ರಣಜಿ ಕ್ರಿಕೆಟ್: ಮಧ್ಯಪ್ರದೇಶದ ವಿರುದ್ಧ ಮೇಲುಗೈ ಸಾಧಿಸಿದ ಕರ್ನಾಟಕ

ಶಿವಮೊಗ್ಗ: ಶಿವಮೊಗ್ಗದ ನಗರದ ನವುಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಮಧ್ಯ ಪ್ರದೇಶದ ನಡುವೆ ರಣಜಿ ಪಂದ್ಯಾಟ ನಡೆಯುತ್ತಿದೆ. ಮೂರನೇ ದಿನದಾಟದಲ್ಲಿ ಕರ್ನಾಟಕ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದೆ. ಟಾಸ್ ಗೆದ್ದ ಮಧ್ಯಪ್ರದೇಶದ ತಂಡ ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿತು.
ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ಗಳಿಸಿ ಆಲ್‌ಔಟ್ ಆಗಿದೆ. ಕರ್ನಾಟಕ ತಂಡದ ಪರವಾಗಿ ರವಿ ಕುಮಾರ್ ಸಮರ್ಥ್ ಶತಕ ಸಿಡಿಸಿ ಮಿಂಚಿದ್ದಾರೆ. ಕೃಷ್ಣ ಮೂರ್ತಿ ಸಿದ್ಧಾರ್ಥ್, ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಅರ್ಧ ಶತಕದ ಕೊಡುಗೆಯನ್ನು ನೀಡಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಮಧ್ಯ ಪ್ರದೇಶ ತಂಡ ಬ್ಯಾಟಿಂಗ್‌ಗಿಳಿದಿದೆ. ಮೂರನೇ ದಿನದ ಲಂಚ್ ಬ್ರೇಕ್ ಸಮಯಕ್ಕೆ ಮಧ್ಯ ಪ್ರದೇಶ ತಂಡ 4 ವಿಕೆಟ್ ಕಳೆದುಕೊಂಡು 152 ರನ್‌ಗಳಿಸಿ ಸಂಕಷ್ಟದಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್‌ಗಳ ಹಿನ್ನೆಡೆಯಲ್ಲಿದೆ.
ಮಧ್ಯ ಪ್ರದೇಶ ತಂಡದ ಪರವಾಗಿ ಯಶ್ ದುಬೇ 45 ರನ್‌ಗಳಿಸಿ ಇಲ್ಲಿಯವರೆಗಿನ ಹೈಯೆಸ್ಟ್ ಸ್ಕೋರ್. ಆದಿತ್ಯ ಶ್ರೀವಾಸ್ತವ ಮತ್ತು ವೆಂಕಟೇಶ್ ಐಯ್ಯರ್ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಕರ್ನಾಟಕ ತಂಡದ ಪರವಾಗಿ ಅಭಿಮನ್ಯು ಮಿಥುನ್, ಪ್ರತೀಕ್ ಜೈನ್, ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications