For Quick Alerts
ALLOW NOTIFICATIONS  
For Daily Alerts
 

Ranji: 12ನೇ ವರ್ಷಕ್ಕೆ ರಣಜಿಗೆ ಪದಾರ್ಪಣೆ ಮಾಡಿದ ಬಿಹಾರದ ವೈಭವ್ ಸೂರ್ಯವಂಶಿ

ಬಿಹಾರದ ವೈಭವ್ ಸೂರ್ಯವಂಶಿ ರಣಜಿ ಟ್ರೋಫಿ 2024 ರ ಮೊದಲ ದಿನದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರು ಕೇವಲ 12 ವರ್ಷ ಮತ್ತು 284 ದಿನಗಳ ವಯಸ್ಸಿನಲ್ಲಿ ರಣಜಿಗೆ ಪಾದಾರ್ಪಣೆ ಮಾಡಿದರು. ಈ ಸಾಧನೆ ಮಾಡಿದ ನಾಲ್ಕನೇ ಅತಿ ಕಿರಿಯ ಆಟಗಾರ. ಈ ಮೂಲಕ ವೈಭವ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದರು.

ವೈಭವ್ ತನ್ನ ಮೊದಲ ರಣಜಿ ಪಂದ್ಯವನ್ನು ಮುಂಬೈ ವಿರುದ್ಧ ಆಡಿದರು. ಶಮ್ಸ್ ಮುಲಾನಿ ನಾಯಕತ್ವದ ಮುಂಬೈ ತಂಡದ ವಿರುದ್ಧ ವೈಭವ್ ಮೈದಾನಕ್ಕಿಳಿದ ಕೂಡಲೇ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆದರು. 2000ನೇ ಇಸವಿಯ ನಂತರ 13 ವರ್ಷದೊಳಗಿನ ರಣಜಿಗೆ ಪದಾರ್ಪಣೆ ಮಾಡಿದ ಮೊದಲ ಆಟಗಾರ.

Ranji: Bihars Vaibhav Suryavanshi created history, made his debut in Ranji Trophy

ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಆಟಗಾರರ ದಾಖಲೆಗಳನ್ನು ಮುರಿದಿದ್ದಾರೆ. ಸಚಿನ್ ಚಿಕ್ಕ ವಯಸ್ಸಿನಲ್ಲೇ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಕ್ರಿಕೆಟ್‌ನ ಧೃವ ತಾರೆಯಂತೆ ಮಿಂಚಿದ್ದರು.

1942-43 ರ ರಣಜಿ ಟ್ರೋಫಿ ಋತುವಿನಲ್ಲಿ, ಅಲಿಮುದ್ದೀನ್ ರಣಜಿ ಪಂದ್ಯವನ್ನು ಆಡಿದ ಅತ್ಯಂತ ಕಿರಿಯ ಆಟಗಾರ. ಅವರು 12 ವರ್ಷ ಮತ್ತು 73 ದಿನಗಳ ವಯಸ್ಸಿನಲ್ಲಿ ತಮ್ಮ ಮೊದಲ ರಣಜಿ ಪಂದ್ಯವನ್ನು ಆಡಿದ್ದರು. ಅಜ್ಮೀರ್‌ನ ಅಲಿಮುದ್ದೀನ್ ರಜಪೂತಾನ ತಂಡಕ್ಕಾಗಿ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯವನ್ನು ಆಡಿದರು. ಈ ಪಂದ್ಯವು ಬರೋಡಾದ ಮಹಾರಾಜ್ ಪ್ರತಾಪ್ ಸಿಂಗ್ ಜಿಮ್ಖಾನಾದಲ್ಲಿ ರಜಪೂತಾನ ಮತ್ತು ಬರೋಡಾ ನಡುವೆ ನಡೆಯಿತು.

Ranji: Bihars Vaibhav Suryavanshi created history, made his debut in Ranji Trophy

1959-60ರಲ್ಲಿ, ಎಸ್‌ಕೆ ಬೋಸ್ ತಮ್ಮ 12 ವರ್ಷ ಮತ್ತು 76 ದಿನಗಳ ವಯಸ್ಸಿನಲ್ಲಿ ತಮ್ಮ ಮೊದಲ ರಣಜಿ ಪಂದ್ಯವನ್ನು ಆಡಿದರು. ಜಮ್‌ಶೆಡ್‌ಪುರದ ಕೀನನ್‌ ಕ್ರೀಡಾಂಗಣದಲ್ಲಿ ಬಿಹಾರ ಮತ್ತು ಅಸ್ಸಾಂ ನಡುವೆ ಪಂದ್ಯ ನಡೆಯಿತು. ಮೊಹಮ್ಮದ್ ರಂಜಾನ್ 1937 ರಲ್ಲಿ 12 ವರ್ಷ ಮತ್ತು 247 ದಿನಗಳಲ್ಲಿ ರಣಜಿಗೆ ಪಾದಾರ್ಪಣೆ ಮಾಡಿದರು.

ವೈಭವ್ ಸೂರ್ಯವಂಶಿ ಈ ವರ್ಷ ಬಿಹಾರಕ್ಕಾಗಿ ತಮ್ಮ ಕೂಚ್ ಬೆಹಾರ್ ಟ್ರೋಫಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮತ್ತು ಅದೇ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 128 ಎಸೆತಗಳಲ್ಲಿ 151 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ರಾಜ್ಯ ಆಯ್ಕೆಗಾರರ ​​ಗಮನ ಸೆಳೆದರು. ಈ ಪಂದ್ಯದಲ್ಲಿ ವೈಭವ್ 22 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಇದೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 76 ರನ್ ಗಳಿಸಿದ್ದರು. ಇದರ ನಂತರ, ಅವರು ಇಂಗ್ಲೆಂಡ್ ಅಂಡರ್-19 ಮತ್ತು ಬಾಂಗ್ಲಾದೇಶ ಅಂಡರ್-19 ತಂಡಗಳ ವಿರುದ್ಧ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದರು.

Story first published: Friday, January 5, 2024, 23:58 [IST]
Other articles published on Jan 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+