Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ: ಮುಂಬೈಗೆ ಮುಖಭಂಗ, ಕರ್ನಾಟಕಕ್ಕೆ ಭರ್ಜರಿ ಜಯ

ನಾಗ್ಪುರ, ಡಿಸೆಂಬರ್ 10: ಇಲ್ಲಿನ ವಿದರ್ಭ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಮುಖಭಂಗ ಅನುಭವಿಸಿದೆ. ಕರ್ನಾಟಕ ಭರ್ಜರಿ ಪ್ರದರ್ಶನ ನೀಡಿ ಇನ್ನಿಂಗ್ಸ್ ಹಾಗೂ 20ರನ್ ಗಳಿಂದ ಪಂದ್ಯವನ್ನು ಗೆದ್ದು, ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ..

ಕರ್ನಾಟಕ ಗಳಿಸಿದ್ದ 570ರನ್ ಗಳ ಬೃಹತ್ ಮೊತ್ತದ ಎದುರು ಮುಂಬೈ ತಂಡ ತನ್ನ ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 173 ರನ್ ಹಾಗೂ 377ರನ್ ಗಳಿಸಿ ಶರಣಾಗಿದೆ.

Ranji QF: Karnataka win vs Mumbai by an innings and 20 runs qualify for Semi Finals

ಎರಡನೇ ಇನ್ನಿಂಗ್ಸ್ ನಲ್ಲಿ ಮುಂಬೈ ಪರ ಸೂರ್ಯ ಕುಮಾರ್ ಯಾದವ್ 108ರನ್ (16 ಬೌಂಡರಿ, 1 ಸಿಕ್ಸರ್), ಆಕಾಶ್ ಪಾರ್ಕರ್ 65, ಶಿವಮ್ ದುಬೇ 71ರನ್ ಗಳಿಸಿ ಇನ್ನಿಂಗ್ಸ್ ಸೋಲು ತಪ್ಪಿಸಲು ಯತ್ನಿಸಿದರು.


ಕರ್ನಾಟಕ ಪರ ಕೆ ಗೌತಮ್ 6, ಮೊದಲ ಇನ್ನಿಂಗ್ಸ್ ಹ್ಯಾಟ್ರಿಕ್ ವಿಕೆಟ್ ವೀರ ವಿನಯ್ ಕುಮಾರ್ 2 ಅರವಿಂದ್ ಶ್ರೀನಾಥ್ 1 ವಿಕೆಟ್ ಗಳಿಸಿದರು.

ಇದಕ್ಕೂ ಮುನ್ನ ಕರ್ನಾಟಕ ಪರ ಶ್ರೇಯಸ್ ಗೋಪಾಲ್ ಅಜೇಯ 150(11 ಬೌಂಡರಿ), ಕೆ ಅಬ್ಬಾಸ್ 50, ಮಾಯಾಂಕ್ ಅಗರವಾಲ್ 78, ಆರ್ ಸಮರ್ಥ್ 40ರನ್ ಗಳಿಸಿ 570ಸ್ಕೋರ್ ಮಾಡಿ ಆಲೌಟ್ ಆಗಿತ್ತು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+