6 ವಿಕೆಟ್ ಕಬಳಿಸಿ ಆಫ್ರಿಕನ್ನರಿಗೆ ಸರಣಿ ಸೋಲುಣಿಸಿದ್ದು ರಂಗನಾ ಹೆರಾತ್!

ಕೊಲಂಬೋ, ಜುಲೈ 24: ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಮತ್ತು ಅಂತಿಮ ಟೆಸ್ಟ್ ನಲ್ಲಿ ಶ್ರೀಲಂಕಾ 199ರನ್ ಭರ್ಜರಿ ಜಯ ಗಳಿಸಿತ್ತು. ಈ ವೇಳೆ ಶ್ರೀಲಂಕಾ ಗೆಲುವಿಗೆ ಕಾರಣವಾಗಿದ್ದು ಬೌಲರ್ ರಂಗನಾ ಹೆರಾತ್. ಹೆರಾತ್ ಬೆಂಬಲದೊಂದಿಗೆ ದಕ್ಷಿಣ ಆಫ್ರಿಕಾವನ್ನು 2-0ರಿಂದ ಸೋಲಿಸಿದ ಶ್ರೀಲಂಕಾ ಸರಣಿ ಕೈವಶವಾಗಿಸಿಕೊಂಡಿತು.
ಈ ಸರಣಿ ಜಯದೊಂದಿಗೆ ಶ್ರೀಲಂಕಾ, ಟೆಸ್ಟ್ ಕ್ರಿಕೆಟ್ ನಲ್ಲಿ ಆಫ್ರಿಕಾನ್ನರನ್ನು 12 ವರ್ಷಗಳ ನಂತರ ವೈಟ್ ವಾಷ್ ಗೊಳಿಸಿದ ಸಾಧನೆಗೂ ಪಾತ್ರವಾಯಿತು. 2006ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾದೆದುರು ಸರಣಿ ವೈಟ್ ವಾಷ್ ಅನುಭವಿಸಿತ್ತು.
ದ್ವಿತೀಯ ಟೆಸ್ಟ್ ನಲ್ಲಿ ಶ್ರೀಲಂಕಾ ತಂಡವು ದನುಷ್ಕ 68 (68), ದಿಮುತ್ ಕರುಣರತ್ನೆ 85 (136), ಏಂಜೆಲೋ ಮ್ಯಾಥ್ಯೂ 71 (147) ರನ್ ನೆರವಿನೊಂದಿಗೆ 81 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 275 ರನ್ ಪೇರಿಸಿತು ಎದುರಾಳಿಗೆ 276 (+ ಮೊದಲ ಟೆಸ್ಟ್ 338 ರನ್) ಗುರಿ ನೀಡಿತ್ತು.
ಮೊದಲ ಟೆಸ್ಟ್ ನಲ್ಲಿ 214 ರನ್ ಸೋತು, 490 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಥೆಯುನಿಸ್ ಡಿ ಬ್ರುಯಿನ್ 101 (232), ಟೆಂಬ ಬವುಮ 63 (98) ರನ್ ನೊಂದಿಗೆ 86.5 ಓವರ್ ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಪೇರಿಸಿ 199 ರನ್ ನಿಂದ ಶ್ರೀಲಂಕಾಕ್ಕೆ ಶರಣಾಯಿತು. ಈ ವೇಳೆ ರಂಗನಾ 98 ರನ್ನಿಗೆ 6 ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕನ್ನರನ್ನು ಕಾಡಿದ್ದರು.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿದ ಶ್ರೀಲಂಕಾ ನಾಯಕ ಸುರಂಗ ಲಕ್ಮಲ್, 'ತವರಿನಲ್ಲಿ ಆಡುವಾಗ ಸ್ಪಿನ್ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಎಂಬುದು ಗೊತ್ತಿತ್ತು. ಅದರಲ್ಲೂ ನಮ್ಮ ತಂಡದಲ್ಲಿ ವಿಶ್ವದಲ್ಲಿನ ಉತ್ತಮ ಬೌಲರ್ ಗಳಿದ್ದಾರೆ. ನಿನ್ನೆಯ (ಜುಲೈ 23ರ) ಪಂದ್ಯದಲ್ಲಿ ನಾವೊಂದು ಉತ್ತಮ ತಂಡವಾಗಿ ಆಟ ಪ್ರದರ್ಶಿಸಿದೆವು. ಈ ವೇಳೆ ಎಲ್ಲರ ಕೊಡುಗೆಯೂ ತಂಡಕ್ಕೆ ಲಭಿಸಿತ್ತು' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications