ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಪೊವಾರ್ 2ನೇ ಬಾರಿ ಆಯ್ಕೆ

ನವದೆಹಲಿ: ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರಮೇಶ್ ಪೊವಾರ್ ಆಯ್ಕೆಯಾಗಿದ್ದಾರೆ. 2018ರ ನವೆಂಬರ್‌ನಲ್ಲಿ ಮಿಥಾಲಿ ರಾಜ್ ಜೊತೆಗಿನ ಕಲಹದ ಕಾರಣದಿಂದ ರಮೇಶ್ ಅವರನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕೋಚ್ ಸ್ಥಾನದಿಂದ ಕೆಳಗಿಳಿಸಿತ್ತು.
ಆದರೆ ಮತ್ತೀಗ ರಮೇಶ್ ಪೊವಾರ್ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಗುರುವಾರ (ಮೇ 13) ಬಿಸಿಸಿಐ ರಮೇಶ್ ಮಹಿಳಾ ತಂಡದ ಕೋಚ್ ಆಗಿ ಆಯ್ಕೆಯಾಗಿರುವುದಾಗಿ ತಿಳಿಸಿದೆ. ಮಹಿಳಾ ಕೋಚ್ ಸ್ಥಾನಕ್ಕೆ ಒಟ್ಟು 35 ಅರ್ಜಿಗಳು ಬಂದಿದ್ದವು.
ಮಹಿಳಾ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿಸಲ್ಲಿಸಿದ್ದವರನ್ನು ಮದನ್ ಲಾಲ್, ಸುಲಕ್ಷಣ ನಾಯಕ್ ಮತ್ತು ಆರ್‌ಪಿ ಸಿಂಗ್ ಅವರನ್ನೊಳಗೊಂಡ ಮೂವರ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸಂದರ್ಶಿಸಿದೆ. ಆ ಬಳಿಕ ಈ ಸಮಿತಿ ಪೊವಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಸ್ಪಿನ್ ಬೌಲರ್ ಆಗಿದ್ದ ಪೊವಾರ್ 2 ಟೆಸ್ಟ್ ಪಂದ್ಯಗಳಲ್ಲಿ 6 ವಿಕೆಟ್, 31 ಏಕದಿನ ಪಂದ್ಯಗಳಲ್ಲಿ 34 ವಿಕೆಟ್, 27 ಐಪಿಎಲ್ ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
ರಮೇಶ್ ಈಗ ಡಬ್ಲ್ಯೂವಿ ರಾಮನ್ ಅವರ ಸ್ಥಾನ ತುಂಬಿಕೊಳ್ಳಲಿದ್ದಾರೆ. ರಾಮನ್ ಅವರು ಡಿಸೆಂಬರ್ 2018ರಂದು ಮಹಿಳಾ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಮನ್ ಅಧಿಕಾರವಧಿಯಲ್ಲಿ ಮಹಿಳಾ ತಂಡ 2020ರ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications