Ranji: ಮನೀಷ್ ಪಾಂಡೆ 88, ಕರ್ನಾಟಕ 374: ಮತ್ತೊಂದು ಗೆಲುವಿನ ಕನಸಿನಲ್ಲಿ ಮಯಾಂಕ್ ಪಡೆ
ಕರ್ನಾಟಕ ಹಾಗೂ ಗುಜರಾತ್ ನಡುವಿನ ರಣಜಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ ಪಡೆ ಉತ್ತಮ ಸ್ಥಿತಿಯಲ್ಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಗುಜರಾತ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿ ಮತ್ತೊಂದು ಗೆಲುವಿನ ನನಸು ಮಾಡಿಕೊಳ್ಳುವ ಪ್ಲ್ಯಾನ್ ಕರ್ನಾಟಕ ತಂಡದ್ದಾಗಿದೆ.
ಭಾನುವಾರ ನಡೆದ ಮೂರನೇ ದಿನದಾಟದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 328 ರನ್‌ಗಳಿಂದ ಮುಂದುವರೆಸಿ, 374 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆತಿಥೇಯ ಗುಜರಾತ್ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 171 ರನ್ ಕಲೆ ಹಾಕಿದೆ. ಗುಜರಾತ್ ಪರ ಉಮಂಗ್ ಕುಮಾರ್ ಹಾಗೂ ಚಿಂತನ್ ಗಜ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಜೋಡಿಯನ್ನು ಬೇಗನೆ ಕಟ್ಟಿ ಹಾಕುವ ಪ್ಲ್ಯಾನ್ ಕರ್ನಾಟಕ ತಂಡದ್ದಾಗಿದೆ.

ಮನೀಷ್ 88
ಮೂರನೇ ದಿನದಾಂಟವನ್ನು ಅಜೇಯ 56 ರನ್‌ಗಳಿಂದ ಆಟ ಮುಂದುವರಿಸಿದ ಮನೀಷ್ ಪಾಂಡೆ, ದೊಡ್ಡ ಇನ್ನಿಂಗ್ಸ್ ಕಟ್ಟುವ ಆಸೆ ಮಣ್ಣು ಪಾಲಾಗಿದೆ. ಮನೀಷ್ 156 ಎಸೆತಹಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 88 ರನ್ ಬಾರಿಸಿ ಔಟ್ ಆದರು. ಉಳಿದಂತೆ ಸಜುಯ್ ಸತಾರಿ 31 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಡಬಲ್ ಡಿಜಿಟ್ ಮುಟ್ಟಲಿಲ್ಲ.
ಗುಜರಾತ್ ಪರ ನಾಯಕ ಚಿಂತನ್ ಗಜ 65 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ಸಿದ್ಧಾರ್ಥ್ ದೇಸಾಯಿ, ರಿಂಕೇಶ್ ತಲಾ ಎರಡು ವಿಕೆಟ್ ಕಬಳಿಸಿದರು.

ಆರಂಭದಲ್ಲೇ ಆಘಾತ
ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಗುಜರಾತ್ ತಂಡದ ಆರಂಭಿಕರು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆತಿಥೇಯ ತಂಡದ ಪರ ಪ್ರಿಯಾಂಕ್ ಪಾಂಚಾಲ್ 4, ಸನ್‌ಪ್ರೀತ್‌ಸಿಂಗ್ ಬಗ್ಗಾ 27, ಸಿದ್ಧಾರ್ಥ್ ದೇಸಾಯಿ 0, ಹೆತ್ ಪಟೇಲ್ 6 ಜವಾಬ್ದಾರಿಯನ್ನು ಮರೆತರು. ಮನನ್ ಹಿಂಗ್ರಾಜಿಯಾ 56, ಕ್ಷತೀಜ್ ಪಟೇಲ್ 26, ಉಮಂಗ್ ಕುಮಾರ್ 29 ರನ್ ಬಾರಿಸಿದರು.
ಕರ್ನಾಟಕದ ಪರ ವಾಸುಕಿ ಕೌಶಿಕ್ 3, ರೋಹಿತ್ ಕುಮಾರ್ 2 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications