ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ರೈಲ್ವೇಸ್ ಗೆಲ್ಲಲು 318 ರನ್‌ಗಳ ಅಗತ್ಯ

ಶಿವಮೊಗ್ಗ, ಡಿಸೆಂಬರ್ 24: ಶಿವಮೊಗ್ಗದ ನವುಲೆಯಲ್ಲಿರುವ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಎ' ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ರೈಲ್ವೇಸ್‌ಗೆ ಗೆಲ್ಲಲು ಇನ್ನೂ 318 ರನ್‌ಗಳ ಅಗತ್ಯವಿದೆ. ಸೋಮವಾರ (ಡಿ.24) ದಿನದಾಂತ್ಯಕ್ಕೆ ರಲ್ವೇಸ್ 16 ಓವರ್‌ಗಳಲ್ಲಿ 1 ವಿಕೆಟ್ ಕಳೆದು 44 ರನ್ ಪೇರಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ದೇಗಾ ನಿಶ್ಚಲ್ 52, ಕೃಷ್ಣಮೂರ್ತಿ ಸಿದ್ಧಾರ್ಥ್ 69 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಕರ್ನಾಟಕ 91.4 ಓವರ್‌ನಲ್ಲಿ 214 ರನ್ ಕಲೆ ಹಾಕಿ ಇನ್ನಿಂಗ್ಸ್ ಮುಗಿಸಿತ್ತು. ರೈಲ್ವೇಸ್ ತಂಡ ಮನೀಷ್ ರಾವ್ ಅವರ ಅಜೇಯ 52 ರನ್ ನೆರವಿನೊಂದಿಗೆ ಮೊದಲ ಇನ್ನಿಂಗ್ಸ್ ನಲ್ಲಿ 60.2 ಓವರ್‌ಗೆ 143 ರನ್ ಗಳಿಸಿತ್ತು.
ದ್ವಿತೀಯ ಇನ್ನಿಂಗ್ಸ್ ವೇಳೆ ಕರ್ನಾಟಕದ ನಿಶ್ಚಲ್ ಆಕರ್ಷಕ ಶತಕ (101) ಬಾರಿಸಿದರು. ಜೊತೆಗೆ ದೇವದತ್ ಪಡಿಕಲ್ 75 ರನ್ ಮತ್ತು ಕೃಷ್ಣಮೂರ್ತಿ ಅಜೇಯ 84 ರನ್ ಬೆಂಬಲ ನೀಡಿದ್ದರಿಂದ ತಂಡ 84 ಓವರ್‌ನಲ್ಲಿ 290 ರನ್ ಸೇರಿಸಿ ಇನ್ನಿಂಗ್ಸ್ ಮುಗಿಸಿತ್ತು. ದ್ವಿತೀಯ ಇನ್ನಿಂಗ್ಸ್‌ಗೆ ಇಳಿದ ರೈಲ್ವೇಸ್ ಪರ ಸೌರಭ್ ವಾಕಸ್ಕರ್ ಮತ್ತು ನಿತಿನ್ ಭಿಲ್ಲೆ ಕ್ರೀಸ್ ನಲ್ಲಿದ್ದಾರೆ.
ರೈಲ್ವೇಸ್ ಪ್ರಥಮ ಇನ್ನಿಂಗ್ಸ್ ವೇಳೆ ಕರ್ನಾಟಕದ ರೋನಿತ್ ಮೋರೆ ಬರೋಬ್ಬರಿ 5 ವಿಕೆಟ್ ಕೆಡವಿ ಪಾರಮ್ಯ ಮೆರೆದರು. ದ್ವಿತೀಯ ಇನ್ನಿಂಗ್ಸ್ ನಲ್ಲೂ ಮನೀಷ್ ಪಾಂಡೆ ಬಳಗ ರೈಲ್ವೇಸ್ ತಂಡ ಬೇಗ ಆಟ ಮುಗಿಸುವಂತೆ ನೋಡಿಕೊಳ್ಳುವುದರಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications