತ ಸ್ಥಳೀಯ ಆಟಗಾರರಿಗೂ ಅಂತಾರಾಷ್ಟ್ರೀಯ ಆಟಗಾರರಿಗೂ ನೀಡುವ ಸಂಬಳದಲ್ಲಿ ಭಾರೀ ಅಂತರವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications