ರಣಜಿ: ರಾಜಸ್ಥಾನ ವಿರುದ್ಧದ ಕ್ವಾರ್ಟರ್ ಫೈನಲಿಗೆ ಕರ್ನಾಟಕ ತಂಡ ಪ್ರಕಟ

ಬೆಂಗಳೂರು, ಜನವರಿ 13: ರಾಜಸ್ಥಾನ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯಕ್ಕೆ ಆತಿಥೇಯ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ(ಜನವರಿ 15)ದಿಂದ ಪಂದ್ಯಾವಳಿ ನಡೆಯಲಿದೆ. ಗಾಯದ ಸಮಸ್ಯೆಯಿಂದ ಬರೋಡಾ ವಿರುದ್ಧದ ಲೀಗ್ ಪಂದ್ಯಕ್ಕೆ ಅಲಭ್ಯರಾಗಿದ್ದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಅವರು ಕ್ವಾರ್ಟರ್ ಫೈನಲ್ ಗೆ ಲಭ್ಯರಾಗಿರುವುದು ಕರ್ನಾಟಕ ತಂಡಕ್ಕೆ ಬಲ ತರಲಿದೆ.
ಮನೀಷ್ ಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ಕ್ರಮವಾಗಿ ನಾಯಕ ಹಾಗೂ ಉಪನಾಯಕರಾಗಿ ಮುಂದುವರೆಯಲಿದ್ದಾರೆ. ಲೀಗ್ ಹಂತದಲ್ಲಿ ಕರ್ನಾಟಕ ತಂಡ ಎಲೈಟ್ ಎ ಮತ್ತು ಬಿ ಗುಂಪಿನಿಂದ ಮೂರನೇ ಸ್ಥಾನಿಯಾಗಿ ಎಂಟರ ಘಟ್ಟಕ್ಕೇರಿತ್ತು. ಮಯಾಂಕ್ ಅಗರವಾಲ್ ಅವರು ಗಾಯಗೊಂಡಿದ್ದು, ಇನ್ನು ಗುಣಮುಖರಾಗದ ಕಾರಣ ರಣಜಿ ತಂಡಕ್ಕೆ ಆಯ್ಕೆಯಾಗಿಲ್ಲ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಬದಲಿ ಆಟಗಾರನಾಗಿ ಆಯ್ಕೆಯಾಗುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ:
* ಮನೀಷ್ ಪಾಂಡೆ (ನಾಯಕ),
* ಶ್ರೇಯಸ್ ಗೋಪಾಲ್ (ಉಪನಾಯಕ),
* ವಿನಯ್ ಕುಮಾರ್,
* ಡಿ. ನಿಶ್ಚಲ್,
* ಕರುಣ್ ನಾಯರ್,
* ಆರ್. ಸಮರ್ಥ್,
* ಮಿಥುನ್,
* ರೋನಿತ್ ಮೋರೆ,
* ಕೆ.ಗೌತಮ್
* ಪ್ರಸಿದ್ಧ ಕೃಷ್ಣ,
* ಕೆವಿ ಸಿದ್ಧಾರ್ಥ್,
* ಜೆ. ಸುಚಿತ್,
* ಶರತ್ ಬಿಆರ್ (ವಿಕೆಟ್ ಕೀಪರ್),
* ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್)
* ಪವನ್ ದೇಶಪಾಂಡೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications