Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಟ್ರೋಫಿ: ಮುಂಬೈ ವಿರುದ್ಧ ಕರ್ನಾಟಕ ಮಾರಕ ಬೌಲಿಂಗ್ ದಾಳಿ

Ranji Trophy 2019-20: Mumbais slide continues

ಮುಂಬೈ, ಜನವರಿ 4: ಮುಂಬೈಯ ಬಾಂದ್ರಾ ಕರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಮುಂಬೈ vs ಕರ್ನಾಟಕ, 4ನೇ ಸುತ್ತಿನ ಎಲೈಟ್ ಗ್ರೂಪ್ 'ಎ' ಮತ್ತು 'ಬಿ' ರಣಜಿ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 24 ರನ್ ಮುನ್ನಡೆ ಸಾಧಿಸಿದೆ. ಮುಂಬೈ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕರ್ನಾಟಕದ ಅಭಿಮನ್ಯು ಮಾರಕ ಬೌಲಿಂಗ್ ದಾಳಿ ನಡೆಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ, ಪೃಥ್ವಿ ಶಾ 29, ನಾಯಕ ಸೂರ್ಯಕುಮಾರ್ ಯಾದವ್ 77, ಶಶಾಂಕ್ ಅಥರ್ಡೆ 35, ತುಷಾರ್ ದೇಶಪಾಂಡೆ 10 ರನ್‌ನೊಂದಿಗೆ 55.5 ಓವರ್‌ಗೆ 194 ರನ್ ಬಾರಿಸಿತು. ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ ಭುಜದ ನೋವಿಗೆ ತುತ್ತಾಗಿರುವ ಪೃಥ್ವಿ ಶಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ.

ಗುರಿ ಬೆನ್ನತ್ತಿದ ಕರ್ನಾಟಕದಿಂದ ರವಿಕುಮಾರ್ ಸಮರ್ಥ್ 86, ದೇವದತ್ ಪಡಿಕ್ಕಲ್ 32, ಶ್ರೇಯಸ್ ಗೋಪಾಲ್ 31, ಶರತ್ ಬಿಆರ್ 46 ರನ್‌ ಸೇರಿಸಿದ್ದರಿಂದ ರಾಜ್ಯ ತಂಡ 68.5 ಓವರ್‌ನಲ್ಲಿ 218 ರನ್ ಬಾರಿಸಿ ಮುನ್ನಡೆ ಸಾಧಿಸಿತು. ಮುಂಬೈ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದ್ದು, 25 ಓವರ್‌ಗೆ 4 ವಿಕೆಟ್ ಕಳೆದು 49 ರನ್ ಗಳಿಸಿತ್ತು.

ಮುಂಬೈ ಆರಂಭಿಕ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ 2, ವಿ ಕೌಶಿಕ್ 3, ರೋನಿತ್ ಮೋರೆ 2, ಪ್ರತೀಕ್ ಜೈನ್ 2, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು. ಕರ್ನಾಟಕ ಇನ್ನಿಂಗ್ಸ್‌ನಲ್ಲಿ ಮುಂಬೈಯ ತುಷಾರ್ ದೇಶಪಾಂಡೆ, ರಾಯ್ಸ್ಟನ್ ಡಯಾಸ್ ತಲಾ 1, ಶಶಾಂಕ್ ಅಥರ್ಡೆ 5, ಶಮ್ಸ್ ಮಲಾನಿ 3 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Saturday, January 4, 2020, 15:52 [IST]
Other articles published on Jan 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+