Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ranji: ಮಯಾಂಕ್‌ ಅರ್ಧಶತಕ, ಮನೀಷ್‌ ಅಜೇಯ ಅರ್ಧಶತಕ: ಕರ್ನಾಟಕಕ್ಕೆ ಮುನ್ನಡೆ

ನಾಯಕ ಮಯಾಂಕ್ ಅಗರ್ವಾಲ್‌ ಹಾಗೂ ಸ್ಟಾರ್ ಆಟಗಾರ ಮನೀಷ್ ಪಾಂಡೆ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಕರ್ನಾಟಕ ತಂಡ ರಣಜಿ ಟೂರ್ನಿಯ ಎಲೈಟ್‌ ಗ್ರುಪ್‌ ಸಿ ವಿಭಾಗದಲ್ಲಿ ಚಂಡೀಗಢ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

ಶನಿವಾರ ನಡೆದ ಎರಡನೇ ದಿನದಾಟದಲ್ಲಿ ಚಂಡೀಗಢ್ ಮೊದಲ ಇನ್ನಿಂಗ್ಸ್‌ನ್ನು 6 ವಿಕೆಟ್‌ಗೆ 219 ರನ್‌ಗಳಿಂದ ಆಟ ಮುಂದುವರಿಸಿ 267 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 268 ರನ್‌ಗಳನ್ನು ಸೇರಿಸಿದೆ. ಮೂರನೇ ದಿನದಾಟಕ್ಕೆ ಕರ್ನಾಟಕದ ಪರ ಹಾರ್ದಿಕ್ ರಾಜ್‌ ಅಜೇಯ 49, ಸ್ಟಾರ್ ಆಟಗಾರ ಮನೀಷ್ ಪಾಂಡೆ ಅಜೇಯ 102 ರನ್ ಬಾರಿಸಿದ್ದು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Ranji: Mayank half century, Manish unbeaten century: Karnataka lead

ವೈಶಾಖ್‌ಗೆ 4 ವಿಕೆಟ್‌

ಕರ್ನಾಟಕದ ಪರ ವಿಜಯಕುಮಾರ್‌ ವೈಶಾಖ್‌ 23 ಓವರ್‌ಗಳ ಬೌಲಿಂಗ್ ಮಾಡಿದ್ದು 77 ರನ್‌ ಸಿಡಿಸಿದ್ದು 4 ವಿಕೆಟ್‌ ಕಬಳಿಸಿದ್ದಾರೆ. ಹಾರ್ದಿಕ್ ರಾಜ್‌ 56 ರನ್ ನೀಡಿ 4 ವಿಕೆಟ್‌ ಪಡೆದರು.

ಕರ್ನಾಟಕಕ್ಕೆ ಆರಂಭಿಕ ಆಘಾತ

ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ ಕಾದಿತ್ತು. ರವಿಕುಮಾರ್ ಸಮರ್ಥ್ 4 ರನ್‌ ಸಿಡಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ಮಯಾಂಕ್‌ ಅಗರ್ವಾಲ್‌ ಹಾಗೂ ನಿಕಿನ್ ಜೋಸ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 70 ರನ್‌ ಸೇರಿಸಿದರು.

ನಿಕಿನ್ ಜೋಸ್‌ 4 ಬೌಂಡರಿ ಸೇರಿದಂತೆ 37 ರನ್ ಸಿಡಿಸಿ ಔಟ್ ಆದರು. ಭರ್ಜರಿ ಫಾರ್ಮ್‌ನಲ್ಲಿರುವ ಮಯಾಂಕ್‌ ಅಗರ್ವಾಲ್‌ 57 ರನ್‌ ಬಾರಿಸಿದರು. 90 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಬಾರಿಸಿ ಅಬ್ಬರಿಸಿದರು.

Ranji: Mayank half century, Manish unbeaten century: Karnataka lead

ಶತಕದ ಜೊತೆಯಾಟ

ನಾಲ್ಕನೇ ವಿಕೆಟ್‌ಗೆ ಹಾರ್ದಿಕ್ ರಾಜ್‌ ಹಾಗೂ ಮನೀಷ್‌ ಪಾಂಡೆ ಜೋಡಿ ಚಂಡೀಗಢ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಕ್ಲಾಸಿಕ್‌ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಚಂಡೀಗಢ ಬೌಲರ್‌ಗಳು ವಿಫಲರಾದರು.

ಮನೀಷ್‌ ಪಾಂಡೆ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಮನೀಷ್ ಪಾಂಡೆ ಏಕದಿನ ಶೈಲಿನಲ್ಲಿ ಬ್ಯಾಟಿಂಗ್ ನಡೆಸಿದರು. ಮನೀಷ್‌ ಮನಮೋಹಕ ಬ್ಯಾಟಿಂಗ್‌ನಲ್ಲಿ 14 ಬೌಂಡರಿ, 3 ಸಿಕ್ಸರ್ ಸೇರಿವೆ.

Story first published: Saturday, February 17, 2024, 20:45 [IST]
Other articles published on Feb 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+