For Quick Alerts
ALLOW NOTIFICATIONS  
For Daily Alerts
 

Ranji: ಗೋವಾ ವಿರುದ್ಧ ಕರ್ನಾಟಕದ ಬಿಗಿ ಹಿಡಿತ

ವೇಗದ ಬೌಲರ್‌ಗಳಾದ ವಿಜಯಕುಮಾರ್ ವೈಶಾಖ್‌ ಹಾಗೂ ರೋಹಿತ್ ಕುಮಾರ್ ಅವರ ಬಿಗುವಿನ ದಾಳಿಯ ನೆರವಿನಿಂದ ಕರ್ನಾಟಕ ಸಿ ಗುಂಪಿನ ಪಂದ್ಯದಲ್ಲಿ ಗೋವಾ ತಂಡದ ವಿರುದ್ಧ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ.

ಗೋವಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ಪ್ರವಾಸಿ ತಂಡ ಮೊದಲ ದಿನದಾಟದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 228 ರನ್ ಕಲೆ ಹಾಕಿತು. ಎರಡನೇ ದಿನಕ್ಕೆ ಅರ್ಜುನ್‌ ತೆಂಡೂಲ್ಕರ್‌ ಅಜೇಯ 10 ರನ್, ಹೆರಾಂಬ್ ಪರಬ್ ಅಜೇಯ 6 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Ranji: Karnataka hold tight against Goa

ಆರಂಭಿಕ ಆಘಾತ

ಗೋವಾ ತಂಡದ ಪರ ಟಾಪ್‌ ಆರ್ಡರ್‌ ಬ್ಯಾಟ್ಸ್‌ಮನ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಇಶಾನ್ ಗಡೇಕರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಸುಯಶ್ ಪ್ರಭುದೇಸಾಯಿ ರನ್ ಕಲೆ ಹಾಕುವಲ್ಲಿ ವಿಫಲರಾದರು.

ನಾಲ್ಕನೆ ವಿಕೆಟ್‌ಗೆ ಉತ್ತಮ ಜೊತೆಯಾಟ

45 ರನ್‌ಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಗೋವಾ ತಂಡಕ್ಕೆ ಸ್ನೇಹಲ್ ಕೌಠಂಕರ್ ಮತ್ತು ದರ್ಶನ್ ಮಿಸಾಲ್ ಜೋಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಸುಮಾರು 30 ಓವರ್‌ಗಳ ಕಾಲ ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಈ ಅವಧಿಯಲ್ಲಿ ರನ್‌ಗಳನ್ನು ಹೆಚ್ಚಿಸುತ್ತಾ ಸಾಗಿತು. ಅಲ್ಲದೆ ಸ್ಟ್ರೈಕ್‌ ಗಳನ್ನು ಇಬ್ಬರೂ ಬ್ಯಾಟರ್‌ಗಳು ರನ್ ಕಲೆ ಹಾಕಿದರು.

ಈ ಜೋಡಿ 82 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ನಾಯಕ ದರ್ಶನ್ ಮಿಸಾಲ್ 98 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 39 ರನ್ ಸೇರಿಸಿತು. ಉಳಿದಂತೆ ಯಾವ ಬ್ಯಾಟರ್‌ಗಳು ತಂಡಕ್ಕೆ ನೆರವಾಗಲಿಲ್ಲ.

ಸ್ನೇಹಲ್ ಕೌಠಂಕರ್ 193 ಎಸೆತಗಳಲ್ಲಿ 83 ರನ್‌ ಸಿಡಿಸಿದರು. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 1 ಸಿಕ್ಸರ್ ಸೇರಿವೆ.

Ranji: Karnataka hold tight against Goa

ವೈಶಾಖ್, ರೋಹಿತ್‌ಗೆ 3 ವಿಕೆಟ್‌

ವಿಜಯ್‌ ಕುಮಾರ್ ವೈಶಾಖ್‌ ಹಾಗೂ ರೋಹಿತ್ ಕುಮಾರ್ ಬಿಗುವಿನ ದಾಳಿ ನಡೆಸಿದರು. ವೈಶಾಖ್‌ 45 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರೆ, ರೋಹಿತ್ ಕುಮಾರ್ 66 ರನ್‌ ನೀಡಿ ಮೂರು ವಿಕೆಟ್ ಪಡೆದರು.

ಶಿವಂ ದುಬೆ ಅಬ್ಬರ

ಇನ್ನೊಂದು ರಣಜಿ ಕ್ರಿಕೆಟ್‌ ಟೂರ್ನಿಯಲ್ಲಿ ಶಿವಂ ದುಬೆ ಅಬ್ಬರಿಸಿದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ಶಿವಂ ದುಬೆ ಬಿ ಗುಂಪಿನ ಪಂದ್ಯದಲ್ಲಿ ಕೆರಳ ವಿರುದ್ಧ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 251 ರನ್‌ ಸಿಡಿಸಿದೆ. ಮುಂಬೈ ತಂಡದ ಪರ ಭುಪೇನ್‌ 50, ಶಿವಂ ದುಬೆ 51, ತನುಷ್ ಕೋಟ್ಯಾನ್‌ 56 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಕೇರಳದ ಶ್ರೇಯಸ್ ಗೋಪಾಲ್ 28 ರನ್ ನೀಡಿ ನಾಲ್ಕು ವಿಕೆಟ್‌ ಕಬಳಿದರು.

ನಾಗ್ಪುರದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ವಿದರ್ಭ ವಿರುದ್ಧ ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 206 ರನ್ ಗಳಿಗೆ ಆಲೌಟ್ ಆಯಿತು. ಸೌರಾಷ್ಟ್ರ ಪರ ಹಾರ್ವಿಕ್ ದೇಸಾಯಿ 68, ಚೇತೇಶ್ವರ್ ಪೂಜಾರ 43 ರನ್ ಸಿಡಿಸಿದರು. ವಿದರ್ಭ ತಂಡದ ಪರ ಉಮೇಶ್ ಯಾದವ್ 4, ಆದಿತ್ಯ ಸರವಟೆ, ಹರ್ಷ್ ದುಬೆ ತಲಾ ಎರಡು ವಿಕೆಟ್ ಕಬಳಿಸಿದರು.

Story first published: Friday, January 19, 2024, 18:30 [IST]
Other articles published on Jan 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+