Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ: ನಿರ್ಣಾಯಕ ಪಂದ್ಯದಲ್ಲಿ ಜಯದ ಹಾದಿಯಲ್ಲಿ ಕರ್ನಾಟಕ

Ranji: Karnataka Vs Baroda Day Second

ರಣಜಿಯಲ್ಲಿ ಕರ್ನಾಟಕ ಮತ್ತು ಬರೋಡ ಸೆಣೆಸಾಟವನ್ನು ನಡೆಸುತ್ತಿದೆ. ಎರಡನೇ ದಿನದಂತ್ಯಕ್ಕೆ ಕರ್ನಾಟಕ ತನ್ನ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದು ನಿರ್ಣಾಯಕ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿರುವ ಬರೋಡಾ ತಂಡ 60 ರನ್‌ ಮುನ್ನಡೆಯಲ್ಲಿದ್ದು 5 ವಿಕೆಟ್ ಕಳೆದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಬರೋಡಾ ತಂಡವನ್ನು 85 ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕರ್ನಾಟಕ ತಂಡ 233 ರನ್‌ಗಳಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 148ರನ್‌ಗಳ ಮುನ್ನಡೆಯನ್ನು ಪಡೆದ ಬರೋಡ ತಂಡದ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾಯಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗಳಿದ ಬರೋಡಾ ತಂಡ ಉತ್ತಮ ಬ್ಯಾಟಿಂಗ್‌ ನಡೆಸಿತಾದರೂ ಈಗಾಗಲೆ 5 ವಿಕೆಟ್ ಕಳೆದುಕೊಂಡಿದೆ. ಆರಮಭಿಕ ಆಟಗಾರ ಅಹ್ಮದ್ನೂರ್ ಪಠಾಣ್ ಎರಡನೇ ಇನ್ನಿಂಗ್ಸ್‌ನಲ್ಲೂ ಮಿಂಚಿದ್ದಾರೆ. 90 ರನ್‌ಗಳಿಸಿ ಔಟಾದರು. ದೀಪಕ್ ಹೂಡಾ ಭರ್ತಿ ಅರ್ಧ ಶತಕ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ 208ರನ್‌ ಗಳಿಸಿರುವ ಬರೋಡಾ ಸದ್ಯ 60 ರನ್‌ಗಳ ಮುನ್ನಡೆಯಲ್ಲಿದೆ. 31 ರನ್‌ಗಳಿಸಿರುವ ಅಭಿಮನ್ಯು ರಜಪೂತ್ ಮತ್ತು ಪರ್ತ್ ಕೊಹ್ಲಿ(4) ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಕರ್ನಾಟಕಕ್ಕೆ ಗೆಲುವು ಅನಿವಾರ್ಯವಾಗಿದ್ದು ಎರಡು ದಿನದ ಆಟ ಇನ್ನೂ ಇರುವುದರಿಂದ ಗೆಲುವಿನ ಸನಿಹದಲ್ಲಿ ಕರ್ನಾಟಕ ತಂಡವಿದೆ.

Story first published: Thursday, February 13, 2020, 19:29 [IST]
Other articles published on Feb 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+