Ranji Final: ಮತ್ತೊಂದು ರಣಜಿ ಟ್ರೋಫಿ ಕನಸಿನಲ್ಲಿ ಮುಂಬೈ
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಇತ್ತೀಚಿಗಷ್ಟೇ ಭಾರತ ಹಾಗೂ ಇಂಗ್ಲೆಂಡ್ ನಡವುಣ ಟೆಸ್ಟ್ ಸರಣಿ ಮುಗಿದಿದೆ. ಸದ್ಯ ಕೊಂಚ ರಿಲೀಫ್ ಮಾಡಿಕೊಳ್ಳೋಣ ಅನ್ನುವಷ್ಟರಲ್ಲಿ ದೇಶೀಯ ಟೂರ್ನಿಯ ಫೈನಲ್ ನಡೆಯುತ್ತಿದೆ. ಅಭಿಮಾನಿಗಳ ಚಿತ್ತವನ್ನು ದೇಶೀ ಕ್ರಿಕೆಟ್‌ನ ರಾಜ ಎಂದೇ ಕರೆಸಿಕೊಳ್ಳುವ ರಣಜಿ ಟೂರ್ನಿಯ ಮೇಲೆ ನೆಟ್ಟಿದೆ.
ವಿದರ್ಭ ವಿರುದ್ಧ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ನಾಯಕ ಅಜಿಂಕ್ಯ ರಹಾನೆ ಹಾಗೂ ಮುಶೀರ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಪಂದ್ಯದ ಎರಡು ದಿನ ಮಾತ್ರ ಮುಗಿದಿದ್ದರೂ ಮುಂಬೈ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ರಣಜಿ ಟ್ರೋಫಿಯ ಫೈನಲ್‌ನಲ್ಲಿ ಪ್ರಸ್ತುತ ಮುಂಬೈ ಮತ್ತು ವಿದರ್ಭ ನಡುವೆ ನಡೆಯುತ್ತಿದೆ. ಎರಡನೇ ದಿನದಾಟದ ಅಂತ್ಯದ ವೇಳೆಗೆ ನಾಯಕ ಅಜಿಂಕ್ಯ ರಹಾನೆ ಮತ್ತು ಮುಶೀರ್ ಖಾನ್ ತಮ್ಮ ಅರ್ಧಶತಕಗಳನ್ನು ಪೂರೈಸಿ ಕ್ರೀಸ್‌ನಲ್ಲಿದ್ದಾರೆ. ರಹಾನೆ 109 ಎಸೆತಗಳಲ್ಲಿ 58 ರನ್ ಮತ್ತು ಮುಶೀರ್ ಖಾನ್ 135 ಎಸೆತಗಳಲ್ಲಿ 51 ರನ್ ಗಳಿಸಿದ್ದಾರೆ. 4 ಬೌಂಡರಿಗಳ ಹೊರತಾಗಿ ರಹಾನೆ ತಮ್ಮ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಅನ್ನು ಸಹ ಸೇರಿದೆ. ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಇದೀಗ ವಿದರ್ಭ ವಿರುದ್ಧ ಮುಂಬೈ ಮುನ್ನಡೆ 260 ರನ್ ಮುನ್ನಡೆ ಸಾಧಿಸಿದೆ. ಆದರೆ, ಮುಂಬೈ ಆರಂಭಿಕ ಆಟಗಾರ ಪೃಥ್ವಿ ಶಾ ನಿರಾಸೆ ಅನುಭವಿಸಿದ್ದಾರೆ.
ವಿದರ್ಭ ಟಾಸ್ ಗೆದ್ದು ಮುಂಬೈಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು. ಓಪನರ್ ಪೃಥ್ವಿ ಶಾ 46 ರನ್ ಗಳಿಸಿ ಔಟಾದರು. ಇದಾದ ನಂತರ ನಿಯಮಿತ ಅಂತರದಲ್ಲಿ ಮುಂಬೈ ತಂಡದ ವಿಕೆಟ್‌ಗಳು ಬೀಳುತ್ತಲೇ ಇದ್ದವು. ನಾಯಕ ರಹಾನೆ 7 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರೆ, ಶ್ರೇಯಸ್ ಅಯ್ಯರ್ ಕೂಡ 7 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇಡೀ ತಂಡ 224 ರನ್ ಗಳಿಸಲಷ್ಟೇ ಶಕ್ತವಾಯಿತು. ಶಾರ್ದೂಲ್ ಠಾಕೂರ್ ಕೊನೆಯಲ್ಲಿ ಬಂದು 69 ಎಸೆತಗಳಲ್ಲಿ 75 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದ್ದು ತಂಡಕ್ಕೆ ನೆರವಾಯಿತು.

ಇದಾದ ಬಳಿಕ ವಿದರ್ಭ ತಂಡ ಬ್ಯಾಟಿಂಗ್‌ಗೆ ಇಳಿದಾಗ ತಂಡದ ಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಇಡೀ ತಂಡ 105 ರನ್ ಗಳಿಸಲಷ್ಟೇ ಶಕ್ತವಾಯಿತು. ಯಾವ ಆಟಗಾರನೂ 50ರ ಗಡಿ ದಾಟಲು ಸಾಧ್ಯವಾಗಲಿಲ್ಲ. ನಾಯಕ ಅಕ್ಷಯ್ ವಾಡ್ಕರ್ 27 ರನ್ ಕೊಡುಗೆ ನೀಡಿದ್ದು ಬಿಟ್ಟರೆ, ಉಳಿದ ಆಟಗಾರರು ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಮುಂಬೈ ಪರ ಧವಳ್ ಕುಲಕರ್ಣಿ, ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ತಲಾ ಮೂರು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications