ಇದೆಲ್ಲಾ ಬೇಕಿತ್ತಾ: ಕರ್ನಾಟಕದ ಆಟಗಾರನಿಗೆ ಹೆಲ್ಮೆಟ್‌ನಿಂದ ಡಿಚ್ಚಿ ಹೊಡೆದ ಜಮ್ಮು ನಾಯಕ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದ ವೇಳೆ ಮಾತಿನ ಚಕಮಕಿ ನಡೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಜಮ್ಮು ಕಾಶ್ಮೀರ ತಂಡ ಉತ್ತಮ ಬ್ಯಾಟಿಂಗ್ ನಡೆಸುತ್ತಿದೆ. ಈ ವೇಳೆ ಜಮ್ಮು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಕ್ರೀಡಾ ಮನೋಭಾವವನ್ನು ಮರೆತಿದ್ದಾರೆ. ಅಲ್ಲದೆ ಎದುರಾಳಿ ಆಟಗಾರನಿಗೆ ಹೆಲ್ಮೆಟ್‌ನಿಂದ ಡಿಚ್ಚಿ ಹೊಡೆದಿದ್ದಾರೆ.
ಜಮ್ಮು ಕಾಶ್ಮೀರ ಬ್ಯಾಟಿಂಗ್ ಮಾಡುವಾಗ 101ನೇ ಓವರ್‌ನಲ್ಲಿ ಜಮ್ಮು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಬೌಂಡರಿ ಬಾರಿಸಿದರು. ಆ ಬಳಿಕ ಅವರು ತಮ್ಮ ಬ್ಯಾಟಿಂಗ್ ತುದಿಗೆ ಬರುತ್ತಾ, ಕರ್ನಾಟಕದ ಕೆ.ವಿ. ಅನೀಶ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿ ಡಿಚ್ಚಿ ಹೊಡೆದರು. ಆಗ ಉಭಯ ಆಟಗಾರರ ನಡುವೆ ವಾಗ್ವಾದ ನಡೆಯಿತು.

ಈ ಘಟನೆಯನ್ನು ನೋಡುತ್ತಿದ್ದ ಮಯಾಂಕ್ ಅಗರ್‌ವಾಲ್ ತಕ್ಷಣಕ್ಕೆ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಯಾಗಿಸಲು ಶ್ರಮಿಸಿದರು. ನಂತರ ಅಂಪೈರ್ ಡೋಗ್ರಾ ಮತ್ತು ಅನೀಶ್ ಅವರನ್ನು ಬೇರ್ಪಡಿಸಿದರು. ಈ ಮಾತಿನ ಚಕಮಕಿ ಬಳಿ ಜಮ್ಮು ನಾಯಕ ಡೋಗ್ರಾ ಅನೀಶ್‌ಗೆ ಕ್ಷಮೆಯಾಚಿಸಿದರು. ಅನೀಶ್ ಅವರನ್ನು ಕ್ಷಮಿಸಲು ನಿರಾಕರಿಸಿದರು. ಈ ಮಾತಿನ ಚಕಮಕಿ ಅಷ್ಟಕ್ಕೆನಿಲ್ಲಲ್ಲಿ. ಕೆ.ಎಲ್.ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ನಂತರ ಡೋಗ್ರಾ ಅವರ ನಡವಳಿಕೆಯನ್ನು ಟೀಕಿಸಿದರು.
ಪಂದ್ಯದ ಫಲಿತಾಂಶ
ಮೊದಲ ದಿನದಾಟದ ಮುಕ್ತಾಯಕ್ಕೆ ಜಮ್ಮು ಕಾಶ್ಮೀರ ತಂಡ 2 ವಿಕೆಟ್‌ಗೆ 284 ರನ್‌ಗಳಿಂದ ಆಟ ಮುಂದುವರೆಸಿತು. ಶುಭಂ ಪುಂಡಿರ್ 12 ಬೌಂಡರಿ, 2 ಸಿಕ್ಸರ್ ನೆರವಿನಿಂದ 121 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಮಧ್ಯಮ ಕ್ರಮಾಂಕದ ಅಬ್ದುಲ್ ಸಮದ್ 6 ಬೌಂಡರಿ 1 ಸಿಕ್ಸರ್ ಸಹಾಯದಿಂದ 61 ರನ್ ಸಿಡಿಸಿ ಔಟ್ ಆದರು.
ಗಾಯದಿಂದ ಮೈದಾನದಿಂದ ಹೊರ ನಡೆದಿದ್ದ ಜಮ್ಮು ಕಾಶ್ಮೀರ ನಾಯಕ ಪರಾಸ್ ಡೋಗ್ರಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕನ್ಹಯ್ಯಾ ವಾಧವನ್ ತಂಡಕ್ಕೆ ಆಧಾರವಾದರು. ಈ ಜೋಡಿ ಜಮ್ಮು ಕಾಶ್ಮೀರ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕುವಂತೆ ಮಾಡಿತು. ಈ ಜೋಡಿ 192 ಎಸೆತಗಳಲ್ಲಿ 110 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ 7 ಬೌಂಡರಿ ಸೇರಿದಂತೆ 70 ರನ್ ಬಾರಿಸಿದ್ದ ಕನ್ಹಯ್ಯಾ ವಾಧವನ್ ಶಿಖರ್ ಶೆಟ್ಟಿ ತೋಡಿದ್ದ ಖೆಡ್ಡಾಗೆ ಬಲಿಯಾದರು. ನಾಯಕ ಪರಾಸ್ ಡೋಗ್ರಾ ಆಟ 70 ರನ್‌ಗಳಿಗೆ ಕೊನೆಯಾಯಿತು. ಜಮ್ಮು ಕಾಶ್ಮೀರ ತಂಡದ ಪರ ಸಾಹಿಲ್ ಲೋತ್ರಾ (ಅಜೇಯ 57) ಹಾಗೂ ಅಬಿದ್ ಮುಷ್ತಾಕ್ (ಅಜೇಯ 20) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕರ್ನಾಟಕದ ಬೌಲರ್‌ಗಳು ಎರಡನೇ ದಿನವೂ ವಿಕೆಟ್ ಪಡೆಯಲು ಪರದಾಟ ನಡೆಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications