For Quick Alerts
ALLOW NOTIFICATIONS  
For Daily Alerts
 

Ranji Trophy Semi Final: ಅಂತಿಮ ದಿನ ರೋಚಕ ಸೆಣೆಸಾಟ: ಸೆಮಿಫೈನಲ್‌ನಲ್ಲಿ ಸೌರಾಷ್ಟ್ರಕ್ಕೆ ಮಣಿದ ಕರ್ನಾಟಕ

Ranji, Semi Final: Saurashtra won against Karnataka by 4 wickets reached to final

ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ರೋಚಕ ಸೋಲು ಅನುಭವಿಸಿದ್ದು ಈ ಬಾರಿಯೂ ಸೆಮಿಫೈನಲ್‌ಗೆ ತನ್ನ ಹೋರಾವನ್ನು ಅಂತ್ಯಗೊಳಿಸಿದೆ. ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಕರ್ನಾಟಕ ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್‌ನಲ್ಲಿ ಒಂದು ಇನ್ನಿಂಗ್ಸ್‌ಲ್ಲಿ ಅನುಭವಿಸಿದ ಹಿನ್ನಡೆಗೆ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಈ ಪಂದ್ಯದಲ್ಲಿ ಕರ್ನಾಟಕ ತಂದ ನಾಯಕ ಮಯಾಂಕ್ ಅಗರ್ವಾಲ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು. ಇನ್ನು ಎರಡನೆ ಇನ್ನಿಂಗ್ಸ್‌ನಲ್ಲಿಯೂ ಅಗರ್ವಾಲ್ ಅರ್ಧಶತಕದ ಕೊಡುಗೆ ನೀಡಿದ್ದಾರೆ. ಅಂತಿಮ ದಿನ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದ್ದು 4 ವಿಕೆಟ್‌ಗಳ ಅಂತರದಿಂದ ಕರ್ನಾಟಕ ತಂಡವನ್ನು ಮಣಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 120 ರನ್‌ಗಳ ಹಿನ್ನಡೆ ಅನುಭವಿಸಿದ ಕರ್ನಾಟಕ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಎಡವಿತು. ಕರ್ನಾಟಕ ಪರವಾಗಿ ನಾಯಕ ಮಯಾಂಕ್ ಅಗವರ್ವಾಲ್ ಹಾಗೂ ನಿಕಿನ್ ಜೋಸ್ ಮಾತ್ರವೆ ಉತ್ತಮಕ ಪ್ರದರ್ಶನ ನೀಡಿದರು.ಮಯಾಂಕ್ ಅಗರ್ವಾಲ್ ಅರ್ಘ ಶತಕ ಸಿಡಿಸಿದರೆ ನಿಕಿಲ್ ಜೋಸ್ 109 ರನ್‌ಗಳಿಸಿ ತಂಡಕ್ಕೆ ನೆರವಾದರು. ಆದರೆ ಇತರ ಆಟಗಾರರಿಂದ ಉತ್ತಮ ಬೆಂಬಲ ದೊರೆಯದ ಕಾರಣದಿಂದಾಗಿ ಕರ್ನಾಟಕ ತಂಡ 234 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಇದರ ಪರಿಣಾಮವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡ ಗೆಲ್ಲಲು 115 ರನ್‌ಗಳ ಸುಲಭ ಸವಾಲವನ್ನು ಸ್ವೀಕರಿಸಿತು. ಆದರೆ ಈ ಮೊತ್ತ ಸೌರಾಷ್ಟ್ರ ಪಾಲಿಗೆ ಬಹಳ ಕಠಿಣವಾಗುವಂತೆ ಮಾಡಿದ್ದು ಕೆ ಗೌತಮ್ ಹಾಗೂ ವಾಸುಕಿ ಕೌಶಿಕ್. ಇಬ್ಬರು ಕೂಡ ಅದ್ಭುತವಾಗಿ ಬೌಲಿಂಗ್ ನಡೆಸಿದ್ದು ಒಂದು ಹಂತದಲ್ಲಿ ಸೌರಾಷ್ಟ್ರ ಪಂದ್ಯವನ್ನು ಬಹುತೇಕ ಕಳೆದುಕೊಂಡಾಯಿತು ಎಂಬ ಭಾವನೆ ಮೂಡುವಂತೆ ಮಾಡಿದ್ದರು. ಆದರೆ ಸೌರಾಷ್ಟ್ರ ನಾಯಕ ಅರ್ಪಿತ್ ವಸವಾಡ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಕರ್ನಾಟಕ ತಂಡಕ್ಕೆ 4 ವಿಕೆಟ್‌ಗಳ ಅಂತರದಿಂದ ಸೋಲುಣಿಸಿದ್ದಾರೆ.

ಈ ಸೋಲಿನಿಂದಿಗೆ ಕರ್ನಾಟಕ ತಂಡ ಈ ಬಾರಿ ಕೂಡ ರಣಣಿ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. ಇತ್ತ ಸೌರಾಷ್ಟ್ರ ತಂಡ ಫೈನಲ್ ಪ್ರವೇಶಿಸಿದ್ದು ಮತ್ತೊಂದು ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿರುವ ಬೆಂಗಾಲ್ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ.

ಕರ್ನಾಟಕ: ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ
ಬೆಂಚ್: ಶರತ್ ಬಿಆರ್, ಮುರಳೀಧರ ವೆಂಕಟೇಶ್, ರೋನಿತ್ ಮೋರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಶುಭಾಂಗ್ ಹೆಗ್ಡೆ, ವಿಶಾಲ್ ಓನಾಟ್.

ಸೌರಾಷ್ಟ್ರ: ಅರ್ಪಿತ್ ವಾಸವಾಡ (ನಾಯಕ), ಚೇತನ್ ಸಕರಿಯಾ, ಚಿರಾಗ್ ಜಾನಿ, ಧರ್ಮೇಂದ್ರಸಿನ್ಹ್ ಜಡೇಜಾ, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಕುಶಾಂಗ್ ಪಟೇಲ್, ಪಾರ್ಥ್ ಭುತ್, ಪ್ರೇರಕ್ ಮಂಕಡ್, ಶೆಲ್ಡನ್ ಜಾಕ್ಸನ್, ಸ್ನೆಲ್ ಪಟೇಲ್, ವಿಶ್ವರಾಜ್ ಜಡೇಜಾ
ಬೆಂಚ್: ಯುವರಾಜಸಿಂಹ ದೋಡಿಯಾ, ಸಮರ್ಥ ವ್ಯಾಸ್, ತರಂಗ್ ಗೊಹೆಲ್, ದೇವಾಂಗ್ ಕರಮ್ತಾ, ಜೇ ಗೋಹಿಲ್, ನವನೀತ್ ವೋರಾ

Story first published: Sunday, February 12, 2023, 15:58 [IST]
Other articles published on Feb 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+