Karnataka Ranji Team: ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಪ್ರಕಟ: ಯಾರಿಗೆಲ್ಲಾ ಸ್ಥಾನ?

ರಣಜಿ ಟ್ರೋಫಿಯ ಆರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು ಈ ಮಹತ್ವದ ಟೂರ್ನಿಯಲ್ಲಿ ಆಡಲು ಕರ್ನಾಟಕ ತಂಡ ಸಜ್ಜಾಗಿದೆ. ಈ ಬಾರಿ ಎರಡು ಹಂತದಲ್ಲಿ ನಡೆಯಲಿರುವ ರಣಜಿ ಟೂರ್ನಿಯಲ್ಲಿ ಮೊದಲಾರ್ಧ ಫೆಬ್ರವರಿ 10 ರಿಂದ ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಮಾರ್ಚ್ 15ರ ವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು ನಂತರ ನಾಕೌಟ್ ಪಂದ್ಯಗಳು ಐಪಿಎಲ್ ನಂತರ ಆರಂಭವಾಗಲಿದೆ.
ಇನ್ನು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಕರ್ನಾಟಕ ತಂಡದ 20 ಸದಸ್ಯರ ಬಳಗವನ್ನು ಕೆಎಸ್‌ಸಿಎ ಪ್ರಕಟಿಸಿದೆ. ಈ ಟೂರ್ನಿಯಲ್ಲಿ ಮನೀಶ್ ಪಾಂಡೆ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಸಮರ್ಥ್ ಆರ್ ತಂಡದ ಉಪ ನಾಯಕನಾಗಿ ನೇಮಕವಾಗಿದ್ದಾರೆ. ಕೊರೊನಾವೈರಸ್ ಕಾರಣದಿಂದಾಗಿ ಕಳೆದ ವರ್ಷದ ರಣಜಿ ಟೂರ್ನಿ ರದ್ದಾಗಿತ್ತು. ಹೀಗಾಗಿ ಎರಡು ವರ್ಷಗಳ ನಂತರ ದೇಶೀಯ ಕ್ರಿಕೆಟ್‌ನ ಸುದೀರ್ಘ ಮಾದರಿಯ ಟೂರ್ನಿಯಲ್ಲಿ ಕಣಕ್ಕಿಳಿಯಲು ಮನೀಶ್ ಪಾಂಡೆ ಸರ್ವ ಸನ್ನಧವಾಗಿದೆ.
ಕರ್ನಾಟಕ ಸ್ಕ್ವಾಡ್ ಹೀಗಿದೆ: ಮನೀಶ್ ಪಾಂಡೆ(ನಾಯಕ) ಸಮರ್ಥ್ ಆರ್(ಉಪ ನಾಯಕ), ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಸಿದ್ಧಾರ್ಥ್ ಕೆವಿ, ನಿಶ್ಚಲ್ ಡಿ, ಅನೀಶ್ವರ್ ಗೌತಮ್, ಶುಭಂಗ್ ಹೆಗ್ಡೆ, ಕೆ ಗೌತಮ್, ಶ್ರೇಯಸ್ ಗೋಪಾಲ್, ಸುಚಿತ್ ಜೆ, ಕೆಸಿ ಕರಿಯಪ್ಪ, ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ಶರತ್ ಬಿಆರ್ (ವಿಕೆಟ್ ಕೀಪರ್), ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ವೆಂಕಟೇಶ್ ಎಂ, ವೈಶಾಕ್ ವಿ, ವಿದ್ಯಾಧರ್ ಪಾಟೀಲ್
ರಣಜಿ ಟೂರ್ನಿಯಲ್ಲಿ ಭಾಗಿಯಾಗಿವ ತಂಡಗಳನ್ನ ಎ, ಬಿ, ಸಿ, ಡಿ, ಇ, ಎಫ್, ಜಿ, ಎಚ್ ಎಲೈಟ್ ಗ್ರೂಪ್‌ಗಳಾಗಿ ತಂಡಗಳನ್ನ ವಿಂಗಡಿಸಲಾಗಿದೆ. ಅವು ಈ ಕೆಳಗಿನಂತಿದೆ
ಎಲೈಟ್ ಗ್ರೂಪ್ ಎ: ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಮೇಘಾಲಯ (ಪಂದ್ಯಗಳು ರಾಜ್‌ಕೋಟ್‌ನಲ್ಲಿ ನಡೆಯಲಿವೆ)
ಎಲೈಟ್ ಗ್ರೂಪ್ ಬಿ: ಬಂಗಾಳ, ಬರೋಡಾ, ಹೈದರಾಬಾದ್, ಚಂಡೀಗಢ (ಪಂದ್ಯಗಳು ಕಟಕ್‌ನಲ್ಲಿ ನಡೆಯಲಿವೆ)
ಎಲೈಟ್ ಗ್ರೂಪ್ ಸಿ: ಕರ್ನಾಟಕ, ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ, ಪಾಂಡಿಚೇರಿ (ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ)
ಎಲೈಟ್ ಗುಂಪು ಡಿ: ಸೌರಾಷ್ಟ್ರ, ಮುಂಬೈ, ಒಡಿಶಾ, ಗೋವಾ (ಅಹಮದಾಬಾದ್‌ನಲ್ಲಿ ಪಂದ್ಯಗಳು)
ಎಲೈಟ್ ಗುಂಪು ಇ: ಆಂಧ್ರ ಪ್ರದೇಶ, ರಾಜಸ್ಥಾನ, ಸೇವೆಗಳು, ಮತ್ತು ಉತ್ತರಾಖಂಡ
ಎಲೈಟ್ ಗುಂಪು ಎಫ್: ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ತ್ರಿಪುರಾ
ಎಲೈಟ್ ಗುಂಪು ಜಿ: ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಅಸ್ಸಾಂ
ಎಲೈಟ್ ಗುಂಪು ಎಚ್: ದೆಹಲಿ, ತಮಿಳುನಾಡು , ಜಾರ್ಖಂಡ್, ಮತ್ತು ಛತ್ತೀಸ್‌ಗಢ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications