ರಣಜಿ: ಕರ್ನಾಟಕಕ್ಕೆ ಬೃಹತ್ ಮುನ್ನಡೆ, ಗೆಲುವಿನತ್ತ ಚಿತ್ತ

ಆಲೂರು (ಬೆಂಗಳೂರು), ಜನವರಿ 1: ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮೂರನೇ ದಿನ ಕರ್ನಾಟಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ನಾಲ್ಕನೆಯ ಹಾಗೂ ಕೊನೆಯ ದಿನವಾದ ಬುಧವಾರ ಕರ್ನಾಟಕ ವೇಗವಾಗಿ ರನ್ ಗಳಿಸಿ ಎದುರಾಳಿ ತಂಡವನ್ನು ಬೇಗನೆ ಬ್ಯಾಟಿಂಗ್‌ಗೆ ಆಹ್ವಾನಿಸಿ ಗೆಲ್ಲುವ ಪ್ರಯತ್ನ ನಡೆಸಬೇಕಿದೆ.
ಎರಡನೇ ದಿನದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿದ್ದ ಛತ್ತೀಸ್ ಗಢ, ಹರ್ಪ್ರೀತ್ ಸಿಂಗ್ ಭಾಟಿಯಾ ಅವರ ಭರ್ಜರಿ ಶತಕದ ನೆರವಿನಿಂದ ಫಾಲೋಆನ್ ಭೀತಿಯಿಂದ ಹೊರಬಂದಿತು. ಅವರಿಗೆ ಅಮನ್ದೀಪ್ ಖರೆ ಮತ್ತು ಅಜಯ್ ಮಂಡಲ್ ಉತ್ತಮ ಸಾಥ್ ನೀಡಿದರು.
ಆದರೆ ಕೊನೆಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕರ್ನಾಟಕದ ವೇಗಿಗಳಾದ ಅಭಿಮನ್ಯು ಮಿಥುನ್ ಮತ್ತು ರೋನಿತ್ ಮೋರೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಮೊದಲ ಇನ್ನಿಂಗ್ಸ್‌ನಲ್ಲಿ ಎಡವಿದ್ದ ಕರ್ನಾಟಕದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಅದೇ ತಪ್ಪುಗಳನ್ನು ಪುನರಾವರ್ತಿಸಿದರು.
ಡೇಗಾ ನಿಶ್ಚಲ್, ದೇವದತ್ ಪಡಿಕ್ಕಲ್, ಚೊಚ್ಚಲ ಪಂದ್ಯ ಆಡುತ್ತಿರುವ ಲಿಯಾನ್ ಖಾನ್ ಮತ್ತು ಸಿದ್ಧಾರ್ಥ್ ಕೆ.ವಿ. 50 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರು. ಬಳಿಕ ನಾಯಕ ಮನೀಶ್ ಪಾಂಡೆ ಮತ್ತು ಶ್ರೇಯಸ್ ಗೋಪಾಲ್ ಮುರಿಯದ ನಾಲ್ಕನೆಯ ವಿಕೆಟ್‌ಗೆ 63 ರನ್ ಸೇರಿಸಿ ತಂಡಕ್ಕೆ ನೆರವಾದರು.
ಕರ್ನಾಟಕ ತಂಡ ಒಟ್ಟಾರೆ 248 ರನ್ ಮುನ್ನಡೆ ಪಡೆದಿತ್ತು, ಬುಧವಾರ ಬೇಗನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಎದುರಾಳಿಗಳನ್ನು ಸೋಲಿಸಲು ಪ್ರಯತ್ನ ನಡೆಸುವ ಅಗತ್ಯವಿದೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 418 & 113/4 (34) ಮನೀಶ್ ಪಾಂಡೆ 57*, ಶ್ರೇಯಸ್ ಗೋಪಾಲ್ 21*, ಪಂಕಜ್ ರಾವ್ 16/3, ಅಜಯ್ ಮಂಡಲ್ 24/1
ಛತ್ತೀಸ್ ಗಢ: 283 (89) ಹರ್ಪ್ರೀತ್ ಸಿಂಗ್ ಭಾಟಿಯಾ 120, ಅಮನ್ದೀಪ್ ಖರೆ 45, ಅಜಯ್ ಮಂಡಲ್ 41, ರೋನಿತ್ ಮೋರೆ 48/5, ಅಭಿಮನ್ಯು ಮಿಥುನ್ 64/4, ಶ್ರೇಯಸ್ ಗೋಪಾಲ್ 38/1
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications