ವನಿತಾ ಕ್ರಿಕೆಟ್ ತಂಡಕ್ಕೆ ಮಧ್ಯಂತರ ಕೋಚ್ ಆಗಿ ಪೊವಾರ್ ಆಯ್ಕೆ

ನವದೆಹಲಿ, ಜುಲೈ 16: ಭಾರತ ವನಿತಾ ಕ್ರಿಕೆಟ್ ತಂಡದ ಮಧ್ಯಂತರ ಕೋಚ್ ಆಗಿ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಆಯ್ಕೆಯಾಗಿದ್ದಾರೆ. ವನಿತಾ ಕ್ರಿಕೆಟ್ ತಂಡದ ಕೋಚ್ ಆಗಿದ್ದ ತುಷಾರ್ ಅರೋತೆ ಅವರು ಇತ್ತೀಚೆಗೆ ತಮ್ಮ ಸ್ಥಾನದಿಂದ ಕೆಳಗಿಳಿದಿರುವುದರಿಂದ ಬಿಸಿಸಿಐ ಸೂಕ್ತ ಕೋಚ್ ಆರಿಸುವವರೆಗೆ ಪೊವಾರ್, ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಹಿರಿಯ ಆಟಗಾರ್ತಿಯ ನಡುವಿನ ಭಿನ್ನಾಭಿಪ್ರಾಯದ ಕಾರಣ ಅರೋತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ಬರೋಡಾ ತಂಡದ ಆಲ್ ರೌಂಡರ್ ಆಟಗಾರರಾಗಿದ್ದ ಅರೋತೆಯ ತರಬೇತಿ ವಿಧಾನ ಚೆನ್ನಾಗಿಲ್ಲವೆಂದು ಹಿರಿಯ ಆಟಗಾರ್ತಿಯರು ಆರೋಪಿಸಿದ್ದು ಅರೋತೆ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತ್ತು.
ತಮಗೆ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪೊವಾರ್, 'ಕೋಚ್ ಜವಾಬ್ದಾರಿ ನೀಡಿರುವುದು ನನಗೆ ಖುಷಿ ತಂದಿದೆ. ನನ್ನಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ತಂಡವನ್ನು ನಿಭಾಯಿಸುವ ಪ್ರಯತ್ನ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.
40ರ ಹರೆಯದ ಪೊವಾರ್ ಭಾರತ ಪರ ಆಡಿದ ಬರೀ ಎರಡು ಟೆಸ್ಟ್ ಪಂದ್ಯಗಳಲ್ಲಿ 6 ವಿಕೆಟ್ ಗಳಿಸಿದ್ದರು. ಏಕದಿನದಲ್ಲೂ ಗಮನಾರ್ಹ ಸಾಧನೆ ತೋರಿರುವ ಪೊವಾರ್, ಪ್ರಥಮ ದರ್ಜೆ ಕ್ರಿಕೆಟ್ 148 ಪಂದ್ಯಗಳಲ್ಲಿ ಒಟ್ಟು 470 ವಿಕೆಟ್ ಉರುಳಿಸಿ ಅದ್ಭುತ ಸಾಧನೆ ಮೆರೆದಿದ್ದರು.
ಮಾಹಿತಿಯೊಂದರ ಪ್ರಕಾರ ಭಾನುವಾರ ಪೊವಾರ್ ಅವರನ್ನು ಸಂಪರ್ಕಿಸಿ ಮಧ್ಯಂತರ ಕೋಚ್ ಜವಾಬ್ದಾರಿ ನೀಡುವ ಬಗ್ಗೆ ಕ್ರಿಕೆಟ್ ಬೋರ್ಡ್ ಮಾತುಕತೆ ನಡೆಸಿತ್ತು ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications