Ranji: ಸಚಿನ್ ತೆಂಡೂಲ್ಕರ್ ಪುತ್ರ ಅರ್ಧಶತಕ: ಮಯಾಂಕ್, ದೇವದತ್ ಪಡಿಕ್ಕಲ್ ಶತಕ
ಗೋವಾ ತಂಡದ ಸಂಘಟಿತ ಬ್ಯಾಟಿಂಗ್‌ಗೆ ಕರ್ನಾಟಕದ ಸ್ಟಾರ್ ಬ್ಯಾಟರ್‌ಗಳಾದ ಮಯಾಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಶತಕ ಬಾರಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಶನಿವಾರ ನಡೆದ ಎರಡನೇ ದಿನದಾಟದಲ್ಲಿ ಗೋವಾ ಮೊದಲ ಇನ್ನಿಂಗ್ಸ್‌ನ್ನು 8 ವಿಕೆಟ್‌ಗೆ 228 ರನ್‌ಗಳಿಂದ ಆಟ ಮುಂದುವರಿಸಿ 321 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ದಿನದಾಟದಂತ್ಯಕ್ಕೆ 4 ವಿಕೆಟ್‌ಗೆ 251 ರನ್ ಸೇರಿಸಿತು. ನಿಕಿನ್ ಜೋಸ್ ಹಾಗೂ ರೋಹಿತ್ ಕುಮಾರ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕರ್ನಾಟಕದ ಪರ ವಿಜಯ್‌ಕುಮಾರ್ ವೈಶಾಖ್, ಎಂ.ವೆಂಕಟೇಶ್, ರೋಹಿತ್ ಕುಮಾರ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಗೋವಾ ತಂಡದ ಪರ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ 112 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ಮಿಂಚಿದರು. ಉಳಿದಂತೆ ಹೆರಾಂಬ್ ಪರಬ್ ಅಬ್ಬರಿಸಿದರು. ಹೆರಾಂಬ್ ಪರಬ್ ಎಂಟು ಬೌಂಡರಿ, 1 ಜಯದೊಂದಿಗೆ 53 ರನ್ ಬಾರಿಸಿ ಅಬ್ಬರಿಸಿದರು.
ಕರ್ನಾಟಕಕ್ಕೆ ಆರಂಭ ಆಘಾತ
ಕರ್ನಾಟಕದ ಭರವಸೆಯ ಆಟಗಾರ ದೆಗ್ ನಿಚಾಲ್ 16 ರನ್ ಬಾರಿಸಿ ಔಟ್ ಆದರು. ಕರ್ನಾಟಕದ ಮೊತ್ತ 27 ರನ್ ಆಗಿದ್ದಾಗ ತಂಡ ಮೊದಲ ವಿಕೆಟ್ ಕಳೆದುಕೊಂಡಿತು.

ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಮಾಯಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಆಧಾರವದರು. ಈ ಜೋಡಿ ಗೋವಾ ತಂಡದ ಬೌಲರ್‌ಗಳನ್ನು ಕಟ್ಟಿಹಾಕಿತು. ಸುಮಾರು 50 ಓವರ್‌ಗಳ ವರೆಗೆ ಕರ್ನಾಟಕ ವಿಕೆಟ್‌ಗಳನ್ನು ಕಳೆದುಕೊಳ್ಳದೆ ಬ್ಯಾಟ್ ಮಾಡಿತು.
ದೇವದತ್, ಮಯಾಂಕ್ ಶತಕ
ದೇವದತ್ ಪಡಿಕ್ಕಲ್ ಮನಮೋಹಕ ಬ್ಯಾಟ್ ಮಾಡಿದರು. ದೇವದತ್ 142 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ 101 ರನ್ ಬಾರಿಸಿ ಅಬ್ಬರಿಸಿದರು.
ಇನ್ನು ನಾಯಕ ಮಯಾಂಕ್ ಅಗರ್‌ವಾಲ್ 180 ಎಸೆತಗಳಲ್ಲಿ 10 ಬೌಂಡರಿ, 9 ಸಿಕ್ಸರ್ ಸಹಾಯದಿಂದ 114 ಸಿಡಿಸಿ ತಂಡಕ್ಕೆ ನೆರವಾದರು.
ಮೂರನೇ ದಿನದ ಮೊದಲಾದಟದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿ ಇನ್ನಿಂಗ್ಸ್ ಮುನ್ನಡೆ ಸಾಧಿಸುವ ಯೋಚನೆಯನ್ನು ಮಾಡುತ್ತಿದೆ.
ಗೋವಾ ತಂಡದ ಪರ ದರ್ಶನ ಮಿಸಲ್ ಹಾಗೂ ಮೋಹಿತ್ ರೆಡ್ಕರ್ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications