ರಣಜಿ 2022: ಉತ್ತರ ಪ್ರದೇಶ ವಿರುದ್ಧ ಸೋತ ಕರ್ನಾಟಕ: ಕ್ವಾರ್ಟರ್‌ಫೈನಲ್‌ನಿಂದ ನಿರ್ಗಮನ

2021-22ನೇ ಸಾಲಿನ ರಣಜಿ ಟೂರ್ನಿಯಲ್ಲಿ ಕರ್ನಾಟಕದ ಹೋರಾಟ ಕ್ವಾರ್ಟರ್‌ಫೈನಲ್‌ಗೆ ಅಂತ್ಯವಾಗಿದೆ. ಬೆಂಗಳೂರಿನ ಆಲೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿ ಉತ್ತಮ ಮೊತ್ತದ ಮುನ್ನಡೆ ಸಾಧಿಸಿದ ಹೊರತಾಗಿಯೂ ಕರ್ನಾಟಕ ತಂಡಕ್ಕೆ ಅದರ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ನೀಡಿದ ಕಳಪೆ ಬ್ಯಾಟಿಂಗ್‌ಗ ಪ್ರದರ್ಶನದಿಂದಾಗಿ ಕರ್ನಾಟಕ 5 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಅಲ್ಲದೆ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಕೊನೆಗೊಳಿಸಿದೆ.
ಇನ್ನು ಕರ್ನಾಟಕ ತಂಡದ ಗೆಲುವಿನ ಕನಸಿಗೆ ಅಡ್ಡಿಯಾಗಿದ್ದು ಉತ್ತರ ಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಹಾಗೂ ಪ್ರಿಯಂ ಗಾರ್ಗ್. ಅದರಲ್ಲೂ ನಾಯಕನ ಆಟವಾಡಿದ ಕರಣ್ ಶರ್ಮಾ ಅಂತಿಮ ಹಂತದವರೆಗೂ ಹೋರಾಟವನ್ನು ನಡೆಸಿ ತಂಡಕ್ಕೆ ಗೆಲುವನ್ನು ತಂದಿತ್ತರು. ಕರಣ್ ಅಜೇಯ 93 ರನ್‌ಗಳ ಕೊಡುಗೆ ನೀಡಿದರೆ ಪ್ರಯಂ ಗಾರ್ಗ್ 52 ರನ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಪ್ರಿನ್ಸ್ ಯಾದವ್ ಕೂಡ ವಿಕೆಟ್ ಕಳೆದುಕೊಳ್ಳದಂತೆ ತಡೆಯಾದರು.

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ
ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ ಆರ್ ಸಮರ್ಥ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧ ಶತಕದ ನೆರವಿನಿಂದ 253 ರನ್‌ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ಕೂಡ ಕರ್ನಾಟಕ ಬೌಲರ್‌ಗಳ ದಾಳಿಗೆ ತತ್ತರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಯುಪಿ ಕೇವಲ 155 ರನ್‌ಗಳ ಮೊತ್ತವನ್ನು ಕಲೆಹಾಕಲು ಮಾತ್ರವೇ ಯಶಸ್ವಿಯಾಯಿತು. ಈ ಮೂಲಕ ಕರ್ನಾಟಕ ತಂಡ ಅಮೂಲ್ಯ 98 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಕರ್ನಾಟಕಕ್ಕೆ ಸೌರಬ್ ಆಘಾತ
ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ದಾಂಡಿಗರು ಭಾರೀ ವೈಫಲ್ಯವನ್ನ ಅನುಭವಿಸಿದರು. ಯಾವೊಬ್ಬ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ.ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಅವರ 23 ರನ್‌ಗಳ ಕೊಡುಗೆ ತಂಡದ ಹೈಯೆಸ್ಟ್ ಸ್ಕೋರ್ ಎನಿಸಿಕೊಂಡಿತು. ಹೀಗಾಗಿ 213 ರನ್‌ಗಳ ಸಾಧಾರಣ ಗುರಿಯನ್ನು ಕರ್ನಾಟಕ ಉತ್ತರ ಪ್ರದೇಶ ತಂಡದ ಮುಂದಿಟ್ಟಿತು. ಯುಪಿ ಬೌಲಸ್ ಸೌರಬ್ ಕುಮಾರ್ ಎರಡು ಇನ್ನಿಂಗ್ಸ್‌ನಲ್ಲಿಯೂ ಕರ್ನಾಟಕ ಬ್ಯಾಟರ್‌ಗಳಿಗೆ ಆಘಾತ ನೀಡಿದರು. ಪಂದ್ಯದಲ್ಲಿ ಒಟ್ಟು 7 ವಿಕೆಟ ಪಡೆದು ಮಿಂಚಿದ್ದಾರೆ ಸೌರಬ್ ಕುಮಾರ್.

ಇತ್ತಂಡಗಳ ಆಡುವ ಬಳಗ
ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್, ಕರುಣ್ ನಾಯರ್, ಮನೀಶ್ ಪಾಂಡೆ (ನಾಯಕ), ಕೃಷ್ಣಮೂರ್ತಿ ಸಿದ್ಧಾರ್ಥ್, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಕ್
ಬೆಂಚ್: ದೇಗಾ ನಿಶ್ಚಲ್, ಕೆ ಸಿ ಕಾರಿಯಪ್ಪ, ದೇವದತ್ತ್ ಪಡಿಕ್ಕಲ್, ವಿ ಕೌಶಿಕ್, ಮುರಳೀಧರ ವೆಂಕಟೇಶ್, ಜಗದೀಶ ಸುಚಿತ್, ಕಿಶನ್ ಬೇಡರೆ, ಶುಭಾಂಗ್ ಹೆಗ್ಡೆ, ಶರತ್ ಬಿಆರ್
ಉತ್ತರ ಪ್ರದೇಶ ಆಡುವ ಬಳಗ: ಸಮರ್ಥ್ ಸಿಂಗ್, ಪ್ರಿಯಂ ಗಾರ್ಗ್, ಪ್ರಿನ್ಸ್ ಯಾದವ್, ರಿಂಕು ಸಿಂಗ್, ಆರ್ಯನ್ ಜುಯಲ್, ಕರಣ್ ಶರ್ಮಾ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ಮಾವಿ, ಅಂಕಿತ್ ರಾಜ್‌ಪೂತ್, ಯಶ್ ದಯಾಳ್, ಸೌರಭ್ ಕುಮಾರ್
ಬೆಂಚ್: ಅಲ್ಮಾಸ್ ಶೌಕತ್, ಕುಲದೀಪ್ ಯಾದವ್, ಜೀಶನ್ ಅನ್ಸಾರಿ, ಶಾನು ಸೈನಿ, ಸಮೀರ್ ಚೌಧರಿ, ಮಾಧವ್ ಕೌಶಿಕ್, ಹರ್ದೀಪ್ ಸಿಂಗ್, ರಿಷಭ್ ಬನ್ಸಾಲ್, ಪಾರ್ಥ್ ಮಿಶ್ರಾ, ಆಕಿಬ್ ಖಾನ್, ಶಿವಂ ಶರ್ಮಾ, ಜಸ್ಮರ್ ಧಂಖರ್, ಅಕ್ಷದೀಪ್ ನಾಥ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications