Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ : ಫೈನಲ್ ತಲುಪಲು ಕರ್ನಾಟಕ ತಂಡಕ್ಕೆ 352 ರನ್‌ಗಳ ಗುರಿ

Ranji: karnataka need 352 runs to enter final

ರಣಜಿ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು 161 ರನ್‌ಗಳಿಗೆ ಆಲೌಟ್‌ ಮಾಡುವಲ್ಲಿ ಕರ್ನಾಟಕ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಕರ್ನಾಟಕ 352 ರನ್‌ಗಳ ಬೃಹತ್ ಗುರಿಯನ್ನು ಪಡೆದುಕೊಂಡಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡದ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಅಭಿಮನ್ಯು ಮಿಥುನ್ ಮತ್ತು ಕೆ.ಗೌತಮ್ ಅದ್ಭುತವಾಗಿ ಬೌಲಿಂಗ್ ದಾಳಿ ಮಾಡಿ ಪಶ್ಚಿಮ ಬಂಗಾಳ ತಂಡವನ್ನು 161 ರನ್‌ಗಳಿಗೆ ಆಲೌಟ್ ಆಗುವಂತೆ ಮಾಡಿದರು.

ಕರ್ನಾಟಕ ತಂಡದ ಪರವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಥುನ್ 4 ವಿಕೆಟ್ ಪಡೆದುಕೊಂಡರೆ ಕೆ.ಗೌತಮ್ 3 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪಶ್ಚಿಮ ಬಂಗಾಳ ತಂಡದ ಪರವಾಗಿ ಯಾವ ಆಟಗಾರನು ಕೂಡ ಅರ್ಧ ಶತಕವನ್ನುಗಳಿಸಲು ವಿಫಲರಾದರು.

ಕರ್ನಾಟಕ ಫೈನಲ್ ತಲುಪಬೇಕಾದರೆ ಪಶ್ಚಿಮ ಬಂಗಾಳ ನೀಡಿರುವ ಬೃಹತ್ ಟಾರ್ಗೆಟನ್ನು ಹಿಂದಿಕ್ಕಬೇಕಾಗಿದೆ. ಆದರೆ ಕರ್ನಾಟಕ ಆರಂಭದಲ್ಲೇ ಪ್ರಮುಖ ಆಟಗಾರ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ಪಶ್ಚಿಮ ಬಂಗಾಳ ಆಟಗಾರರು ಗೆಲುವಿನ ವಿಶ್ವಾಸದಲ್ಲಿದ್ದಾರೆ.

Story first published: Monday, March 2, 2020, 13:32 [IST]
Other articles published on Mar 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+