Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಕ್‌ ಟು ಬ್ಯಾಕ್‌ ಮೂರು ಅಮೋಘ ಕ್ಯಾಚ್‌ ಪಡೆದ ಹರ್ಷಿತ್ ರಾಣಾ

ನ್ಯೂ ಚಂಡೀಗಢದ ಮೈದಾನ ಪಂಜಾಬ್‌ ಕಿಂಗ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ಪಂದ್ಯಕ್ಕೆ ವೇದಿಕೆ ಆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಆದರೆ ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲರಾದರು. ಪಂಜಾಬ್‌ ಆರಂಭಿಕರು ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದರು. ಆದರೆ ಕೆಕೆಆರ್‌ ತಂಡದ ಅದ್ಭುತ ಫೀಲ್ಡಿಂಗ್ ಕಾರಣದಿಂದ ಸತತವಾಗಿ ವಿಕೆಟ್‌ಗಳು ಬೀಳುತ್ತಾ ಸಾಗಿದವು.

ಮೊದಲು ಬ್ಯಾಟ್ ಮಾಡಿದ ಪಂಜಾಬ್ 15.3 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಕೆಕೆಆರ್‌ ತಂಡದ ಅಮೋಘ ಫೀಲ್ಡಿಂಗ್ ಆತಿಥೇಯ ತಂಡಕ್ಕೆ ಕಂಠಕವಾಯಿತು. ಕೆಕೆಆರ್‌ ತಂಡದ ರಮಣದೀಪ್‌ ನಿಜಕ್ಕೂ ಮಂಗಳವಾರ ಸೂಪರ್ ಮ್ಯಾನ್‌ ರೀತಿ ಕಾಣಿಸಿಕೊಂಡರು. ಒಂದಲ್ಲಾ ಎರಡಲ್ಲಾ, ಮೂರು ಕ್ಲಾಸಿಕ್‌ ಕ್ಯಾಚ್‌ಗಳನ್ನು ಪಡೆದು ಅಬ್ಬರಿಸಿದರು.

Ramandeep Singh s Superman Fielding and Harshit Rana s Fiery Spell Crush Punjab Kings for 111

ಪವರ್‌ ಪ್ಲೇನಲ್ಲಿ ಹರ್ಷಿತ್ ರಾಣ ತಮ್ಮ ಮೊದಲ ಓವರ್‌ ಮಾಡಲು ಮುಂದಾದರು. ಈ ವೇಳೆ ಹರ್ಷಿತ್ ಎಸೆದ ಲೆಂಥ್ ಡಿಲೆವರಿಯನ್ನು ಪ್ರಿಯಾಂಶು ಆರ್ಯ ತಪ್ಪಾಗಿ ಅರ್ಥಹಿಸಿ ಕೊಂಡರು. ಅಲ್ಲದೆ ಲಾಂಗ್‌ ಲೆಗ್‌ ನತ್ತ ಬೀಸಿದರು. ಅಲ್ಲಿ ಫೀಲ್ಡ್ ಮಾಡುತ್ತಿದ್ದ ರಮಣದೀಪ್‌ ಸ್ಟ್ರೇಟ್‌ ಫಾರ್ವಡ್‌ ಕ್ಯಾಚ್‌ ಪಡೆದರು.

ಸೂಪರ್‌ ಕ್ಯಾಚ್‌

ಇನ್ನು ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಶ್ರೇಯಸ್‌ ಅಯ್ಯರ್‌ ಅವರಿಗೆ ಹರ್ಷಿತ್ ರಾಣಾ ಖೆಡ್ಡಾ ತೋಡಿದರು. ಹರ್ಷಿತ್ ರಾಣಾ ಎಸೆದ ಔಟ್ ಸೈಡ್ ಆಫ್‌ ಸ್ಟಂಪ್‌ ಎಸೆತವನ್ನು ಶ್ರೇಯಸ್‌ ನೋಡಿ ಫುಲ್ ಖುಷ್ ಆಗಿ ಬಿಗ್ ಹಿಟ್ ಬಾರಿಸಲು ಮುಂದುದಾದರು. ಆದರೆ ಚೆಂಡು ಡೀಪ್ ಥರ್ಡ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರಮಣದೀಪ್‌ ಸಿಂಗ್ ಕೈ ಸೇರಿತು. ಒಂದೇ ಓವರ್‌ನಲ್ಲಿ ಪಂಜಾಬ್‌ಗೆ ಕೆಕೆಆರ್‌ ಪೆಟ್ಟು ನೀಡಿತು. ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್‌ಗಳಿಗೆ ಕಂಠಕವಾಗಿದ್ದ ಶ್ರೇಯಸ್‌ ಖಾತೆ ತೆರೆಯುವಲ್ಲಿ ವಿಫಲರಾದರು.

ವರುಣ್ ಚಕ್ರವರ್ತಿ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಜೋಶ್ ಇಂಗ್ಲಿಷ್ ಅವರನ್ನು ಔಟ್ ಮಾಡುವ ಮೂಲಕ ಪಂಜಾಬ್‌ಗೆ ಮತ್ತೊಂದು ಹೊಡೆತ ನೀಡಿದರು. ಹರ್ಷಿತ್ ರಾಣಾ ಆರನೇ ಓವರ್‌ ಮಾಡಲು ಮುಂದಾದಾಗ ಈ ಓವರ್‌ನ ಕೊನೆಯ ಎಸೆತದಲ್ಲಿ ಪ್ರಭಸಿಮ್ರನ್ ಸಿಂಗ್‌ಗೆ ಖೆಡ್ಡಾ ತೋಡಿದ್ರು. ಹರ್ಷಿತ್ ರಾಣಾ ಎಸೆದ ಔಟ್ ಸೈಡ್ ಆಫ್‌ ಸ್ಟಂಪ್‌ ಎಸೆತವನ್ನು ತಪ್ಪಾಗಿ ಗುರುತಿಸಿದ ಪ್ರಭಸಿಮ್ರನ್ ಪಾಯಿಂಟ್‌ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ರಮಣದೀಪ್‌ ಸಿಂಗ್‌ಗೆ ಕ್ಯಾಚ್ ನೀಡಿದರು.

ಪವರ್‌ ಪ್ಲೇನಲ್ಲಿ ಪಂಜಾಬ್‌ ರನ್‌ ಬಾರಿಸುವಲ್ಲಿ ವಿಫಲವಾಗಿ ಸತತ ವಿಕೆಟ್‌ಗಳನ್ನು ನೀಡುತ್ತಾ ಸಾಗಿತು. ಪವರ್‌ ಪ್ಲೇನಲ್ಲಿ ಪಂಜಾಬ್‌ 15 ರನ್‌ ಸೇರಿಸುವಷ್ಟರಲ್ಲಿ ನಾಲ್ಕು ಅಮೂಲ್ಯ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆ ಹರ್ಷಿತ್ ರಾಣಾ ಬಿದ್ದ ನಾಲ್ಕು ವಿಕೆಟ್‌ಗಳಲ್ಲಿ ಮೂರು ವಿಕೆಟ್‌ ಪಡೆದರು.

Story first published: Tuesday, April 15, 2025, 21:42 [IST]
Other articles published on Apr 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+