
ಟಾಸ್ ಗೆದ್ದ ಮುಂಬೈಗೆ ಸರ್ಫರಾಜ್ ಆಸರೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು. ಮುಂಬೈ ತಂಡದ ಪರವಾಗಿ ಮಧ್ಯಮ ಕ್ರಮಾಂಕದ ಆಟಗಾರ ಸರ್ಫರಾಜ್ ಖಾನ್ ಭರ್ಜರಿ ಶತಕ ಹಾಗೂ ಯಶಸ್ವಿ ಜೈಸ್ವಾಲ್ 78 ರನ್‌ಗಳ ಕೊಡುಗೆ ನೀಡಿದರು. ಇದರ ಪರಿಣಾಮವಾಗಿ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 374 ರನ್‌ಗಳಿಸಿ ಆಲೌಟ್ ಆಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಎಂಪಿ
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಮಧ್ಯಪ್ರದೇಶ ತಂಡ ಅಮೋಘ ಪ್ರದರ್ಶನ ನೀಡಿತು. ತಂಡದ ಮೂವರು ಆಟಗಾರರು ಶತಕ ಸಿಡಿಸುವ ಮೂಲಕ ತಂಡಕ್ಕೆ ಮೇಲುಗೈ ಒದಗಿಸಿದರು. ಆರಂಬಿಕ ಆಟಗಾರ ಯಶ್ ದುಬೆ 133 ರನ್‌ಗಳಿಸಿದರೆ ಶುಭಮ್ ಶರ್ಮಾ 116 ರನ್‌ಗಳ ಕೊಡುಗೆ ನೀಡಿದರು. ರಜತ್ ಪಾಟಿದಾರ್ 122 ರನ್‌ಗಳನ್ನು ಗಳಿಸಿದ್ದಾರೆ. ಕೆಳ ಕ್ರಮಾಂಕದ ಆಟಗಾರ ಶರಣ್ಶ್ ಜೈಜ್ ಕೂಡ ಅರ್ಧ ಶತಕದ ಕೊಡುಗೆ ನೀಡುವ ಮೂಲಕ ಬೃಜತ್ ಮೊತ್ತಕ್ಕೆ ಕಾರಣವಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಎಂಪಿ ಪಡೆ 536 ರನ್‌ಗಳನ್ನು ಗಳಿಸಿ ನಿರ್ಣಾಯಕ 162 ರನ್‌ಗಳ ಮುನ್ನಡೆ ಪಡೆಯಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ ಸಂಪೂರ್ಣ ವಿಫಲ
ಇನ್ನು ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ಭಾರಿ ಒತ್ತಡದಲ್ಲಿದ್ದದ್ದು ಸ್ಪಷ್ಟವಾಗಿತ್ತು. ಇದು ತಂಡದ ಬ್ಯಾಟಿಂಗ್ ಮೇಲೆಯೂ ಪರಿಣಾಮ ಬಿತ್ತು. ಸುವೇದ್ ಪಾರ್ಕ್ರ ಮಾತ್ರವೇ ಅರ್ಧ ಶತಕ ಬಾರಿಸಲು ಸಫಲವಾದರು. ಉಳಿದಂತೆ ಸರ್ಫರಾಜ್ ಖಾನ್ 45 ರನ್‌ಗಳಿಸಿದರೆ ಪೃಥ್ವಿ ಶಾ 44 ರನ್‌ಗಳ ಕೊಡುಗೆ ನೀಡಿದರು. ಮುಂಬೈ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 269 ರನ್‌ಗಳಿಸಲಷ್ಟೇ ಶಕ್ತವಾಯಿತು.

ಸುಲಭ ಸವಾಲು ಪಡೆದ ಮಧ್ಯಪ್ರದೇಶ
ಮುಂಬೈ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾದ ಕಾರಣ ಎರಡನೇ ಇನ್ನಿಂಗ್ಸ್‌ನಲ್ಲಿ ಮಧ್ಯಪ್ರದೇಶ ತಂಡ ಸುಲಭ ಸವಾಲು ಪಡೆದುಕೊಂಡಿತು. ಕೇವಲ 108 ರನ್‌ಗಳನ್ನು ಗಳಿಸುವ ಸವಾಲು ಮಧ್ಯಪ್ರದೇಶ ತಂಡದ ಮುಂದಿತ್ತು. ಇದನ್ನು ನಾಲ್ಕು ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ತಲುಪಿದೆ ಮಧ್ಯಪ್ರದೇಶ. ಈ ಮೂಲಕ ರಣಜಿ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಧ್ಯಪ್ರದೇಶ ಚಾಂಪಿಯನ್ ಪಟ್ಟಕ್ಕೇರಿದಂತಾಗಿದೆ.

ಆಡುವ ಬಳಗ
ಮಧ್ಯಪ್ರದೇಶ: ಯಶ್ ದುಬೆ, ಹಿಮಾಂಶು ಮಂತ್ರಿ (ವಿಕೆಟ್ ಕೀಪರ್), ಶುಭಂ ಎಸ್ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ (ನಾಯಕ), ಅಕ್ಷತ್ ರಘುವಂಶಿ, ಪಾರ್ಥ್ ಸಹಾನಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಗೌರವ್ ಯಾದವ್
ಬೆಂಚ್: ಮಿಹಿರ್ ಹಿರ್ವಾನಿ, ಕುಲದೀಪ್ ಸೇನ್, ರಾಕೇಶ್ ಠಾಕೂರ್, ಪುನೀತ್ ಡೇಟಿ, ಅಂಕಿತ್ ಶರ್ಮಾ,
ಮುಂಬೈ: ವಿಕ್ರಾಂತ್ ಭಡೋರಿಯಾ, ರಾಹುಲ್ ಬಾಥಮ್, ಹರ್ಷ್ ಗಾವ್ಲಿ, ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸುವೇದ್ ಪರ್ಕರ್, ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ
ಬೆಂಚ್: ರಾಯ್ಸ್ಟನ್ ಡಯಾಸ್, ಸಾಯಿರಾಜ್ ಪಾಟೀಲ್, ಧ್ರುಮಿಲ್ ಮಟ್ಕರ್, ಆಕರ್ಷಿತ್ ಗೋಮೆಲ್, ಸಿದ್ಧಾರ್ಥ್ ರಾವುತ್, ಶಶಾಂಕ್ ಅತ್ತಾರ್ಡೆ, ಅಮನ್ ಹಕೀಮ್ ಖಾನ್, ಮುಶೀರ್ ಖಾನ್, ಪ್ರಸಾದ್ ಪವಾರ್


Click it and Unblock the Notifications












